ಆಸಿಸ್ ಅಬ್ಬರಕ್ಕೆ ಮಂಕಾದ ಭಾರತ – ನಾಲ್ಕನೇ ಪಂದ್ಯವೂ ಕೈ ಜಾರುತ್ತಾ?
ಆಸ್ಟ್ರೇಲಿಯಾ ಬ್ಯಾಟರ್ಸ್ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿ ರನ್ ಪೇರಿಸಿದ್ರು. ನೂರು, ಇನ್ನೂರು, ಮುನ್ನೂರು, ನಾಕ್ನೂರು ಅಂತಾ ಬ್ಯಾಟಿಂಗ್ನಲ್ಲೇ ಸುನಾಮಿ ಎಬ್ಬಿಸಿದ್ರು. ಬಟ್ ನಮ್ಮ ಟೀಂ ಇಂಡಿಯಾ ಆಟಗಾರರಿಗೆ ಮಾತ್ರ ಸೀರಿಯಸ್ನೆಸ್ಸೇ ಇಲ್ಲ ಅನ್ಸುತ್ತೆ. ಬಿಗ್ ಸ್ಕೋರ್ ನೋಡಿಯೇ ಢರ್ ಆದವ್ರಂತೆ ಒಬ್ರಿಂದೆ ಒಬ್ರು ವಿಕೆಟ್ ಒಪ್ಪಿಸಿದ್ರು. ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಕಳಪೆ ಆಟ ಮತ್ತೆ ಫಾಲೋ ಆನ್ ಭೀತಿ ತಂದಿಟ್ಟಿದೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಮಿಸ್ ಆಗೋ ಥರ ಕಾಣ್ತಿದೆ.
ಇದನ್ನೂ ಓದಿ: ಬ್ಯಾಟಿಂಗ್ ಕ್ರಮಾಂಕ ಬದಲಾದ್ರೂ ಬದಲಾಗದ ನಸೀಬು! – HITಮ್ಯಾನ್ ನಿವೃತ್ತಿ ಟೈಮ್ ಬಂತಾ?
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಆಸ್ಟ್ರೇಲಿಯನ್ನರು ಫಸ್ಟ್ ಇನ್ನಿಂಗ್ಸ್ ನಲ್ಲಿ 474 ರನ್ ಸಿಡಿಸಿ ಆಲೌಟ್ ಆದ್ರು. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದ ಆಸ್ಟ್ರೇಲಿಯಾ ಎರಡನೇ ದಿನವೂ ಅಧ್ಬುತ ಪ್ರದರ್ಶನ ನೀಡಿತು. ಸ್ಮಿತ್ ಅವ್ರ ಸೆಂಚುರಿ ಹಾಗೇ ಪ್ಯಾಟ್ ಕಮಿನ್ಸ್ ಅವ್ರ ಜವಾಬ್ದಾರಿಯುತ ಆಟದಿಂದಾಗಿ ರನ್ಗಳ ಮಳೆ ಸುರಿಸಿತು.
ಫಸ್ಟ್ ಇನ್ನಿಂಗ್ಸ್ ನಲ್ಲೇ ಬೃಹತ್ ರನ್ ಕಲೆ ಹಾಕಿದ ಆಸ್ಟ್ರೇಲಿಯಾ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಿದರು. ಮೊದಲ ದಿನ 6 ವಿಕೆಟ್ಗೆ 311 ರನ್ಗಳಿಸಿದ್ದ ಆಸೀಸ್, ಎರಡನೇ ದಿನ ಆ ಮೊತ್ತವನ್ನ 474 ರನ್‌ಗಳಿಗೆ ಏರಿಸಿ ಆಲೌಟ್ ಆಗಿತ್ತು. ಆಸ್ಟ್ರೇಲಿಯದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 197 ಎಸೆತಗಳಲ್ಲಿ13 ಬೌಂಡರಿ, 3 ಸಿಕ್ಸರ್ಗಳೊಂದಿಗೆ 140 ರನ್ ಗಳಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 49 ರನ್ ಗಳಿಸಿ ಸಾಥ್ ಕೊಟ್ರು. ಒಂದು ಕಡೆ ಸ್ಟೀವನ್ ಸ್ಮಿತ್, ಇನ್ನೊಂದು ತುದಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಸಿಡಿಲ್ಬರದ ಬ್ಯಾಟಿಂಗ್ 2ನೇ ದಿನದ ಮೊದಲ ಸೆಷನ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳನ್ನ ಹೈರಾಣಾಗಿಸಿತ್ತು. ಹಾಗೇ ಸ್ಟಾರ್ಕ್ 15, ಲಿಯಾನ್ 13 ರನ್ಗಳಿಸಿದರು.
ನಾಲ್ಕು ವಿಕೆಟ್ ಕಿತ್ತು ಮಿಂಚಿದ ಬುಮ್ರಾ!
ಭಾರತದ ಪರ ಮತ್ತೊಮ್ಮೆ ಬೌಲಿಂಗ್ ಜಾದೂ ಮಾಡಿದ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಗಳನ್ನ ಬೇಟೆಯಾಡಿದ್ರು. ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ನಾಥನ್ ಲಿಯಾನ್ ವಿಕೆಟ್ ಕಬಳಿಸಿದ್ರು. ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು. ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ವಾಷಿಂಗ್ ಟನ್ ಸುಂದರ್ ಒಂದು ವಿಕೆಟ್ ಪಡೆದರು. ಬಟ್ ಮೊಹಮ್ಮದ್ ಸಿರಾಜ್ ಮಾತ್ರ 100+ ರನ್ ಬಿಟ್ಟುಕೊಟ್ರೂ ಒಂದೇ ಒಂದು ವಿಕೆಟ್ ಪಡೆಯದೆ ದುಬಾರಿ ಬೌಲರ್ ಎನಿಸಿಕೊಂಡ್ರು.
ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಸಾಲು ಸಾಲು ಆಘಾತ!
ಆಸ್ಟ್ರೇಲಿಯಾವನ್ನು 474 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಪರ ಟಾಪ್ ಆಡರ್ರ್ ಬ್ಯಾಟರ್ಸ್ ಔಟ್ ಆಗಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು 164 ರನ್ ಕಲೆಹಾಕಿದೆ. ಈ ಮೂಲಕ ಭಾರತ ಇನ್ನೂ 310 ರನ್ಗಳ ಹಿನ್ನಡೆಯಲ್ಲಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ ಮಾತ್ರ 82 ರನ್ಗಳ ಬೆಸ್ಟ್ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವ್ರೆಲ್ಲಾ ನೀರಸ ಪ್ರದರ್ಶನ ನೀಡಿದ್ರು. ರೋಹಿತ್ ಶರ್ಮಾ 3, ಕೆಎಲ್ ರಾಹುಲ್ 24, ವಿರಾಟ್ ಕೊಹ್ಲಿ 36 ರನ್ ಗಳಿಸಿದ್ರು. ಆಕಾಶ್ ದೀಪ್ ಡಕ್ ಔಟ್ ಆಗಿದ್ದಾರೆ. ಸದ್ಯ ತಂಡದ ಪರ ರಿಷಬ್ ಪಂತ್ 6 ರನ್ ಹಾಗೂ ರವೀಂದ್ರ ಜಡೇಜಾ 4 ರನ್ ಕಲೆಹಾಕಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.