ರೋಹಿತ್ ಓಪನರ್.. ಕೊಹ್ಲಿ ನಂ.3 – AUS ಬೌಲಿಂಗ್ ಸ್ಟ್ರಾಂಗ್ ಇದ್ಯಾ?
ಭಾರತದ ಪ್ಲಸ್ & ಮೈನಸ್ ಏನು?

ರೋಹಿತ್ ಓಪನರ್.. ಕೊಹ್ಲಿ ನಂ.3 – AUS ಬೌಲಿಂಗ್ ಸ್ಟ್ರಾಂಗ್ ಇದ್ಯಾ?ಭಾರತದ ಪ್ಲಸ್ & ಮೈನಸ್ ಏನು?

ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಆಸೀಸ್ ವಿರುದ್ಧ ಏಕದಿನ ಸರಣಿಗೆ ಸಜ್ಜಾಗಿರೋ ಭಾರತ ಪರ್ತ್​ನಲ್ಲಿ ತನ್ನ ಮೊದಲ ಪಂದ್ಯವನ್ನ ಆಡಲಿದೆ. ಭಾರತೀಯ ಟೈಮಿಂಗ್ಸ್ ಪ್ರಕಾರ ಈ ಮ್ಯಾಚ್ ಭಾನುವಾರ ಬೆಳಗ್ಗೆ 9 ಗಂಟೆಗೆ ಸ್ಟಾರ್ಟ್ ಆಗುತ್ತೆ. ಈ ಮ್ಯಾಚ್ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್ ಬ್ಯಾಕ್ ಮಾಡ್ತಾರೆ. ಆಲ್ರಿಡಿ ಭಾರತೀಯ ಟೀಂ ಪರ್ತ್ ತಲುಪಿದ್ದು ಇನ್ನೇನು ಪ್ರಾಕ್ಟೀಸ್ ಆರಂಭ ಮಾಡ್ತಾರೆ.

ಇದನ್ನೂ ಓದಿ : ಇಂಡಿಯಾ ನೆಕ್ಸ್ಟ್ ಟಾರ್ಗೆಟ್ AUS – ಸರಣಿಗೂ ಮೊದ್ಲೇ ಭಾರತ ಕೆಣಕಿದ್ದೇಕೆ?

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಶುಭ್ ಮನ್ ಗಿಲ್

ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಕೆಎಲ್ ರಾಹುಲ್

ಅಕ್ಷರ್ ಪಟೇಲ್

ನಿತೀಶ್ ರೆಡ್ಡಿ

ಕುಲದೀಪ್ ಯಾದವ್

ಹರ್ಷಿತ್ ರಾಣಾ

ಅರ್ಶದೀಪ್ ಸಿಂಗ್

ಮೊಹಮ್ಮದ್ ಸಿರಾಜ್

ಹೀಗೆ ಭಾರತ ತಂಡವು 7 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಡೆಪ್ತ್ ಇಟ್ಟು ಆ ನಂತ್ರ ಬೌಲಿಂಗ್ ಇಂಪಾರ್ಟೆನ್ಸ್ ಕೊಡ್ಬೋದು. ಯಾಕಂದ್ರೆ ಆಸ್ಟ್ರೇಲಿಯಾದಲ್ಲಿ ಪವರ್​ಹಿಟ್ ಬ್ಯಾಟರ್​ಗಳೇ ಇರೋದ್ರಿಂದ ಅವ್ರನ್ನ ಕಟ್ಟಿ ಹಾಕ್ಬೇಕು ಅಂದ್ರೆ ಭಾರತದ ಬೌಲಿಂಗ್ ಸ್ಟ್ರೆಂಥ್ ಸೂಪರ್ ಸ್ಟ್ರಾಂಗ್ ಇರ್ಲೇಬೇಕಾಗುತ್ತೆ. ಸೋ ಆಸೀಸ್ ಪರ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ಒಂದ್ಸಲ ನೋಡೋಣ. ಟ್ರಾವಿಸ್ ಹೆಡ್ -ಮಿಚೆಲ್ ಮಾರ್ಷ್ ಓಪನಿಂಗ್ ಬರ್ತಾರೆ. ನಂತ್ರ ಮ್ಯಾಥ್ಯೂ ಶಾರ್ಟ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ ಮಿಡಲ್ ಆರ್ಡರ್ ಬ್ಯಾಟಿಂಗ್ ಸ್ಟ್ರೆಂಥ್ ಆಗ್ತಾರೆ. ಅಲೆಕ್ಸ್ ಕ್ಯಾರಿ, ಮಿಚೆಲ್ ಓವನ್ ಫಿನಿಶರ್ಸ್ ಆದ್ರೆ ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಬೌಲರ್ಸ್ ಕೋಟಾದಲ್ಲಿ ಕಣಕ್ಕಿಳೀತಾರೆ. ಇಲ್ಲಿ ಭಾರತಕ್ಕೆ ಕಂಪೇರ್ ಮಾಡಿದ್ರೆ ಆಸ್ಟ್ರೇಲಿಯಾದ ಬೌಲಿಂಗ್ ಸ್ಕ್ವಾಡ್ ಸ್ಟ್ರಾಂಗ್ ಎನ್ನಿಸುವಂತೆಯೇ ಇದೆ. ಅದೂ ಅಲ್ದೇ ಭಾರತದ ಏಕದಿನ ತಂಡದಲ್ಲಿ ಬುಮ್ರಾ ಕೂಡ ಇಲ್ಲ. ಸಿರಾಜ್ ಮೇಲೆಯೇ ಜಾಸ್ತಿ ಡಿಪೆಂಡ್ ಆಗ್ಬೇಕಾಗುತ್ತೆ. ಅರ್ಶದೀಪ್​ಗೆ ಚಾನ್ಸ್ ಕೊಟ್ರೂ ಕೂಡ ಅವ್ರು ದುಬಾರಿ ರನ್ಸ್ ನೀಡೋದು ಮೈನಸ್ ಆಗ್ಬೋದು. ಇನ್ನು ರಾಣಾ ಅಂತಾ ಬಂದ್ರೆ ಅಷ್ಟೊಂದು ಎಕ್ಸ್​ಪೀರಿಯನ್ಸ್ ಇಲ್ಲ. ಅದ್ರಲ್ಲೂ ಆಸೀಸ್ ವಿರುದ್ಧ ಮೊದಲ ವೈಟ್​ಬಾಲ್ ಸಿರೀಸ್ ಇದು. ಇನ್ನು ಪ್ರಸಿದ್ಧ್ ಕೃಷ್ಣರನ್ನ ಪ್ಲೇಯಿಂಗ್ 11ನಲ್ಲಿ ಸೇರಿಸೋದೇ ಡೌಟ್ ಇದೆ. ಇತ್ತ ಸ್ಪಿನ್ನರ್ ವಿಭಾಗದಲ್ಲಿ ಕುಲ್ದೀಪ್ ಮೇಲೆಯೇ ಡಿಪೆಂಡ್ ಆಗ್ಬೇಕಾಗುತ್ತೆ.

ಒಡಿಐನಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಡಾಮಿನೇಷನ್!

ವಿಶ್ವಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾವನ್ನ ಬಲಿಷ್ಠ ಟೀಂ ಅಂತಾನೇ ಕರೆಯಲಾಗುತ್ತೆ. ಯಾಕಂದ್ರೆ ಐಸಿಸಿ ವರ್ಲ್ಡ್​​ಕಪ್​ನಿಂದ ಹಿಡಿದು ಅತೀ ಹೆಚ್ಚು ಪಂದ್ಯಗಳನ್ನ ಗೆದ್ದಿರೋ ಪರ್ಸೆಂಟೇಜ್​ನಲ್ಲೂ ಅವ್ರೇ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ಇನ್ನು ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲೂ ಆಸ್ಟ್ರೇಲಿಯಾವೇ ಗೆದ್ದಿದೆ. ಉಭಯ ತಂಡಗಳು ಇದುವರೆಗೆ 151 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಇದ್ರಲ್ಲಿ ಭಾರತ 57 ಮ್ಯಾಚಸ್ ವಿನ್ ಆಗಿದ್ರೆ ಆಸ್ಟ್ರೇಲಿಯಾ 84ರಲ್ಲಿ ಗೆಲುವು ಕಂಡಿದೆ. 10 ಪಂದ್ಯಗಳ ರಿಸಲ್ಟ್ ಬಂದಿಲ್ಲ. ಇನ್ನು ಆಸ್ಟ್ರೇಲಿಯಾ ನೆಲದಲ್ಲಿನ ರೆಕಾರ್ಡ್ಸ್ ನೋಡಿದ್ರೆ ಕಾಂಗರೂನಾಡಿನಲ್ಲಿ ಒಟ್ಟು 54 ಸಲ ಮುಖಾಮುಖಿಯಾಗಿದ್ದಾರೆ. ಇದ್ರಲ್ಲಿ ಭಾರತ 14 ಸಲ ಗೆದ್ರೆ ಆಸ್ಟ್ರೇಲಿಯಾ 38 ಬಾರಿ ವಿನ್ ಆಗಿದೆ. 2 ಪಂದ್ಯಗಳು ರಿಸಲ್ಟ್ ಕಂಡಿಲ್ಲ. ಈವನ್ ಭಾರತದಲ್ಲಿ ನಡೆದಿರೋ ಮ್ಯಾಚ್​ಗಳಲ್ಲೂ ಆಸ್ಟ್ರೇಲಿಯಾನೇ ಡಾಮಿನೇಟ್ ಮಾಡಿದೆ. ಭಾರತದಲ್ಲಿ ಉಭಯ ತಂಡಗಳು 72 ಬಾರಿ ಏಕದಿನದಲ್ಲಿ ಮುಖಾಮುಖಿಯಾಗಿವೆ. ಇದ್ರಲ್ಲಿ ಭಾರತ 33 ಪಂದ್ಯಗಳಲ್ಲಿ ಗೆದ್ರೆ ಆಸ್ಟ್ರೇಲಿಯಾ 34ರಲ್ಲಿ ವಿನ್ ಆಗಿದೆ. 5 ಪಂದ್ಯ ರಿಸಲ್ಟ್ ಕಂಡಿಲ್ಲ. ಸೋ ಈ ಸ್ಟ್ಯಾಟ್ಸ್ ನೋಡಿದ್ರೇನೇ ಗೊತ್ತಾಗುತ್ತೆ. ಆಸೀಸ್ ಆಟಗಾರರು ಪ್ರತೀ ಸಲ ಮೇಲುಗೈ ಸಾಧಿಸ್ತಾನೇ ಬಂದಿದ್ದಾರೆ. ಬಟ್ ಈ ಸಲ ಭಾರತ ಆಸೀಸ್ ನೆಲದಲ್ಲಿ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದೆ. ಗಿಲ್ ಕ್ಯಾಪ್ಟನ್ಸಿಯಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.

Shantha Kumari