ರಿಷಭ್ ಪಂತ್ ಔಟ್.. ಧ್ರುವ್ ಜುರೇಲ್ ಗೆ ಚಾನ್ಸ್? – ತಂಡಕ್ಕೆ ಸರ್ಜರಿ ಹೇಗಿದೆ?
ಆಸ್ಟ್ರೇಲಿಯಾ ಸರಣಿಯಲ್ಲಿರೋ ಟೀಂ ಇಂಡಿಯಾಗೆ ಉಳಿದಿರೋದು ಇನ್ನೊಂದೇ ಪಂದ್ಯ. ಐದು ಸರಣಿಗಳ ಪೈಕಿ ಒಂದು ಪಂದ್ಯವನ್ನ ಮಾತ್ರ ಗೆದ್ದು ಹಿನ್ನಡೆ ಅನುಭವಿಸಿರೋ ಭಾರತ ತಂಡ ಕೊನೇ ಮ್ಯಾಚ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದ ರಿಸಲ್ಟ್ ಕ್ಯಾಪ್ಟನ್, ಹೆಡ್ಕೋಚ್ ಭವಿಷ್ಯ ನಿರ್ಧರಿಸೋದ್ರ ಜೊತೆಗೆ ಭಾರತ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ರೇಸ್ನಲ್ಲಿ ಉಳಿಯುತ್ತಾ ಅನ್ನೋದು ಡಿಸೈಡ್ ಆಗುತ್ತೆ. ಬಟ್ ಕಳೆದ ನಾಲ್ಕು ಪಂದ್ಯಗಳಲ್ಲಿ ಮಾಡಿಕೊಂಡಿರೋ ಮಿಸ್ಟೇಕ್ಸ್ನ ಕೊನೇ ಪಂದ್ಯದಲ್ಲಿ ಸರಿಪಡಿಸಿಕೊಳ್ಳೋಕೆ ಮುಂದಾಗಿರೋ ಮ್ಯಾನೇಜ್‌ಮೆಂಟ್ ಒಂದಷ್ಟು ಸರ್ಜರಿಗಳನ್ನ ಮಾಡಲು ರೆಡಿಯಾಗಿದೆ.
ಇದನ್ನೂ ಓದಿ: ಸಿಡ್ನಿಯಲ್ಲೂ ಸಿಡಿಯದಿದ್ರೆ ದಿ ಎಂಡ್ – RO-KOಗೆ ಇದೇ ಫೈನಲ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಈಗಾಗ್ಲೇ ನಾಲ್ಕು ಮ್ಯಾಚ್ಗಳು ಮುಗಿದಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದ್ರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇನ್ನು ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೆ, ನಾಲ್ಕನೇ ಪಂದ್ಯದಲ್ಲಿ ಆಸೀಸ್ ಪಡೆ 184 ರನ್ಗಳ ಗೆಲುವು ದಾಖಲಿಸಿದೆ. ಇದೀಗ ಉಭಯ ತಂಡಗಳು 5ನೇ ಟೆಸ್ಟ್ ಪಂದ್ಯಕ್ಕಾಗಿ ರೆಡಿಯಾಗಿವೆ. ಜನವರಿ ಮೂರರಿಂದ ಮ್ಯಾಚ್ ಶುರುವಾಗಲಿದ್ದು, ಭಾರತಕ್ಕಂತೂ ಈ ಪಂದ್ಯ ಡು ಆರ್ ಡೈ ಎನ್ನುವಂತಿದೆ. ಹೀಗಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.
ರಿಷಭ್ ಒಂತ್ ಔಟ್.. ಧ್ರುವ್ ಜುರೇಲ್ ಗೆ ಚಾನ್ಸ್?
ಇನ್ನು ಅಪಘಾತದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ರಿಷಭ್ ಪಂತ್ ಆರಂಭಿಕ ಪಂದ್ಯಗಳಲ್ಲಿ ತುಂಬಾ ಚೆನ್ನಾಗಿ ಪರ್ಫಾಮ್ ಮಾಡಿದ್ರು. ಆದ್ರೆ ಆಸಿಸ್ ಸರಣಿಯಲ್ಲೂ ಪಂತ್ ಕೂಡ ಕೈಕೊಟ್ಟಿದ್ದಾರೆ. ನಿರ್ಣಾಯಕ ಘಟ್ಟಗಳಲ್ಲೂ ಕೇರ್ಲೆಸ್ ಆಗಿ ಔಟ್ ಆಗಿದ್ದಾರೆ. ಹೀಗಾಗಿ ಐದನೇ ಪಂದ್ಯದಿಂದ ಪಂತ್ರನ್ನ ಹೊರಗಿಡೋ ಸಾಧ್ಯತೆ ಇದೆ. ರಿಷಬ್ ಪಂತ್ ಬದಲಿಗೆ ಧ್ರುವ್ ಜುರೆಲ್ ತಂಡಕ್ಕೆ ಸೇರ್ಪಡೆಯಾಗಬಹುದು. ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜುರೇಲ್ ಮಿಂಚಿದ್ದರು. ಮೆಲ್ಬೋರ್ನ್ ಮೈದಾನದಲ್ಲಿ 80 ಮತ್ತು 68 ರನ್ ಗಳಿಸಿದರು. ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ರಾಜಸ್ಥಾನ ಪರ 93 ರನ್ ಗಳಿಸಿ ಜುರೆಲ್ ಅಬ್ಬರಿಸಿದ್ದರು. ಆದರೆ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಜುರೆಲ್ 11 ಮತ್ತು 1 ರನ್ಗೆ ವಿಕೆಟ್ ಒಪ್ಪಿಸಿದ್ದರು. ಬಟ್ ರೋಹಿತ್ ಮತ್ತು ಗಿಲ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರಿಂದ ಜುರೇಲ್ರನ್ನ ಬೆಂಚ್ಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಸಿಡ್ನಿ ಟೆಸ್ಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗಿಂತ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಬ್ಯಾಟ್ಸ್‌ಮನ್‌ಗಳಿಗೆ ಭಾರತೀಯ ಮ್ಯಾನೇಜ್‌ಮೆಂಟ್ ಆದ್ಯತೆ ನೀಡಲಿದೆ.
ಆಸಿಸ್ ಸರಣಿಯಲ್ಲಿ ಒಂದೂ ಆಫ್ ಸೆಂಚುರಿ ಬಾರಿಸದ ಪಂತ್!
ಒಂದು ಕಾಲದಲ್ಲಿ ಗೇಮ್ ಚೇಂಜರ್ ಎನಿಸಿಕೊಂಡಿದ್ದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಈಗ ಸತತ ವೈಫಲ್ಯಗಳನ್ನ ಎದುರಿಸುತ್ತಿದ್ದಾರೆ. ಕಳೆದ ನಾಲ್ಕು ಟೆಸ್ಟ್‌ಗಳಲ್ಲಿ ಪಂತ್ 37, 1, 21, 28, 9, 28, 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 7 ಇನ್ನಿಂಗ್ಸ್ ಗಳಲ್ಲಿ ಒಮ್ಮೆಯೂ ಆಫ್ ಸೆಂಚುರಿ ಬಾರಿಸಿಲ್ಲ. ಪಂತ್ ಇಡೀ ಸರಣಿಯಲ್ಲಿ 22ರ ಸರಾಸರಿಯಲ್ಲಿ ಕೇವಲ 154 ರನ್ ಗಳಿಸಿದ್ದಾರೆ. ಅದೂ ಅಲ್ದೇ ಪಂತ್ ಅನಗತ್ಯ ಶಾಟ್ ಆಡಲು ಹೋಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಕಷ್ಟದ ಟೈಮಲ್ಲೂ ಟೀಂ ಇಂಡಿಯಾ ಕೈ ಹಿಡಿಯುತ್ತಿಲ್ಲ. ಮೆಲ್ಬೋರ್ನ್ ಪಂದ್ಯದಲ್ಲಿ ಭಾರತಕ್ಕೆ ಡ್ರಾ ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ ಪಂತ್ ಸುಖಾಸುಮ್ಮನೆ ಶಾಟ್ ಮಾಡಿ ಕ್ಯಾಚ್ ನೀಡಿ ಔಟಾಗಿದ್ದು ದೊಡ್ಡ ಹಿನ್ನಡೆಯಾಗಿತ್ತು. ಹೀಗಾಗಿ ಪಂತ್ ಮೇಲೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ಅಂತಿಮವಾಗಿ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದನ್ನ ನೋಡೋದಾದ್ರೆ ನಾಲ್ಕನೇ ಪಂದ್ಯದಂತೆ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನರ್ಸ್. ಆ ಬಳಿಕ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಧ್ರುವ್ ಜುರೇಲ್, ರವೀಂದ್ರ ಜಡೇಜಾ, ನಿತೀಶ್‌ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.