ಆಸೀಸ್ ಬೌಲಿಂಗ್‌ಗೆ ತತ್ತರಿಸಿದ ಟೀಂ ಇಂಡಿಯಾ – 129 ರನ್‌ಗೆ ಆಲ್‌ಔಟ್‌

ಆಸೀಸ್ ಬೌಲಿಂಗ್‌ಗೆ ತತ್ತರಿಸಿದ ಟೀಂ ಇಂಡಿಯಾ – 129 ರನ್‌ಗೆ ಆಲ್‌ಔಟ್‌

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯ ಇಂದು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಎರಡು ತಂಡಗಳು ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದುಕೊಳ್ಳಲು ನೋಡುತ್ತಿವೆ.  ಮೊದಲ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಳಪೆ ಪ್ರದರ್ಶನ ತೋರಿಸುತ್ತಿದ್ದು, ಪೆವಿಲಿಯನ್ ಪರೇಡ್ ನಡೆಸಿದ್ರು.

 

ಅಭಿಷೇಕ್ ಶರ್ಮಾ ಎಂದಿನಂತೆ ವೇಗವಾಗಿ ಆಟ ಆರಂಭಿಸಿದರು. ಅವರು ತಮ್ಮ ಎರಡನೇ ಎಸೆತದಲ್ಲಿ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಓವರ್‌ನಿಂದ 17 ರನ್‌ಗಳು ಬಂದವು. ಶುಭ್‌ಮನ್ ಗಿಲ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಜಲ್‌ವುಡ್ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಗಿಲ್ 10 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ ಕೂಡ ಕೇವಲ ಎರಡು ರನ್ ಗಳಿಸಿ ನಾಥನ್ ಎಲ್ಲಿಸ್ ಅವರ ಅದ್ಭುತ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು.

ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಹ್ಯಾಜಲ್‌ವುಡ್ ಅದ್ಭುತ ಎಸೆತದ ಮೂಲಕ ಅವರನ್ನು ಔಟ್ ಮಾಡಿದರು. ಭಾರತ 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಪವರ್‌ಪ್ಲೇನಲ್ಲಿ ಭಾರತ 40 ರನ್ ಗಳಿಸಿತು. ನಾಥ್ ಎಲಿಸ್ ಅವರ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಹೊಡೆದರು.  ಅಕ್ಷರ್ ಪಟೇಲ್ 7 ರನ್ ಗಳಿಸಿ ರನೌಟ್ ಆದರು.  ರಾಣಾ 35 ರನ್‌ಗಳಿಸಿ ಔಟ್ ಆದ್ರೆ. ದುಬೆ ಎರಡು ಎಸತಕ್ಕೆ ಕೇವಲ 4 ರನ್‌ಗಳಿಸಿ ಔಟ್ ಆದ್ರೂ, ಹಾಗೇ  ಕುಲ್‌ದೀಪ್ ಯಾದವ್ ಸೊನ್ನೆ ಸುತ್ತಿ ಔಟ್ ಆದ್ರು. ಒಬ್ಬರ ಹಿಂದೆ ಒಬ್ಬರಂತೆ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. 129 ರನ್‌ಗಳಿಗೆ ಟೀಂ ಇಂಡಿಯಾ ಆಲ್‌ ಔಟ್ ಆಯ್ತು.

Kishor KV