ಎರಡನೇ ಪಂದ್ಯದಲ್ಲೂ ಸೋತ ಭಾರತ – ಇನ್ನೂ ಒಂದು ಮ್ಯಾಚ್ ಬಾಕಿ ಇರುವಂತೆಯೇ ಸರಣಿ ಗೆದ್ದ ಆಸ್ಟ್ರೇಲಿಯಾ!

ಎರಡನೇ ಪಂದ್ಯದಲ್ಲೂ ಸೋತ ಭಾರತ – ಇನ್ನೂ ಒಂದು ಮ್ಯಾಚ್ ಬಾಕಿ ಇರುವಂತೆಯೇ ಸರಣಿ ಗೆದ್ದ ಆಸ್ಟ್ರೇಲಿಯಾ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯವನ್ನ ಗೆದ್ದ ಆಸ್ಟ್ರೇಲಿಯಾ ಸರಣಿ ಕೈ ವಶ ಮಾಡಿಕೊಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸಿರೀಸ್ ಗೆದ್ದಿದ್ದು ಹೋಂ ಪಿಚ್​ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ಸಾಲಿಡ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಭಾರತದ ಎದುರು ಮೇಲುಗೈ ಸಾಧಿಸಿದೆ. ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಒಳ್ಳೆ ಪ್ರದರ್ಶನ ನೀಡಿದ್ರು. ರೋಹಿತ್ ಶರ್ಮಾ 73 ರನ್ಸ್ ಗಳಿಸಿದ್ರೆ ಶ್ರೇಯಸ್ 61 ರನ್ ಕಲೆ ಹಾಕಿದ್ರು. ಇನ್ನು ಅಕ್ಷರ್ ಪಟೇಲ್ 44 ರನ್ಸ್ ಗಳಿಸಿದ್ರು. ರಾಣಾ ಮತ್ತೆ ಅರ್ಶದೀಪ್ ಕೊನೆಗೆ 30+ ರನ್ಸ್ ತನ್ಕೊಂಡ್ರು. ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್​ಗಳನ್ನ ಕಲೆ ಹಾಕಿತ್ತು. 265 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಕಾಂಗರೂಪಡೆ ಪಂದ್ಯವನ್ನ ಗೆದ್ದುಕೊಳ್ತು.

ಇದನ್ನೂ ಓದಿ : RCBಗೆ ಕಪ್ ಗೆಲ್ಲಿಸಿದವ್ರು ಸೇಫ್ – ರಿಟೇನ್ & ರಿಲೀಸ್ಟ್ ಲಿಸ್ಟ್ ಹೇಗಿದೆ?

ಎರಡೆರಡು ಜೀವದಾನ ಪಡೆದು ಮಿಂಚಿದ ಶಾರ್ಟ್!

265 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಪರ ಓಪನರ್​ಗಳಾದ ಮಿಚೆಲ್ ಮಾರ್ಚ್ 11 ರನ್, ಹಾಗೇ ಟ್ರಾವಿಸ್ ಹೆಡ್ 28 ರನ್ ಗಳಿಸಿ ಔಟಾಗಿದ್ರು. 13 ಓವರ್ಸ್ ಅಷ್ಟ್ರಲ್ಲಿ ಆಸ್ಟ್ರೇಲಿಯಾ 2 ವಿಕೆಟ್ ಕಳ್ಕೊಂಡಿತ್ತು. ಆದ್ರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಮ್ಯಾಟ್ ಶಾರ್ಟ್ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. 78 ಎಸೆತಗಳಲ್ಲಿ 2 ಸಿಕ್ಸ್, 4 ಫೋರ್​ಗಳೊಂದಿಗೆ 74 ರನ್ ಗಳಿಸಿ ಔಟಾದ್ರು. ಇಂಟ್ರೆಸ್ಟಿಂಗ್ ಅಂದ್ರೆ ಶಾರ್ಟ್ ಇಷ್ಟೊಂದು ರನ್ಸ್ ಕಲೆ ಹಾಕೋಕೆ ಕಾರಣವೇ ಟೀಂ ಇಂಡಿಯಾ ಬಿಟ್ಟಂತ ಎರಡೆರಡು ಕ್ಯಾಚ್. ಮೊದ್ಲಿಗೆ 23 ರನ್ ಗಳಿಸಿದ್ದಾಗ ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್​ನಲ್ಲಿ ಅಕ್ಷರ್ ಪಟೇಲ್ ಕ್ಯಾಚ್ ಬಿಟ್ರು. ಌಂಡ್ ನೆಕ್ಸ್​​​ 55 ರನ್ ಗಳಿಸಿದ್ದ ವೇಳೆ ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಕ್ಯಾಚ್ ಬಿಟ್ರು. ಎರಡೆರಡು ಜೀವದಾನ ಪಡೆದ ಶಾರ್ಟ್ ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿ ಬಿಗ್ ಸ್ಕೋರ್ ಕಲೆ ಹಾಕಿದ್ರು. ಕೂಪರ್ ಕೊನೊಲಿ ಅರ್ಧಶತಕ ಬಾರಿಸಿ ಆಸೀಸ್​ಗೆ ನೆರವಾದ್ರು. ಇನ್ನು ಮಿಚೆಲ್ ಓವೆನ್ ಮತ್ತು ರೆನ್ಷಾ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ರು. ಕೊನೆ ಕೊನೆಗೆ ಭಾರತ ಗೇಮ್​ನ ಕಂಟ್ರೋಲ್​ಗೆ ತಗೊಂಡ್ರೂ ಕೂಡ ಅಷ್ಟ್ರಲ್ಲಾಗ್ಲೇ ಕೈ ಮೀರಿ ಹೋಗಿತ್ತು. ಅದ್ರಲ್ಲೂ ಆಸ್ಟ್ರೇಲಿಯಾ ಪರ ಕೊನೊಲಿ ಲಾಸ್ಟ್​ ಮೂಮೆಂಟ್​ವರೆಗೂ ನಿಂತು ಪಂದ್ಯವನ್ನ ಗೆಲ್ಲಿಸಿಕೊಟ್ರು. ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಯ್ತು. ಸೋ ಅಲ್ಲಿಗೆ 3 ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಕೈವಶ ಮಾಡ್ಕೊಂಡ್ರು.

24 ರನ್.. 2 ವಿಕೆಟ್ ಪಡೆದು ಮಿಂಚಿದ ರಾಣಾ!

ಆಡಿಲೇಡ್ ಮ್ಯಾಚಲ್ಲಿ ಭಾರತದ ಪರ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ದು ಹರ್ಷಿತ್ ರಾಣಾ. ಬ್ಯಾಟಿಂಗ್ ಌಂಡ್ ಬೌಲಿಂಗ್​ನಲ್ಲೂ ಸೌಂಡ್ ಮಾಡಿದ್ರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಾಣಾ 18 ಎಸೆತಗಳಲ್ಲಿ 24 ರನ್ಸ್ ಕಲೆ ಹಾಕಿದ್ರು. ಲೋವರ್ ಆರ್ಡರ್​ನಲ್ಲಿ ಅರ್ಶದೀಪ್ ಜೊತೆ ಒಂದೊಳ್ಳೆ ಪಾರ್ಟ್ನರ್​ಶಿಪ್ ನೀಡಿದ್ರು. ಇದೊಂಥರಾ ಮೋಸ್ಟ್ ವ್ಯಾಲ್ಯೂಯೇಬಲ್ ರನ್ಸ್ ಆಗಿತ್ತು. ಌಂಡ್ ಬೌಲಿಂಗ್​ನಲ್ಲೂ ರಾಣಾ ಇಂಪ್ರೆಸ್ಸಿವ್ ಸ್ಪೆಲ್​ಗಳನ್ನ ಹಾಕಿದ್ರು. 2 ಮೇನ್ ವಿಕೆಟ್​ಗಳನ್ನೇ ಬೇಟೆಯಾಡಿದ್ರು. ಫಸ್ಟ್ 1 ಟ್ರಾವಿಸ್ ಹೆಡ್ ಌಂಡ್ ಸೆಕೆಂಡ್ 1 ಮ್ಯಾಟ್ ಶಾರ್ಟ್. ಬಟ್ ಬೌಲಿಂಗ್​ನಲ್ಲಿ ಎಕಾನಮಿ ರೇಟ್​ನಲ್ಲಿ ಮಾತ್ರ ಕೊಂಚ ದುಬಾರಿ ಎನ್ನುವಂತೆಯೇ ಇತ್ತು. 8 ಓವರ್​ಗಳನ್ನ ಬೌಲ್ ಮಾಡಿದ ರಾಣಾ 7.38ರ ಎಕಾನಮಿಯಲ್ಲಿ 59 ರನ್ಸ್ ಬಿಟ್ಟುಕೊಟ್ರು.

ಭಾರತದ ಸೋಲಿಗೆ ಕಾರಣಗಳು!

1 . ಟಾಸ್ ಸೋಲು, ಫಸ್ಟ್ ಬ್ಯಾಟಿಂಗ್

2 . ಮೊದಲ 10 ಓವರ್ ಗಳಲ್ಲಿ ಸ್ಲೋ ರೇಟ್ ಬ್ಯಾಟಿಂಗ್

3 . ಕೊಹ್ಲಿ ಡಕ್, ಗಿಲ್ (9), ರಾಹುಲ್ (11) ನಿರಾಸೆ

4 . ಮ್ಯಾಟ್ ಶಾರ್ಟ್ ಗೆ ಎರಡೆರಡು ಜೀವದಾನ

  1. ಭಾರತದ ಪರ ಬುಮ್ರಾ ಮತ್ತು ಶಮಿ ಇಲ್ಲದ್ದು

6 . ಆಸ್ಟ್ರೇಲಿಯಾಗೆ ಹೋಂ ಪಿಚ್ ಅಡ್ವಾಂಟೇಜ್

Shantha Kumari