ಬಾಂಗ್ಲಾ ಬೆಂಡೆತ್ತಲು ಭಾರತ ರೆಡಿ – KL ರಾಹುಲ್ ಗೆ ಯಾವ ಸ್ಲಾಟ್?

ಬಾಂಗ್ಲಾ ಬೆಂಡೆತ್ತಲು ಭಾರತ ರೆಡಿ – KL ರಾಹುಲ್ ಗೆ ಯಾವ ಸ್ಲಾಟ್?

ಪಾಕಿಸ್ತಾನ ಬರೋಬ್ಬರಿ 3 ದಶಕದ ಬಳಿಕ ಐಸಿಸಿ ಟೂರ್ನಿ ಆಯೋಜಿಸಿದೆ. ಪಾಕಿಸ್ತಾನದಲ್ಲಿ ಕೊನೆಯ ಬಾರಿಗೆ ಐಸಿಸಿ ಟೂರ್ನಿ ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜೊತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು. ಆ ನಂತ್ರ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ ವೇದಿಕೆಯಾಗಿದೆ. ಭದ್ರತೆ ಕಾರಣದಿಂದ ತನ್ನೆಲ್ಲಾ ಪಂದ್ಯಗಳನ್ನ ದುಬೈನಲ್ಲಿ ಆಡಲಿರೋ ಭಾರತ ಗುರುವಾರ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನ ಎದುರಿಸಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಕೆಲವೊಂದಷ್ಟು ಚೇಂಜಸ್ ಮಾಡ್ಲಾಗುತ್ತೆ. ಫೆಬ್ರವರಿ 20 ರಂದು ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡೋಕೆ ಟೀಂ ಇಂಡಿಯಾ ಕೂಡ ಕಾಯ್ತಿದೆ.

ಇದನ್ನೂ ಓದಿ :  ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಪಂದ್ಯ – ಪ್ಲೇಯಿಂಗ್ 11 ಹೇಗಿರಲಿದೆ?

ಸದ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರೋ ಟೀಂ ಇಂಡಿಯಾ ಆಟಗಾರರು  ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ನಿರೀಕ್ಷೆಗಳೂ ಜಾಸ್ತಿಯಾಗಿವೆ. ಭಾರತವೇ ಟ್ರೋಫಿ ಗೆಲ್ಲುವ ಹಾಟ್ ಫೆವರೀಟ್‌ ಟೀಂ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಆಂಗ್ಲರನ್ನ ಸದೆ ಬಡಿದ ಪ್ಲೇಯಿಂಗ್ 11 ಆಟಗಾರರನ್ನೇ ಕಣಕ್ಕಿಳಿಸಲು ಪ್ಲ್ಯಾನ್ ನಡೀತಿದೆ.  ರೋಹಿತ್ ಶರ್ಮಾ, ಶುಭಮನ್‌ ಗಿಲ್‌ ಇಲ್ಲೂ ಕೂಡ ಓಪನರ್ಸ್ ಆಗಿ ಆಡಲಿದ್ದಾರೆ. ಉಳಿದಂತೆ ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಸಹ ಮಿಡ್ಲ್ ಆರ್ಡರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಅವರಿಗೆ 5ನೇ ಸ್ಲಾಟ್​​ನಲ್ಲಿ ಆಡಿಸಬಹುದು. ಆಲ್‌ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾಗೆ ಚಾನ್ಸ್ ಸಿಗಬಹುದು.  ಇನ್ನು ವರುಣ್‌ ಚಕ್ರವರ್ತಿ, ಕುಲದೀಪ್ ಯಾದವ್ ಒಂದೇ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಹಾಗೂ ಅರ್ಷದೀಪ್‌ ಸಿಂಗ್‌ ಕಾಣಿಸಿಕೊಳ್ಳಬಹುದು. ದುಬೈನ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ಕೊಂಚ ನೆರವಾಗುವ ಸಾಧ್ಯತೆ ಇದೆ.

ಭಾರತ ಮತ್ತು ಬಾಂಗ್ಲಾ ಮ್ಯಾಚ್ ಅಂತಾ ಬಂದಾಗ ಭಾರತವೇ ಬಲಿಷ್ಠ ಅನ್ನೋದು ಸಾಕಷ್ಟು ಸಲ ಪ್ರೂವ್ ಆಗಿದೆ. ಏಕದಿನ ಮಾದರಿಯಲ್ಲೂಟ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಪರಸ್ಪರ 41 ODI ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತವು ಆ ಪಂದ್ಯಗಳಲ್ಲಿ ಸುಮಾರು 80ರಷ್ಟು  ಗೆದ್ದಿದೆ. ಇದುವರೆಗೆ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಒಟ್ಟು 41 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 32 ODI ಪಂದ್ಯಗಳನ್ನು ಗೆದ್ದಿದೆ. ಬಟ್ ಬಾಂಗ್ಲಾದೇಶವು ಇಲ್ಲಿಯವರೆಗೆ ಮೆನ್ ಇನ್ ಬ್ಲೂ ವಿರುದ್ಧ ಕೇವಲ 8 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಹಾಗೇ ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ದುಬೈನಲ್ಲಿ ಪರಸ್ಪರ ಎರಡು ODI ಪಂದ್ಯಗಳನ್ನು ಆಡಿವೆ. 2018 ರ ಏಷ್ಯಾ ಕಪ್‌ನಲ್ಲಿ ಭಾರತ ಎರಡೂ ಪಂದ್ಯಗಳನ್ನು ಗೆದ್ದಿತ್ತು.

ಬಾಂಗ್ಲಾ ಟೀಂ ನಮಗೆ ವೀಕ್ ಆಗಿ ಕಾಣಿಸಿದ್ರೂ ಕೂಡ ಅವ್ರನ್ನ ಅಷ್ಟು ಈಸಿಯಾಗಿ ತಗೊಳ್ಳೋಕೆ ಆಗೋದಿಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ಸ್ ಕಳೆದ 5 ಪಂದ್ಯಗಳು.  IND vs BAN ಪೈಪೋಟಿಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದರೂ, ಇತ್ತೀಚಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಏಕದಿನ ಮಾದರಿಯ ಪಂದ್ಯಗಳಲ್ಲಿ, ಬಾಂಗ್ಲಾದೇಶ 3 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 2 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ದುಬೈನಲ್ಲಿ ನಡೆಯಲಿರೋ ಬುಧವಾರದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಉಭಯ ದೇಶಗಳ ಏಕದಿನ ಮಾದರಿಯ ಹಣಾಹಣೀ ನೋಡಿದಾಗ  ಬಾಂಗ್ಲಾ ವಿರುದ್ಧ ಅತೀ ಹೆಚ್ಚು ಸ್ಕೋರ್ ಮಾಡಿರೋ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಭಾರತದ ಮಾಜಿ ನಾಯಕ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಇದುವರೆಗೆ 16 ODI ಪಂದ್ಯಗಳನ್ನ ಆಡಿದ್ದು, 910 ರನ್ ಗಳಿಸಿದ್ದಾರೆ. 50 ಓವರ್‌ಗಳ ಮಾದರಿಯಲ್ಲಿ ಬಾಂಗ್ಲಾದೇಶ ವಿರುದ್ಧ 5 ಶತಕಗಳು ಮತ್ತು 3 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಕೊಹ್ಲಿ ಅಬ್ಬರಿಸೋ ನಿರೀಕ್ಷೆ ಇದೆ. ಮತ್ತೊಂದೆಡೆ ಬಾಂಗ್ಲಾದೇಶದ ಪರವಾಗಿ, ಈ ದಾಖಲೆಯನ್ನು ಅವರ ಮಾಜಿ ನಾಯಕ ಶಕೀಬ್ ಅಲ್ ಹಸನ್ ಹೊಂದಿದ್ದಾರೆ. ಅನುಭವಿ ಆಲ್‌ರೌಂಡರ್ ಭಾರತದ ವಿರುದ್ಧ 22 ODI ಪಂದ್ಯಗಳನ್ನು ಆಡಿದ್ದು, ಒಂಬತ್ತು ಅರ್ಧಶತಕಗಳ ಸಹಾಯದಿಂದ 751 ರನ್ ಗಳಿಸಿದ್ದಾರೆ. ಇನ್ನು ಬೌಲರ್​ಗಳ ವಿಚಾರಕ್ಕೆ ಬರೋದಾದ್ರೆ ಭಾರತ vs ಬಾಂಗ್ಲಾದೇಶ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಶಕೀಬ್ ಹೆಸರಿನಲ್ಲಿದೆ. ಇದುವರೆಗೆ ಭಾರತದ ವಿರುದ್ಧ ಆಡಿರುವ 22 ಏಕದಿನ ಪಂದ್ಯಗಳಲ್ಲಿ, ಬಾಂಗ್ಲಾದೇಶದ ಏಸ್ 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ಪರ, ಈ ದಾಖಲೆ ಮಾಜಿ ಬೌಲರ್ ಅಜಿತ್ ಅಗರ್ಕರ್ ಹೆಸರಿನಲ್ಲಿದೆ. ಭಾರತದ ಮಾಜಿ ಕ್ರಿಕೆಟಿಗ ಬಾಂಗ್ಲಾ ಟೈಗರ್ಸ್ ವಿರುದ್ಧ 8 ಏಕದಿನ ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Shantha Kumari

Leave a Reply

Your email address will not be published. Required fields are marked *