ಪರ್ತ್ ಟೆಸ್ಟ್ ನಲ್ಲಿ KL ಭವಿಷ್ಯ  – IND Vs AUS.. ಪ್ಲೇಯಿಂಗ್ 11 ರೆಡಿ
ಆಸಿಸ್ ಸರಣಿ ಭಾರತಕ್ಕೆ ಸವಾಲಾಗುತ್ತಾ?

ಪರ್ತ್ ಟೆಸ್ಟ್ ನಲ್ಲಿ KL ಭವಿಷ್ಯ  – IND Vs AUS.. ಪ್ಲೇಯಿಂಗ್ 11 ರೆಡಿಆಸಿಸ್ ಸರಣಿ ಭಾರತಕ್ಕೆ ಸವಾಲಾಗುತ್ತಾ?

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಆಸ್ಟ್ರೇಲಿಯಾದ ಪರ್ತ್​ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಸರ್ವಸಿದ್ಧತೆಗಳೂ ನಡೆದಿವೆ. ಬಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಕೆಲವೊಂದು ಶಾಕಿಂಗ್ ಬದಲಾವಣೆಗಳಾಗಿರೋದು ಟೆನ್ಷನ್ ಹೆಚ್ಚಿಸಿದೆ. ಹಾಗಾದ್ರೆ ಆಸಿಸ್ ವಿರುದ್ಧದ ಸರಣಿ ಭಾರತಕ್ಕೆ ಸವಾಲಾಗುತ್ತಾ? ಪಂದ್ಯದ ಆರಂಭಕ್ಕೂ ಮುನ್ನವೇ ಯಾರೆಲ್ಲಾ ತಂಡದಿಂದ ಹೊರಬಿದ್ದಿದ್ದಾರೆ? ಜಸ್ಪ್ರೀತ್ ಬುಮ್ರಾ ಸಿಟ್ಟಾಗಿದ್ದೇಕೆ? ಪ್ಲೇಯಿಂಗ್ 11 ಹೇಗಿದೆ? ಕೆಎಲ್ ರಾಹುಲ್ ಸ್ಲಾಟ್ ಮತ್ತೆ ವೇರಿಯೇಷನ್ ಆಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB 4 ಸ್ಲಾಟ್.. ರಿಷಭ್ ಟಾರ್ಗೆಟ್ – ಪಂತ್ ಗೆ ಹರಾಜಿನಲ್ಲಿ ₹30 ಕೋಟಿ?

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾ, ಪರ್ತ್​ನಲ್ಲಿ ಭರ್ಜರಿಯಾಗೇ ಪ್ರಾಕ್ಟೀಸ್ ಮಾಡ್ತಿದೆ. ವೇಗಿ ಜಸ್ಪ್ರೀತ್ ಬೂಮ್ರಾ ಸಾರಥ್ಯದಲ್ಲಿ ಟೀಮ್ ಇಂಡಿಯಾ, ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನ ಬಗ್ಗುಬಡಿಯೋ ಲೆಕ್ಕಾಚಾರದಲ್ಲಿದೆ. ವಾಕಾ ಮೈದಾನದಲ್ಲಿ ಮತ್ತೆ ಇತಿಹಾಸ ಬರೆಯೋ ತವಕದಲ್ಲಿದೆ. ಬಟ್ ಪರ್ತ್​ ಟೆಸ್ಟ್ ಗೆಲುವು ಭಾರತಕ್ಕೆ ಅಷ್ಟು ಈಸಿ ಇಲ್ಲ. ತವರಿನ ಲಾಭ ಪಡೆದು  ಕಾಂಗರೂಗಳು ಎದುರಾಳಿಗಳ ವಿರುದ್ಧ ಕೆಚ್ಚೆದೆಯ ಹೋರಾಟಕ್ಕೆ ಸಜ್ಜಾಗಿದ್ದಾರೆ. ಬಟ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಆಸಿಸ್ ಪಡೆಯನ್ನ ಕಟ್ಟಿಹಾಕೋಕೆ ಬಲಿಷ್ಟ ಸೈನ್ಯವನ್ನೇ ಕಣಕ್ಕಿಳಸಬೇಕಿದೆ.

ರೋಹಿತ್ ಆಬ್ಸೆನ್ಸ್.. ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಓಪನರ್! 

ರೋಹಿತ್ ಶರ್ಮಾ ಆಬ್ಸೆನ್ಸ್​ನಲ್ಲಿ​ ಓಪನರ್ ಆಗಿ ಯಶಸ್ವಿ ಜೈಸ್ವಾಲ್​ಗೆ, ಕೆ.ಎಲ್.ರಾಹುಲ್ ಸಾಥ್ ನೀಡಲಿದ್ದಾರೆ. ಪರ್ತ್​​ ಟೆಸ್ಟ್ ಇದು ಟೀಂ ಇಂಡಿಯಾ ಮಾತ್ರವಲ್ಲದೆ ರಾಹುಲ್ ಪಾಲಿಗೂ ಡು ಆರ್ ಡೈ ಪಂದ್ಯವಾಗಿದೆ. ಹೀಗಾಗಿ ರಾಹುಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಗಾಯದಿಂದ ಫುಲ್ ಫಿಟ್ ಆಗಿರೋ ರಾಹುಲ್ ಬ್ಯಾಟ್​​ನಿಂದ ರನ್​​ ಸಿಡಿಸಲೇಬೇಕು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಬೆಂಚ್ ಕಾದು ಬಳಿಕ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸಮರದಲ್ಲೂ ಬೆಂಚ್​ ಬಿಸಿ ಮಾಡಿದ್ದ ರಾಹುಲ್​ಗೆ ಟೀಂ ಇಂಡಿಯಾದಲ್ಲಿ ಅವಕಾಶವೇ ಕೈ ತಪ್ಪಬಹುದು. ಹೀಗಾಗಿ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳಲೇಬೇಕಿದೆ. ಅಲ್ದೇ ಆಸ್ಟ್ರೇಲಿಯಾದಲ್ಲಿ ಆಡಿ ಸಾಕಷ್ಟು ಅನುಭವ ಇರೋದ್ರಿಂದ ಕೆಎಲ್ ಗೆ ಇದು ಪ್ಲಸ್ ಕೂಡ ಆಗಬಹುದು.

3ನೇ ಸ್ಲಾಟ್ ನಲ್ಲಿ ಪ್ಲೇಯಿಂಗ್ 11ಗೆ ಕನ್ನಡಿಗ ದೇವದತ್ ಪಡಿಕ್ಕಲ್? 

ಇನ್ನು ನಾರ್ಮಲ್ ಆಗಿ ನಂಬರ್ ತ್ರಿ ಸ್ಲಾಟ್ ಕಿಂಗ್ ವಿರಾಟ್ ಕೊಹ್ಲಿಯದ್ದು. ಬಟ್ ಪರ್ತ್ ಮ್ಯಾಚ್​ಗೆ ನಂಬರ್ ತ್ರಿ ಸ್ಲಾಟ್​​​ಗೆ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್​ಮನ್​ ದೇವದತ್ ಪಡಿಕ್ಕಲ್​​ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ಆಸ್ಟ್ರೇಲಿಯಾ ‘ಎ’ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಪಡಿಕ್ಕಲ್, ಟಾಪ್ ಆರ್ಡರ್​ನಲ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಧೃವ್ ಜುರೆಲ್ ಕೂಡ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಹಾಗಾಗಿ ಜುರೆಲ್ ಪರ್ತ್ ಟೆಸ್ಟ್​ನಲ್ಲಿ, ಮಿಡಲ್ ಆರ್ಡರ್​ನಲ್ಲಿ ಕಾಣಿಸಿಕೊಳ್ಳಬಹುದು. ಇರಾನಿ ಟ್ರೋಫಿ, ಆಸ್ಟ್ರೇಲಿಯಾ ‘ಎ’ ವಿರುದ್ಧ ಜುರೆಲ್, ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮತ್ತೊಂದೆಡೆ ಆಲ್​ರೌಂಡರ್ ನಿತೀಶ್ ರೆಡ್ಡಿ ಸಹ ಡೆಬ್ಯೂ ಮಾಡೋ ಸಾಧ್ಯತೆ ಇದೆ. ಟಿ-20 ಫಾರ್ಮೆಟ್​ನಲ್ಲಿ ಬ್ಯಾಟ್-ಬಾಲ್​​​ನಲ್ಲಿ ಕಾಣಿಕೆ ನೀಡೋ ನಿತೀಶ್, ರೆಡ್ ಬಾಲ್​ನಲ್ಲೂ ಇಂಪ್ಯಾಕ್ಟ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.

ಪರ್ತ್ ನೆಲದಲ್ಲಿ ಮೈದಾನಕ್ಕಿಳಿಯೋ ಸ್ಪಿನ್ನರ್ ಯಾರು? 

ಪಂದ್ಯ ನಡೆಯಲಿರುವ ಪರ್ತ್​ನ ಪೇಸ್ ಌಂಡ್ ಬೌನ್ಸಿ ಟ್ರ್ಯಾಕ್, ವೇಗಿಗಳಿಗೆ ಹೆಚ್ಚು ನೆರವಾಗುತ್ತೆ. ಹಾಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಏಕೈಕ ಸ್ಪಿನ್ನರ್ ಕಣಕ್ಕಿಳಿಯೋ ಸಾಧ್ಯತೆ ಇದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಯಂಗ್ ಆಲ್​ರೌಂಡರ್ ವಾಶಿಂಗ್ಟನ್ ಸುಂದರ್, ಅಶ್ವಿನ್ ವಿರುದ್ಧ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಆದ್ರೆ ಟೀಮ್ ಮ್ಯಾನೇಜ್ಮೆಂಟ್ ಯಾರನ್ನ ಕಣಕ್ಕಿಳಿಸುತ್ತೆ ಅನ್ನೋದೇ ತೀವ್ರ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಯುವ ವೇಗಿ ನಿತೀಶ್ ರಾಣಾ, ಪರ್ತ್​ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.   ಅಭ್ಯಾಸ ಪಂದ್ಯದಲ್ಲೂ ರಾಣಾ, ಹೆಡ್ ಕೋಚ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಗಮನ ಸೆಳೆದಿದ್ದಾರೆ. ಇವ್ರ ಜೊತೆಗೆ ಮತ್ತೋರ್ವ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಜೊತೆ ಅವಕಾಶಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಪಾಠ ಕಲಿತಿದ್ದೇವೆಂದ ಬುಮ್ರಾ!

ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಪ್ರೆಸ್​​ಮೀಟ್​ನಲ್ಲಿ ಮಾತನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ನಾವು ಪಾಠ ಕಲಿತಿದ್ದೇವೆ. ಆದರೆ ಇಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ನಮ್ಮ ಫಲಿತಾಂಶಗಳು ವಿಭಿನ್ನವಾಗಿವೆ. ಟಾಸ್‌ ವೇಳೆಗೆ ಟೀಮ್ ಇಂಡಿಯಾ ಅಂತಿಮ ಹನ್ನೊಂದರ ಬಳಗವನ್ನು ಬಹಿರಂಗಪಡಿಸಲಿದೆ ಎಂದಿದ್ದಾರೆ. ಹಾಗೇ ಟೆಸ್ಟ್ ಕ್ರಿಕೆಟ್ ಆಡುವುದಕ್ಕಿಂತ ಮತ್ತು ತಂಡವನ್ನು ಮುನ್ನಡೆಸುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ.  ಇದು ನಾನು ಬಾಲ್ಯದಿಂದಲೂ ಆಡಲು ಬಯಸಿದ ಕ್ರಿಕೆಟ್ ಸ್ವರೂಪ. ನನಗೆ ಇದು ಹೊಸ ಸವಾಲು ಎಂದಿದ್ದಾರೆ.

ಇನ್ನು 30 ವರ್ಷದ ವೇಗಿ ಬುಮ್ರಾ, ಆಸ್ಟ್ರೇಲಿಯಾದಲ್ಲಿ ಭಾರತದ ಕೊನೆಯ ಎರಡು ಟೆಸ್ಟ್ ಸರಣಿ ಗೆಲುವುಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಅವ್ರ ಆಟ ಹಾಗೂ ಕ್ಯಾಪ್ಟನ್ಸಿ ಮೇಲೆ ಹೆಚ್ಚಿನ ಹೋಪ್ಸ್ ಇಟ್ಟುಕೊಳ್ಳಲಾಗಿದೆ. ಇದು ಒಂದ್ಕಡೆಯಾದ್ರೆ ಟೆಸ್ಟ್ ಆರಂಭಕ್ಕೂ ಮುನ್ನ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯಗೊಂಡಿದ್ದಾರೆ. ಖಲೀಲ್ ಅವರನ್ನು ಈ ಸರಣಿಗೆ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದರೆ ಗಾಯದಿಂದಾಗಿ ಇದೀಗ ಭಾರತಕ್ಕೆ ವಾಪಾಸ್ ಮರಳಿದ್ದಾರೆ. ಖಲೀಲ್ ಗಾಯಗೊಂಡ ಪರಿಣಾಮ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಖಲೀಲ್ ಅಹ್ಮದ್ ಬದಲಿಗೆ ಎಡಗೈ ವೇಗದ ಬೌಲರ್ ಯಶ್ ದಯಾಳ್​ ಅವರನ್ನು ಭಾರತದ ಮೀಸಲು ಆಟಗಾರರಲ್ಲಿ ಸೇರಿಸಲಾಗಿದೆ. ಅಲ್ದೇ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಕೂಡ ಫಸ್ಟ್ ಮ್ಯಾಚ್​ನಿಂದ ಹೊರಗೆ ಉಳಿದಿರೋದ್ರಿಂದ ಪ್ಲೇಯಿಂಗ್ 11 ಸೆಟ್ ಮಾಡುವಾಗ ಜಾಗರೂಕತೆ ವಹಿಸಬೇಕಿದೆ.

Shwetha M

Leave a Reply

Your email address will not be published. Required fields are marked *