ಸಿಡ್ನಿಯಲ್ಲೂ ಸಿಡಿಯದಿದ್ರೆ ದಿ ಎಂಡ್ – RO-KOಗೆ ಇದೇ ಫೈನಲ್
1947ರಿಂದ 2021ರವರೆಗೆ ಭಾರತ ತಂಡ ಇಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಕೇವಲ ಒಂದು ಪಂದ್ಯದಲ್ಲಷ್ಟೇ ಗೆಲುವು ಕಂಡಿದೆ. ಉಳಿದಂತೆ 5 ಪಂದ್ಯದಲ್ಲಿ ಸೋಲನುಭವಿಸಿದ್ದು, 7 ಪಂದ್ಯಗಳನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ. 2003ರಲ್ಲಿ ಪ್ರವಾಸಿ ಬಾರತ ತಂಡ ಇಲ್ಲಿ 7 ವಿಕೆಟ್ ನಷ್ಟಕ್ಕೆ 705 ರನ್ ಗಳಿಸಿದ್ದು ಇಲ್ಲಿ ಬಂದಿರುವ ಅತಿ ದೊಡ್ಡ ಮೊತ್ತವಾಗಿದೆ. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ಅಜೇಯ 241 ರನ್ ಹೊಡೆದಿದ್ದರು. ವಿವಿಎಸ್ ಲಕ್ಷ್ಮಣ್ ಅವರು 178 ರನ್ ಗಳಿಸಿದ್ದರು. ಸಿಡ್ನಿ ಕ್ರೀಡಾಂಗಣದ ಪಿಚ್ ಸ್ಪಿನ್ನರ್ ಗಳಿಗೆ ಸಹಾಯಕ. ಈ ಮೈದಾನದಲ್ಲಿ ಶೇನ್ ವಾರ್ನ್ ಅತೀ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. 14 ಪಂದ್ಯಗಳಿಂದ 64 ವಿಕೆಟ್ ಬೇಟೆಯಾಡಿದ್ದಾರೆ.
ಇದನ್ನೂ ಓದಿ: 2ನೇ ಮದುವೆಗೆ ವರ್ತೂರ್ ರೆಡಿ! – ತನಿಷಾ ಅಲ್ಲ.. ಮತ್ಯಾರು?
ಇನ್ನು ಈ ಪಂದ್ಯದ ಮತ್ತೊಂದು ವಿಶೇಷತೆಯಂದ್ರೆ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಬ್ಯಾಗಿ ಕ್ಯಾಪ್ನೊಂದಿಗೆ ಕಣಕ್ಕಿಳಿಯಲಿದ್ದಾರೆ. ಪಿಂಕ್ ಟೆಸ್ಟ್ ಎಂದರೆ, ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಇಂಟೆನ್ಷನ್ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದು. ಒಟ್ನಲ್ಲಿ ಸರಣಿಯಲ್ಲಿ ಲೀಡ್ ಪಡ್ಕೊಂಡಿರುವ ಆಸ್ಟ್ರೇಲಿಯಾ ಕೊನೇ ಪಂದ್ಯವನ್ನೂ ಗೆದ್ದು ಡಬ್ಲ್ಯೂಟಿಸಿ ಫೈನಲ್ಗೆ ಲಗ್ಗೆ ಇಡೋ ಲೆಕ್ಕಾಚಾರ ಹಾಕಿಕೊಂಡಿದೆ. ಅದ್ರಂತೆ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್-11 ಅನ್ನು ಪ್ರಕಟಿಸಿದೆ. ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರನ್ನು ಪ್ಲೇಯಿಂಗ್-11 ರಿಂದ ಕೈಬಿಡಲಾಗಿದ್ದು, ಬ್ಯೂ ವೆಬ್‌ಸ್ಟರ್ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ.
ಸಿಡ್ನಿ ಪಂದ್ಯವೇ ರೋಹಿತ್ ಪಾಲಿಗೆ ಕೊನೇ ಪಂದ್ಯವಾಗುತ್ತಾ?
ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಫಾರ್ಮ್ ಇಲ್ಲ. ಹಾಗಂತ ಅವ್ರನ್ನ ಪ್ಲೇಯಿಂಗ್ 11ನಿಂದ ಡ್ರಾಪ್ ಂಆಡಲ್ಲ. ಆದರೆ ಈ ಸರಣಿ ನಂತರ ರೋಹಿತ್ ಟೆಸ್ಟ್ನಲ್ಲಿ ಮುಂದುವರಿಯುವುದಿಲ್ಲ ಎನ್ನಲಾಗುತ್ತಿದೆ. ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಹಾಗಾಗಿ ರೋಹಿತ್ರನ್ನ ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಜಸ್ಪ್ರೀತ್ ಬುಮ್ರಾ ಅಥವಾ ಕೆಎಲ್ ರಾಹುಲ್ ತಂಡದ ನಾಯಕರಾಗಬಹುದು ಎನ್ನಲಾಗುತ್ತಿದೆ.