ಗಿಲ್ ಗೆ NO LOSS ಚಾಲೆಂಜ್.. ಇಂಡಿಯಾ ಸ್ಟ್ಯಾಂಡರ್ಡ್ ಉಳಿಸ್ತಾರಾ? – AUS ಬಗ್ಗು ಬಡಿಯೋದೇ ಸವಾಲ್

ಗಿಲ್ ಗೆ NO LOSS ಚಾಲೆಂಜ್.. ಇಂಡಿಯಾ ಸ್ಟ್ಯಾಂಡರ್ಡ್ ಉಳಿಸ್ತಾರಾ? – AUS ಬಗ್ಗು ಬಡಿಯೋದೇ ಸವಾಲ್

2025ನೇ ವರ್ಷ ಟೀಂ ಇಂಡಿಯಾ ಪಾಲಿಗೆ ಸಕ್ಸಸ್​ಫುಲ್ ಇಯರ್. ಈ ವರ್ಷ ಪಂದ್ಯಗಳನ್ನ ಸೋತಿರಬಹುದು. ಬಟ್ ಯಾವುದೇ ಸರಣಿಗಳನ್ನಾಗ್ಲಿ ಅಥವಾ ಟೂರ್ನಿಗಳನ್ನಾಗ್ಲಿ ಸೋತೇ ಇಲ್ಲ. ಅದ್ರಲ್ಲೂ ಬಿಗ್ ಇವೆಂಟ್​ಗಳಲ್ಲಿ ನೋ ಲಾಸ್ ಜರ್ನಿಯೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಜೊತೆಗೆ ಕ್ಯಾಪ್ಟನ್ಸಿ, ಟೀಂ ಸೆಲೆಕ್ಷನ್​ನಲ್ಲೂ ಮೇಜರ್ ಸರ್ಜರಿಗಳೇ ಆಗಿವೆ. ಆದ್ರೆ ಈಗ ನಾಯಕನಾಗಿ ಶುಭ್​ಮನ್ ಗಿಲ್​ಗೆ ಅಸಲಿ ಚಾಲೆಂಜ್ ಶುರುವಾಗ್ತಿದೆ. ಏಕದಿನ ತಂಡದ ನಾಯಕನಾಗಿ ಮೊದಲ ಸರಣಿಗೆ ಕಾಲಿಡ್ತಿರೋ ಗಿಲ್​ಗೆ ಆಸ್ಟ್ರೇಲಿಯಾವನ್ನ ಬಗ್ಗು ಬಡಿಯೋದು ಅಷ್ಟು ಈಸಿ ಇಲ್ಲ.

ಇದನ್ನೂ ಓದಿ: ರವೀಂದ್ರ ಜಡೇಜಾ ಹೆಂಡತಿ ರಿವಾಬಾ ಜಡೇಜಾಗೆ ಗುಜರಾತ್ ಸಚಿವ ಸ್ಥಾನ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಬೋಬರ್ 19ರಿಂದ ಶುರುವಾಗುತ್ತೆ. ಪರ್ತ್​ನಲ್ಲಿ ಈ ಪಂದ್ಯ ನಡೆಯಲಿದ್ದು ಭಾರತ ತಂಡದ ಆಟಗಾರರು ಪ್ರಾಕ್ಟೀಸ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸರಣಿ ಮೂಲಕ ಶುಭ್​ಮನ್ ಗಿಲ್ ಮೊದಲ ಬಾರಿಗೆ ಭಾರತದ ಏಕದಿನ ತಂಡವನ್ನು ಲೀಡ್ ಮಾಡ್ತಿದ್ದಾರೆ. ಅದೂ ಅಲ್ದೇ ಗಿಲ್ ನಾಯಕತ್ವದಡಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡ್ತಿರೋದು ಕೂಡ ವಿಶೇಷ. ಆಲ್ರೆಡಿ ಟೆಸ್ಟ್ ಕ್ಯಾಪ್ಟನ್ ಆಗಿ 2 ಸರಣಿಗಳಲ್ಲಿ ಉತ್ತಮವಾಗಿ ಲೀಡ್ ಮಾಡಿರೋ ಗಿಲ್​ಗೆ ಈಗ ವೈಟ್ ಬಾಲ್ ಫಾರ್ಮೆಟ್​ನಲ್ಲಿ ತನ್ನನ್ನ ತಾನು ಪ್ರೂವ್ ಮಾಡಿಕೊಳ್ಬೇಕಿದೆ.

2025ರಲ್ಲಿ ಭಾರತದ ಅದ್ಭುತ ಜರ್ನಿ!

ಹೌದು. 2025ನೇ ವರ್ಷ ಭಾರತಕ್ಕೆ ಸಕ್ಸಸ್​ಫುಲ್ ಇಯರ್ ಆಗಿದೆ. ಅಂದ್ರೆ ಕೆಲ ಪಂದ್ಯಗಳನ್ನ ಸೋತಿದ್ದಾರೆ ನಿಜ. ಬಟ್ ಸರಣಿ ಅಥವಾ ಟೂರ್ನಿಯನ್ನ ಸೋತಿಲ್ಲ. ಜನವರಿ-ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಒಂದು ಪಂದ್ಯವನ್ನಷ್ಟೇ ಸೋತು ಸರಣಿ ಕೈವಶ ಮಾಡ್ಕೊಂಡಿತ್ತು. ಆ ಬಳಿಕ ಫೆಬ್ರವರಿಯಲ್ಲೇ 3 ಪಂದ್ಯಗಳ ಏಕದಿನ ಸರಣಿಯನ್ನ 2-1 ಅಂತರದಲ್ಲಿ ಗೆದ್ಕೊಂಡಿತ್ತು. ಇನ್ನು ಫೆಬ್ರವರಿ ಮಾರ್ಚ್​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇನ್ನು ಮಿಡ್ಲಲ್ಲಿ 3 ತಿಂಗಳು ಐಪಿಎಲ್ ಇದ್ದಿದ್ರಿಂದ ಯಾವುದೇ ಸರಣಿ ಇರ್ಲಿಲ್ಲ. ಆ ಬಳಿಕ ಜೂನ್, ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನ 2-2ರಿಂದ ಡ್ರಾ ಸಾಧಿಸಿತ್ತು. ಇನ್ನು ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ 7 ಪಂದ್ಯಗಳನ್ನ ಆಡಿದ್ದು ಒಂದೂ ಮ್ಯಾಚ್ ಸೋಲದೆ ಚಾಂಪಿಯನ್ಸ್ ಆಗಿದ್ರು. ಌಂಡ್ ಅಕ್ಬೋಬರ್ ಅಂದ್ರೆ ಇದೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದೆ. ಅಂದ್ರೆ ಈ ವರ್ಷದಲ್ಲಿ ಭಾರತ ಯಾವುದೇ ಸರಣೀ ಅಥವಾ ಟೂರ್ನಿಯನ್ನ ಕಳ್ಕೊಂಡಿಲ್ಲ. ಸೋ ಈಗ ಅದೇ ಲೆಗಸಿಯನ್ನ ಕಂಟಿನ್ಯೂ ಮಾಡ್ಬೇಕಾದ ಜವಾಬ್ದಾರಿ ಹೊಸ ನಾಯಕ ಶುಭ್​ಮನ್ ಗಿಲ್ ಮೇಲಿದೆ. ಆಲ್ರೆಡಿ ಟೆಸ್ಟ್ ಕ್ಯಾಪ್ಟನ್ ಆಗಿ ಇಂಗ್ಲೆಂಡ್ ಮತ್ತು ವಿಂಡೀಸ್ ವಿರುದ್ಧ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗ ವೈಟ್​ಬಾಲ್​ನಲ್ಲೂ ತಮ್ಮ ಸಾಮರ್ಥ್ಯವನ್ನ ನಿರೂಪಿಸಬೇಕಿದೆ. ಅದೂ ಅಲ್ದೇ ರೋಹಿತ್ ಮತ್ತು ಕೊಹ್ಲಿ ಟೀಮ್​ನಲ್ಲಿ ಇರೋದೇ ಗಿಲ್​ಗೆ ಬಹುದೊಡ್ಡ ಅಡ್ವಾಂಟೇಜ್!

ರೋ-ಕೊ ಅನುಭವವೇ ಗಿಲ್ ಭವಿಷ್ಯಕ್ಕೆ ದಾರಿ!

ಎಂಎಸ್ ಧೋನಿ ಟೀಂ ಇಂಡಿಯಾ ನಾಯಕನಾದಾಗ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಿವೃತ್ತಿಗೆ ಇನ್ನೂ ಐದು ವರ್ಷಗಳು ಉಳಿದಿದ್ದವು. ಹಾಗೇ ಧೋನಿ ನಾಯಕತ್ವ ಕೊಹ್ಲಿಗಿಂತ ಭಿನ್ನವಾಗಿತ್ತು. ಅದೇ ಕೊಹ್ಲಿಯ ನಾಯಕತ್ವದಲ್ಲಿ ಸ್ಟಂಪ್‌ಗಳ ಹಿಂದೆ ಧೋನಿ ಇದ್ದದ್ದು ಪ್ಲಸ್ ಆಗಿತ್ತು. ಅದೇ ರೀತಿ, ರೋಹಿತ್ ಮತ್ತು ಕೊಹ್ಲಿಯಿಂದ ಮಾರ್ಗದರ್ಶನ ಪಡೆದು ಗಿಲ್ ಹೆಜ್ಜೆ ಇಡ್ಬೋದು. ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವಾಗಲೂ ಮೈದಾನದಲ್ಲಿ ಏನು ಮಾಡಬೇಕು ಏನ್ ಮಾಡಬಾರದು ಅನ್ನೋ ಚರ್ಚೆ ನಡೀತಿರುತ್ತೆ. ನಾಯಕನಾಗಿ ಬೆಳೆಯಲು ಗಿಲ್ ಈ ಇಬ್ಬರು ಲೆಜೆಂಡರ್ಸ್ ಬಳಿ ಸಜೇಷನ್ಸ್ ತಗೊಬೋದು. ಈವನ್ ಆನ್ ಫೀಲ್ಡ್​ನಲ್ಲಿ ಬೌಲಿಂಗ್ ಆಪ್ಷನ್ಸ್ ಬಂದಾಗ್ಲೂ ರೋ-ಕೊ ಎಕ್ಸ್​ಪೀರಿಯನ್ಸ್ ತುಂಬಾನೇ ಮುಖ್ಯ ಆಗುತ್ತೆ. ಇನ್ನು ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತದ ಒಡಿಐ ತಂಡ ಅದ್ಭುತ ಪ್ರದರ್ಶನಗಳನ್ನೇ ನೀಡಿದೆ. 2023 ಏಕದಿನ ವಿಶ್ವಕಪ್​ನಲ್ಲಿ ಅಜೇಯವಾಗಿ ಫಿನಾಲೆ ತಲುಪಿದರಾದ್ರೂ ಫೈನಲ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಇದೊಂದು ಕೊರಗು ರೊಹಿತ್​ರನ್ನ ಕಾಡ್ತಿದೆ. ಬಟ್ 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂದ್ರೆ 50 ಓವರ್​ಗಳ ಟೂರ್ನಿಯಲ್ಲೇ ಅಜೇಯವಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಸೋ ನೆಕ್ಸ್​​ಟ್ 2027ರ ವಿಶ್ವಕಪ್​ಗೆ ಗಿಲ್ ಕ್ಯಾಪ್ಟನ್ ಆಗೋದ್ರಿಂದ ಈಗಿನಿಂದಲೇ ಆ ಸ್ಟ್ಯಾಂಡರ್ಡ್​ನ ಸೆಟ್ ಮಾಡಿಕೊಳ್ತಾ ಹೋಗ್ಬೇಕಿದೆ. ಯಾಕಂದ್ರೆ ನಾಯಕನಾಗಿ ಮೊದಲ ಪಂದ್ಯವೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತದ ಬೆಸ್ಟ್ ಪರ್ಫಾಮೆನ್ಸ್ ಹೇಗಿದೆ ಅನ್ನೋ ವಿವರ ಇಲ್ಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ಅಂದಾಗ ನೆಕ್ ಟು ನೆಕ್ ಫೈಟ್ ಇರುತ್ತೆ. ಭಾರತ 2023 ರಲ್ಲಿ ಇಂದೋರ್‌ನಲ್ಲಿ ತಮ್ಮ ಅತ್ಯಧಿಕ ಸ್ಕೋರ್ 399/5 ಸ್ಕೋರ್ ಗಳಿಸಿದರೆ, 1981 ರಲ್ಲಿ ಸಿಡ್ನಿಯಲ್ಲಿ ಕೇವಲ 63 ರನ್‌ಗಳ ಕನಿಷ್ಠ ಮೊತ್ತವನ್ನು ದಾಖಲಿಸಿತ್ತು. ಇನ್ನು ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 71 ಏಕದಿನ ಪಂದ್ಯಗಳನ್ನ ಆಡಿದ್ದು 3077 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 9 ಶತಕ ಮತ್ತು 15 ಅರ್ಧಶತಕಗಳೊಂದಿಗೆ ಆಸೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೂಡ 15 ಅರ್ಧಶತಕಗಳನ್ನು ಗಳಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (209) ಮತ್ತು ಹೆಚ್ಚಿನ ಸಿಕ್ಸರ್ (88) ದಾಖಲೆಗಳನ್ನು ಹೊಂದಿದ್ದಾರೆ. ರೋಹಿತ್ 2014 ರಲ್ಲಿ ಒಂದೇ ಸರಣಿಯಲ್ಲಿ 491 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬ್ರೆಟ್ ಲೀ 55 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ಅತಿ ಹೆಚ್ಚು ಔಟ್‌ಗಳನ್ನು (79) ಮಾಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಔಟ್‌ಫೀಲ್ಡ್ ಕ್ಯಾಚ್‌ಗಳಲ್ಲಿ (32) ಪಡೆದು ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ODIಗಳನ್ನು ಆಡಿದ್ದಾರೆ (71), ಮತ್ತು MS ಧೋನಿ ಅತಿ ಹೆಚ್ಚು ನಾಯಕತ್ವ ವಹಿಸಿದ್ದಾರೆ (40). ರಿಕಿ ಪಾಂಟಿಂಗ್ ನಾಯಕನಾಗಿ ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ್ದಾರೆ (35 ಪಂದ್ಯಗಳಲ್ಲಿ 21.

ಹೀಗೆ ಉಭಯ ತಂಡಗಳು ಕೂಡ ಈ ಹಿಂದಿನಿಂದ್ಲೂ ಸೂಪರ್ ಸ್ಟ್ರಾಂಗ್ ಪರ್ಫಾಮೆನ್ಸ್ ನೀಡ್ತಾನೇ ಬಂದಿದ್ದಾರೆ. ಬಟ್ ಈ ಸಲ ಭಾರತದ ಸಿಚುಯೇಷನ್ ಸ್ಪೆಷಲ್ ಆಗಿದೆ. ಹೊಸ ಕ್ಯಾಪ್ಟನ್ ಶುಭ್​ಮನ್ ಗಿಲ್ ಹೊಸ ಸವಾಲಿಗೆ ಸಿದ್ಧವಾಗ್ತಿದ್ದಾರೆ.

Shwetha M