19ರ ಹುಡುಗನ ಜೊತೆ ಕೊಹ್ಲಿ ಕಿರಿಕ್ – ಗುದ್ದಿದ್ದಕ್ಕೆ ಬ್ಯಾನ್ ಮಾಡುತ್ತಾ ಐಸಿಸಿ?
ವಿರಾಟ್ ಹೀಗೇಕೆ ಆಡ್ತಾರೆ?
ಮೆಲ್ಬೋರ್ನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಫೈಟ್ ಶುರುವಾಗಿದ್ದು, ಟಾಸ್ ಗೆದ್ದಂತ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡ್ಕೊಳ್ತು. ನಿರೀಕ್ಷೆಯಂತೆಯೇ ಕಾಂಗರೂಪಡೆಯ ಟಾಪ್ ಆರ್ಡರ್ ಬ್ಯಾಟರ್ಸ್ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿದ್ರು. ಒಂದ್ಕಡೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಹಿಗ್ಗಾಮುಗ್ಗಾ ಚಚ್ಚಿಸಿಕೊಳ್ತಿದ್ರೆ ಮತ್ತೊಂದ್ಕಡೆ ವಿರಾಟ್ ಕೊಹ್ಲಿ ಇರಲಾರದೆ ಇರುವೆ ಬಿಟ್ಕೊಂಡಿದ್ದಾರೆ. ಬೇಕಂತಲೇ ಆಸ್ಟ್ರೇಲಿಯಾ ಆಟಗಾರನನ್ನ ಕೆಣಕಿ ವಿಶ್ವಕ್ರಿಕೆಟ್ನ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿ ಮಾಡಿಕೊಂಡ ಎಡವಟ್ಟೇನು? ಬ್ಯಾನ್ ಟ್ರೆಂಡ್ ಶುರುವಾಗಿದ್ದೇಕೆ? ಸ್ಲೆಡ್ಜಿಂಗ್ ಎಫೆಕ್ಟ್ ಏನಾಗುತ್ತೆ? ಬುಮ್ರಾ ಬೌಲಿಂಗ್ನಲ್ಲೂ ಆಸಿಸ್ ಬ್ಯಾಟರ್ಸ್ ಅಬ್ಬರ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಫೈರ್ ಬ್ರ್ಯಾಂಡ್ ಈಗ ಅಳುಮುಂಜಿ.. – ಬಿಗ್ ಬಾಸ್ ನಲ್ಲಿ ಚೈತ್ರಾ ಟಾರ್ಗೆಟ್ – ವೇಸ್ಟ್ ಎನಿಸಿಕೊಂಡ್ರಾ ಚೈತ್ರಾ ಕುಂದಾಪುರ?
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ಪಾಲಿಗೆ ತುಂಬಾನೇ ನಿರ್ಣಾಯಕ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಯಾರಿಗೆ ಅನ್ನೋದು ಬಹುತೇಕ ಕನ್ಫರ್ಮ್ ಆಗುತ್ತೆ. ಬಟ್ ಪಂದ್ಯ ಶುರುವಾಗ್ತಿದ್ದಂತೆಯೇ ಆಸ್ಟ್ರೇಲಿಯಾ ಬ್ಯಾಟರ್ಸ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ಪರ ಮೊದಲ ಬಾರಿಗೆ ಡೆಬ್ಯು ಮಾಡಿದಂತ 19 ವರ್ಷದ ಪ್ಲೇಯರ್ ಸ್ಯಾಮ್ ಕಾನ್ಸ್ಸ್ಟಸ್ ಟೀಂ ಇಂಡಿಯಾವನ್ನ ಬೆಂಡೆತ್ತಿದ್ದಾರೆ. ಈತನ ಅಬ್ಬರ ನೋಡಿ ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಶಹಬ್ಬಾಸ್ ಹೇಳ್ತಿದ್ರೆ ವಿರಾಟ್ ಕೊಹ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಕಾಲು ಕೆರೆದುಕೊಂಡು ಜಗಳ ಮಾಡಿ ಟ್ರೋಲ್ ಆಗ್ತಿದ್ದಾರೆ.
ಬೇಕಂತಲೇ ಭುಜಕ್ಕೆ ಗುದ್ದಿ ಜಗಳ ಮಾಡಿದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಅಂದ್ರೆ ರನ್ ಮಷಿನ್ ಅಂತಾ ಇಡೀ ಜಗತ್ತೇ ಹೇಳುತ್ತೆ. ವಿರಾಟ್ ಕೂಡ ಅಗ್ರೆಸ್ಸಿವ್ ಌಟಿಟ್ಯೂಡ್ನಿಂದಲೇ ಎಲ್ರಿಗೂ ಇಷ್ಟ ಆಗ್ತಾರೆ. ಬಟ್ ಇವತ್ತಿನ ಬಿಹೇವಿಯರ್ ತುಂಬಾ ಜನ್ರಿಗೆ ಸಿಟ್ಟು ತಂದಿದೆ. ತಾಳ್ಮೆ ಕಳೆದುಕೊಂಡು ಸ್ಯಾಮ್ಗೆ ಗುದ್ದುವ ಮೂಲಕ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಸ್ಯಾಮ್ 38 ಎಸೆತಗಳಲ್ಲಿ 27 ರನ್ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಅವರ ಭುಜಕ್ಕೆ ಕೊಹ್ಲಿ ಗುದ್ದಿದ್ದಾರೆ. ಆ ವಿಡಿಯೋ ನೋಡಿದ್ರೆ ಕೊಹ್ಲಿ ಬೇಕಂತಲೇ ಡಿಕ್ಕಿ ಹೊಡೆದಿರೋದು ಸ್ಪಷ್ಟವಾಗಿ ಕಾಣುತ್ತೆ. ಈ ವೇಳೆ ಸ್ಯಾಮ್ ಕೂಡ ತಿರುಗಿ ಗುರಾಯಿಸಿ ಕೊಹ್ಲಿಯೊಂದಿಗೆ ಆರ್ಗ್ಯೂ ಮಾಡಿದ್ದಾರೆ. ಕೊಹ್ಲಿ ಮತ್ತು ಸ್ಯಾಮ್ ವಾಗ್ವಾದ ಹೆಚ್ಚಾಗುತ್ತಲೇ ಉಸ್ಮಾನ್ ಖವಾಜಾ ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನ ತಡೆದಿದ್ದಾರೆ. ಆಸೀಸ್ ನ ಮೊದಲ ಇನಿಂಗ್ಸ್ ನ 10ನೇ ಓವರ್ ಬಳಿಕ ಈ ಘಟನೆ ನಡೆದಿದೆ. ಯಾವಾಗ ಕೊಹ್ಲಿ ವರ್ತನೆಯಿಂದ ಸ್ಯಾಮ್ ಟ್ರಿಗರ್ ಆದ್ರೋ ಮತ್ತಷ್ಟು ಸ್ಫೋಟಕವಾಗಿ ಬ್ಯಾಟಿಂಗ್ ಮಾಡಿದ್ರು. ನೆಕ್ಸ್ಟ್ ಓವರ್ ನಲ್ಲೇ ಹಿಗ್ಗಾಮುಗ್ಗಾ ಚಚ್ಚಿದ್ರು.
ಬುಮ್ರಾಗೆ ಒಂದೇ ಓವರ್ ನಲ್ಲಿ 18 ರನ್ ಚಚ್ಚಿದ ಸ್ಯಾಮ್!
ಜಸ್ಪ್ರೀತ್ ಬುಮ್ರಾ ಅಂದ್ರೆ ಸದ್ಯ ವಿಶ್ವಕ್ರಿಕೆಟ್ನಲ್ಲೇ ಬೆಸ್ಟ್ ಬೌಲರ್ ಅಂತಾ ಹೊಗಳಿಸಿಕೊಳ್ತಿರೋ ಆಟಗಾರ. ಬಟ್ ಇವತ್ತಿನ ಮ್ಯಾಚ್ನಲ್ಲಿ ಬುಮ್ರಾ ಬೌಲಿಂಗ್ನಲ್ಲೂ ಫೋರ್, ಸಿಕ್ಸರ್ ಗಳ ಅಬ್ಬರ ಜೋರಾಗಿತ್ತು. ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಟೆಸ್ಟ್ ಕೆರಿಯರ್ ಶುರು ಮಾಡಿದ ಸ್ಯಾಮ್ ಕೆಲವೇ ಕ್ಷಣಗಳಲ್ಲಿ ತಂಡದ ಸ್ಕೋರ್ ಅನ್ನು 50ರ ಗಡಿ ದಾಟಿಸಿದ್ರು. ಅದ್ರಲ್ಲೂ ಜಸ್ಪ್ರೀತ್ ಬುಮ್ರಾ ಎಸೆದ 11ನೇ ಓವರ್ನಲ್ಲಿ ಬರೋಬ್ಬರಿ 18 ರನ್ ಚಚ್ಚಿದ್ದರು. ಈ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಸ್ಯಾಮ್ 2ನೇ ಎಸೆತದಲ್ಲಿ ಯಾವುದೇ ರನ್ ಬರ್ಲಿಲ್ಲ. ಮೂರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಇನ್ನು ನಾಲ್ಕನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು. ಆರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 60 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿಗೆ ಡಿಮ್ಯಾಂಡ್!
ಇನ್ನು ಸ್ಯಾಮ್ ಜೊತೆ ಕೊಹ್ಲಿ ನಡೆದುಕೊಂಡ ವರ್ತನೆಯ ಬಗ್ಗೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದರು. ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕಾನ್‌ಸ್ಟಾಸ್‌ಗೆ ಹೊಡೆದಿದ್ದಾರೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿಗೆ ಡಿಮ್ಯಾಂಡ್ ಮಾಡಿದ್ದಾರೆ. ಈ ಇನ್ಸಿಡೆಂಟ್ ನಡೆದ ಟೈಮಲ್ಲಿ ಕಾಮೆಂಟರಿ ಮಾಡುತ್ತಿದ್ದ ಪಾಂಟಿಂಗ್, ರೀಪ್ಲೇಗಳನ್ನು ನೋಡಿದರೆ ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕಾನ್‌ಸ್ಟಾಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ವಿರಾಟ್ ಕೊಹ್ಲಿ ನಡೆದುಕೊಳ್ಳುವ ರೀತಿ ನೋಡಿ. ಅವರು ಪಿಚ್‌ನ ಬಲಭಾಗದಲ್ಲಿ ನಡೆದು ಬ್ಯಾಟರ್ನನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಟರ್ಗೆ ತನ್ನ ಎದುರಿಗೆ ಯಾರಿದ್ದಾರೆ ಎನ್ನುವುದು ತಿಳಿದಿಲ್ಲ. ಆದರೆ ಬ್ಯಾಟರ್ ಯಾವ ಕಡೆ ಹೋಗುತ್ತಾರೆ ಎನ್ನುವುದು ಎಲ್ಲಾ ಫೀಲ್ಡರ್ಗೂ ತಿಳಿದಿರುತ್ತದೆ. ಇದರಲ್ಲಿ ಕೊಹ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಒಂದು ಪಂದ್ಯದಿಂದ ನಿಷೇಧವಾಗ್ತಾರಾ ವಿರಾಟ್ ಕೊಹ್ಲಿ?
ಐಸಿಸಿ ನಿಯಮಗಳ ಪ್ರಕಾರ, ಎದುರಾಳಿ ಆಟಗಾರನನ್ನು ಉದ್ದೇಶಪೂರ್ವಕವಾಗಿ ಫಿಸಿಕಲಿ ಟಚ್ ಮಾಡೋದು ಗಂಭೀರ ಅಪರಾಧ. ಐಸಿಸಿ ನಿಯಮದ ಲೆವೆಲ್ 2 ಅಪರಾಧವಾಗಿದ್ದು, ಇದಕ್ಕೆ ಕಠಿಣ ದಂಡ ವಿಧಿಸಲಾಗುತ್ತೆ. ಬಟ್ ಕೊಹ್ಲಿ ನಿಯಮಗಳನ್ನ ಬ್ರೇಕ್ ಮಾಡಿದ್ದಾರೆ ಅಂತಾ ಫೀಲ್ಡ್ ಅಂಪೈರ್ ಮ್ಯಾಚ್ ರೆಫರಿಗೆ ದೂರು ನೀಡಬೇಕಾಗುತ್ತೆ. ತನಿಖೆ ನಡೆಸಿದ ಬಳಿಕ ಮ್ಯಾಚ್ ರೆಫರಿ ಅಂತಿಮ ನಿರ್ಧಾರ ಕೈಗೊಳ್ತಾರೆ. 2ನೇ ಹಂತದ ಅಪರಾಧ ಎಂದು ಪರಿಗಣಿಸಿದರೆ 3 ರಿಂದ 4 ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ. ಇದರಿಂದ ಪಂದ್ಯದ ಶುಲ್ಕದ ಶೇ. 50ರಿಂದ 100ರಷ್ಟು ಮತ್ತು ಒಂದು ಪಂದ್ಯದಿಂದ ನಿಷೇಧವಾಗೋ ಚಾನ್ಸಸ್ ಇರುತ್ತೆ. ವಿಚಾರಣೆ ವೇಳೆ ಕೊಹ್ಲಿ ಅಥವಾ ಕಾನ್ಸ್ಟಾಸ್ ಲೆವೆಲ್ ಸೆಕೆಂಡ್ ಅಪರಾಧ ಎಸಗಿದ್ದರೆ, ಹೊಸ ವರ್ಷದಲ್ಲಿ ನಡೆಯುವ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಕೊಹ್ಲಿ ನನ್ನ ಆಲ್ ಟೈಂ ಫೇವರೆಟ್ ಪ್ಲೇಯರ್ ಎಂದಿದ್ದ ಸ್ಯಾಮ್!
ಈ ಇನ್ಸಿಡೆಂಟ್ ಆದ್ಮೇಲೆ ಸ್ಯಾಮ್ ಅವ್ರ ಹಳೇ ವಿಡಿಯೋವೊಂದು ವೈರಲ್ ಆಗ್ತಿದೆ. ಅದು ಏನಪ್ಪ ಅಂದ್ರೆ ಅಂಡರ್ 19 ಕ್ರಿಕೆಟ್ ವೇಳೆ ನಿಮ್ಮ ಫೇವರೆಟ್ ಆಟಗಾರ ಯಾರು ಅಂತಾ ಸಂದರ್ಶಕರು ಪ್ರಶ್ನೆ ಮಾಡಿದ್ದ ವೇಳೆ ನಿಮ್ಮ ಫೇವರೆಟ್ ಕ್ರಿಕೆಟ್ ಪ್ಲೇಯರ್ ಯಾರು ಅಂತಾ ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿಯನ್ನು ತಮ್ಮ ಸಾರ್ವಕಾಲಿಕ ನೆಚ್ಚಿನ ಆಟಗಾರ ಎಂದು ಆರಾಧಿಸುವುದಾಗಿ ಹೇಳಿಕೊಂಡಿದ್ರು. ಬಟ್ ಈಗ ಇದೇ ಅಪ್ಪಟ ಅಭಿಮಾನಿ ಜೊತೆ ವಿರಾಟ್ ಕೊಹ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಸ್ಲೆಡ್ಜಿಂಗ್ ನೆಪದಲ್ಲಿ ಸುಖಾಸುಮ್ಮನೆ ಕೆಣಕಿದ್ದಾರೆ.
ಆಟ ಅಂದ್ಮೇಲೆ ಜಗಳ, ವಿವಾದ ಎಲ್ಲಾ ಕಾಮನ್. ಬಟ್ ಕ್ರಿಕೆಟ್ ನ ಜಂಟಲ್ ಮೆನ್ ಗೇಮ್ಸ್ ಅಂತಾರೆ. ಸೋ ಅಲ್ಲಿ ಸ್ಲೆಡ್ಜಿಂಗ್ ಇದ್ರೂ ಕೂಡ ಆನ್ ದಿ ಸ್ಪಾಟ್ ಟ್ರಿಗರ್ ಆಗಿ ಬಿಹೇವ್ ಮಾಡಿದ್ರೆ ಓಕೆ. ಬಟ್ ಕೊಹ್ಲಿ ಇಲ್ಲಿ ತಾವೇ ಹೋಗಿ ಸ್ಯಾಮ್ ಭುಜಕ್ಕೆ ಗುದ್ದಿರೋದು ಸ್ಪಷ್ಟವಾಗಿದೆ. ಕಿಂಗ್ ಕೊಹ್ಲಿ ಲೆಜೆಂಡರಿ ಕ್ರಿಕೆಟರ್ ಅನ್ನೋದ್ರಲ್ಲಿ ನಮ್ಮ ಯಾವ ತಕರಾರೂ ಇಲ್ಲ. ಬಟ್ ಈ ಥರದ ಸಿಲ್ಲಿ ವರ್ತನೆಗಳು ಅವ್ರ ತೂಕವನ್ನ ಕಡಿಮೆ ಮಾಡುತ್ತೆ.