ಮಳೆಗೆ ಕೊಚ್ಚಿಹೋಯ್ತು ಮ್ಯಾಚ್ – ಪಂದ್ಯ ರದ್ದಾದ್ರೂ ಭಾರತಕ್ಕೆ ಪ್ಲಸ್
AUS ಬೌಲಿಂಗ್ ಸೀಕ್ರೆಟ್ ರಿವೀಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20ಐ ಪಂದ್ಯ ಕ್ಯಾನ್ಬೆರಾದಲ್ಲಿ ಆರಂಭವಾಯ್ತು. ಬಟ್ ಮುಕ್ತಾಯ ಕಾಣಲಿಲ್ಲ. ಮಳೆಯಿಂದಾಗಿ ಅರ್ಧದಲ್ಲೇ ಕೊಚ್ಚಿ ಹೋಯ್ತು. ಇನ್ನು ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಅದ್ರಂತೆ ಭಾರತ ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಯ್ತು. ಇನ್ನು ಭಾರತದ ಪರ ಪ್ಲೇಯಿಂಗ್ 11 ನೋಡೋದಾದ್ರೆ ಬ್ಯಾಟಿಂಗ್ನಲ್ಲಿ ಯಾವ ಚೇಂಜಸ್ ಕೂಡ ಇರ್ಲಿಲ್ಲ. ಅಂದ್ರೆ ಏಷ್ಯಾಕಪ್ನಂತೆಯೇ ಸೇಮ್ ಪ್ಲೇಯರ್ಸ್, ಸೇಮ್ ಆರ್ಡರ್ ಸೆಟ್ ಮಾಡಿದ್ರು. ಬಟ್ ಬೌಲಿಂಗ್ನಲ್ಲಿ ಚೇಂಜಸ್ ಇದೆ. ಆಲ್ರೌಂಡರ್ಗಳಾಗಿ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ರೆ ಸ್ಪಿನ್ನರ್ ಕೋಟಾದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಇಬ್ರಿಗೂ ಅವಕಾಶ ನೀಡಿದ್ದಾರೆ. ಇನ್ನು ಪೇಸ್ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಹರ್ಷಿತ್ ರಾಣಾಗೆ ಅವಕಾಶ ಕೊಟ್ಟಿರೋದೇ ಶಾಕಿಂಗ್ ಆಗಿದೆ. ಯಾಕಂದ್ರೆ ಅರ್ಶದೀಪ್ ಸಿಂಗ್ನ ಡ್ರಾಪ್ ಮಾಡಿ ರಾಣಾಗೆ ಚಾನ್ಸ್ ಕೊಟ್ಟಿದ್ರು. ಭಾರತದ ಪರ ಟಿ-20ಐನಲ್ಲಿ 100 ವಿಕೆಟ್ಗಳನ್ನ ಕಂಪ್ಲೀಟ್ ಮಾಡಿರೋ ಏಕೈಕ ಬೌಲರ್ ಅರ್ಶದೀಪ್. 65 ಮ್ಯಾಚಲ್ಲಿ 101 ವಿಕೆಟ್ ತೆಗ್ದಿದ್ದಾರೆ. ಹೀಗಿದ್ರೂ ಬೆಂಚ್ ಕಾಯಿಸಿದ್ದು ಕ್ರಿಕೆಟ್ ಪಂಡಿತರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : ಕೆನಡಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆಟ್ಟಹಾಸ – ಉದ್ಯಮಿ ದರ್ಶನ್ ಸಿಂಗ್ ಮೇಲೆ ಗುಂಡು ಹಾರಿಸಿ ಕೊಲೆ
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಆಸೀಸ್ ನೆಲದಲ್ಲಿ ಮೊದಲ ಪಂದ್ಯವಾಡಿದ ಅಭಿಷೇಕ್ ಬಿಗ್ ಹಿಟ್ಗಳಿಗೆ ಟ್ರೈ ಮಾಡ್ತಿದ್ರು. ಬಟ್ 14 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 19 ರನ್ ಗಳಿಸಿದ್ದಾಗ ನಾಥನ್ ಎಲ್ಲಿಸ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದ್ರು. ಇನ್ನು ಮೂರನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದ ಸೂರ್ಯ ಸೆಟಲ್ ಆಗ್ತಿದ್ರು. 5 ಓವರ್ಗಳ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿತ್ತು ಟೀಮ್ ಇಂಡಿಯಾ. ಐದನೇ ಓವರ್ ಮುಕ್ತಾಯದ ಬೆನ್ನಲ್ಲೇ ಮಳೆ ಎಂಟ್ರಿ ಕೊಟ್ಟಿದ್ದು ಕೆಲ ಕಾಲ ಪಂದ್ಯ ಸ್ಥಗಿತವಾಗಿತ್ತು. ಆ ಬಳಿಕ ಪಂದ್ಯ ಮತ್ತೆ ಶುರುವಾಗಿದ್ದು ಪಂದ್ಯದಲ್ಲಿ 4 ಓವರ್ಗಳನ್ನ ಕಡಿತಗೊಳಿಸಲಾಗಿತ್ತು. ಅಂದ್ರೆ ತಲಾ 18 ಓವರ್ಗಳಿಗೆ ಮ್ಯಾಚ್ ಸೀಮಿತಮಾಡಿದ್ರು. ಮಳೆ ನಿಂತು ಪಂದ್ಯ ಮತ್ತೆ ಶುರುವಾಗಿದ್ದು ಈ ವೇಳೆ ಮತ್ತೆ ಮಳೆ ಬಂತು. ಈ ವೇಳೆಗೆ ಟೀಂ ಇಂಡಿಯಾ 9.4 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದ್ದಾಗ ಮ್ಯಾಚ್ನ ಮತ್ತೆ ಸ್ಥಗಿತಗೊಳಿಸಲಾಗಿತ್ತು. ಆ ನಂತ್ರ ಭಾರತೀಯ ಕಾಲಮಾನ 4.30 ಆದ್ರೂ ಮಳೆ ನಿಲ್ಲಲೇ ಇಲ್ಲ. ಸೋ ಫೈನಲ್ಲಾಗಿ ಪಂದ್ಯವನ್ನೇ ರದ್ದುಗೊಳಿಸಿದ್ರು. ಸೋ ಅಲ್ಲಿಗೆ ಐದು ಪಂದ್ಯಗಳ ಸರಣಿಯ ಮೊದಲನೇ ಪಂದ್ಯ ವಾಶ್ ಔಟ್ ಆಗಿದ್ದು ಉಭಯ ತಂಡಗಳು ಸೇಮ್ ಪೊಸಿಷನ್ನಲ್ಲಿವೆ. ಹೀಗಿದ್ರೂ ಭಾರತಕ್ಕೆ ಕೆಲ ಅಡ್ವಾಂಡೇಜ್ ಆಗಿದೆ.
ಪಂದ್ಯ ರದ್ದಾದ್ರೂ ಭಾರತಕ್ಕೆ ಕಾನ್ಫಿಡೆನ್ಸ್!
ಆಸ್ಟ್ರೇಲಿಯಾದಲ್ಲಿ ಫಸ್ಟ್ ಟೈಂ ಅಭಿಷೇಕ್ ಶರ್ಮಾ ಬ್ಯಾಟಿಂಗ್
ಶುಭ್ ಮನ್ ಗಿಲ್ ಮತ್ತು ಸೂರ್ಯಕುಮಾರ್ ಕಂ ಬ್ಯಾಕ್
ಗಿಲ್ 37(20) ಹಾಗೇ ಸೂರ್ಯ 39(24) ರನ್ಸ್ ಕಲೆ
ಆಸ್ಟ್ರೇಲಿಯಾ ಬೌಲಿಂಗ್ ಟೆಕ್ನಿಕ್ ಬಗ್ಗೆ ಒಂದು ಐಡಿಯಾ
ಮುಂದಿನ 4 ಪಂದ್ಯಗಳಲ್ಲಿ 3 ಮ್ಯಾಚ್ ಗೆದ್ರೆ ಸರಣಿ ಕೈವಶ
ಆಸೀಸ್ ನಲ್ಲಿ ಫಸ್ಟ್ ಟೈಂ ಆಡ್ತಿರೋ 9 ಪ್ಲೇಯರ್ಸ್
ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಹಾಗೂ ಜಿತೇಶ್ ಶರ್ಮಾಗೂ ಇದು ಮೊದಲ ಆಸ್ಟ್ರೇಲಿಯಾ ಪ್ರವಾಸ. ಇದ್ರಲ್ಲಿ 6 ಆಟಗಾರರು ಪ್ಲೇಯಿಂಗ್ 11 ನಲ್ಲಿ ಚಾನ್ಸ್ ಪಡ್ಕೊಂಡಿದ್ದಾರೆ. ಈ ಪಂದ್ಯದ ರಿಸಲ್ಟ್ ಬರದೇ ಇದ್ರೂ ಆಸೀಸ್ ಪಿಚ್ ಬಗ್ಗೆ ಒಂದು ಐಡಿಯಾ ಅಂತೂ ಗ್ಯಾರಂಟಿ ಬಂದಿರುತ್ತೆ. ಇದೆಲ್ಲಾ ಒಂದ್ಕಡೆಯಾದ್ರೆ ಭಾರತಕ್ಕೆ ಅತೀ ಹೆಚ್ಚು ತಲೆನೋವು ತಂದಿರೋದೇ ಟಾಸ್ ಸೋಲು.
ಅದ್ಯಾಕೋ ಏನೋ ಟಾಸ್ಗೂ ಟೀಂ ಇಂಡಿಯಾಗೂ ಆಗಿ ಬರಲ್ಲ ಅನ್ಸುತ್ತೆ. ಟೆಸ್ಟ್ ಆಗ್ಲಿ, ಓಡಿಐ, ಇರ್ಲಿ, ಟಿ-20 ಆಡ್ಲಿ ಟಾಸ್ ಸೋಲೋದೇ ಆಯ್ತು. ಆಸೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3ಕ್ಕೆ ಮೂರೂ ಪಂದ್ಯಗಳಲ್ಲೂ ಟಾಸ್ ಸೋತಿದ್ರು. ಅಚ್ಚರಿಯ ವಿಚಾರ ಏನಪ್ಪಾ ಅಂದ್ರೆ 2023ರ ಏಕದಿನ ವಿಶ್ವಕಪ್ ಫೈನಲ್ನಿಂದ ಇಲ್ಲೀವರೆಗೆ ಭಾರತ 18 ಏಕದಿನ ಪಂದ್ಯಗಳನ್ನ ಆಡಿದೆ. ಬಟ್ ಹದಿನೆಂಟರಲ್ಲೂ ಟಾಸ್ ಸೋತಿದೆ. ಇನ್ನು ಗಿಲ್ ಟೆಸ್ಟ್ ಕ್ಯಾಪ್ಟನ್ ಆದ್ಮೇಲೆ 7ನೇ ಮ್ಯಾಚಲ್ಲಿ ಟಾಸ್ ವಿನ್ ಆಗ್ತಾರೆ. ಈಗ ಟಿ-20ಐನಲ್ಲೂ ಮೊದಲ ಪಂದ್ಯದಲ್ಲೇ ಟಾಸ್ ಸೋತ್ರು. ಌಕ್ಚುಲಿ ಕ್ರಿಕೆಟ್ನಲ್ಲಿ ಟಾಸ್ ತುಂಬಾನೇ ಮ್ಯಾಟ್ರ್ ಆಗುತ್ತೆ. ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ಬೇಕಾ ಅಥವಾ ಬೌಲಿಂಗ್ ಮಾಡೋದಾ ಅನ್ನೋ ಆಪ್ಶನ್ಸ್ ಇರುತ್ತೆ. ಬಟ್ ಸೋತಾಗ ಲೆಕ್ಕಾಚಾರಗಳೇ ಉಲ್ಟಾ ಆಗುತ್ತೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲೂ ಇದೇ ಆಗಿದ್ದು.

ನೋಡಿರಿ

