ಫಸ್ಟ್ ಮ್ಯಾಚಲ್ಲಿ RO-KO ಪಲ್ಟಿ – 2027ರ ವಿಶ್ವಕಪ್ ಕನಸು ಭಗ್ನ?
ಮುಂದಿನ 2 ಪಂದ್ಯಗಳ ಅಗ್ನಿಪರೀಕ್ಷೆ!

ಫಸ್ಟ್ ಮ್ಯಾಚಲ್ಲಿ RO-KO ಪಲ್ಟಿ – 2027ರ ವಿಶ್ವಕಪ್ ಕನಸು ಭಗ್ನ?ಮುಂದಿನ 2 ಪಂದ್ಯಗಳ ಅಗ್ನಿಪರೀಕ್ಷೆ!

ಏಷ್ಯಾಕಪ್​ನಲ್ಲಿ ಭಾರತದ ಪಾಲಿಗೆ ಸೂಪರ್ ಸಂಡೇ ಆಗಿದ್ದ ಭಾನುವಾರ ಆಸ್ಟ್ರೇಲಿಯಾ ಸರಣಿಯಲ್ಲಿ ಬ್ಯಾಡ್​ಲಕ್ ಭಾನುವಾರವಾಗಿದೆ. ಪರ್ತ್ ಸ್ಟೇಡಿಯಮ್​ನಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ಹೊಡೆತದ ಮೇಲೆ ಹೊಡೆತ ತಿಂದಿದೆ. ಆಫ್ಟರ್ ಎ ಲಾಂಗ್ ಬ್ರೇಕ್ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ರು. ಆದ್ರೆ ಈ ಫೇಲ್ಯೂರ್ ಹತ್ತಾರು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. 2027ರ  ವಿಶ್ವಕಪ್ ಆಡಿಸ್ಬೇಕಾ ಬೇಡ್ವಾ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : RCB ಫ್ರಾಂಚೈಸಿ ಸೇಲ್ ಸೇಲ್ – 17,587 ಕೋಟಿ ರೂ.. 6 ಕಂಪನಿ ರೇಸ್

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದೆ. ಭಾರತದ ಪರ ಕೊನೇದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡಿದ್ರು. ಬಟ್ ಫಸ್ಟ್ ಮ್ಯಾಚಲ್ಲೇ ಫ್ಲ್ಯಾಪ್ ಆಗಿದ್ದಾರೆ.  ರೋಹಿತ್ ಶರ್ಮಾ 14 ಬಾಲ್ ಗಳನ್ನ ಫೇಸ್ ಮಾಡಿ 1 ಫೋರ್ ಸೇರಿದಂತೆ 8 ರನ್ ಗಳಿಸಿ ಔಟಾದ್ರು. ಜೋಶ್ ಹೇಜಲ್​ವುಡ್​ಗೆ ವಿಕೆಟ್ ಒಪ್ಪಿಸಿದ್ರು. ಇತ್ತ ವಿರಾಟ್ ಕೊಹ್ಲಿಯಾದ್ರೂ ಬಿಗ್ ಇನ್ನಿಂಗ್ಸ್ ಆಡ್ತಾರೆ ಅನ್ಕೊಂಡ್ರೆ ಅವ್ರಿಂದಲೂ ನಿರಾಸೆ. 8 ಬಾಲ್​ಗಳನ್ನ ಫೇಸ್ ಮಾಡಿದ ಕೊಹ್ಲಿ ಖಾತೆಯನ್ನೂ ತೆರೀಲಿಲ್ಲ. ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟು ಡಕ್ ಔಟ್ ಆದ್ರು. ಕೂಪರ್ ಕೊನೊಲಿ ಅದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದ್ರು. ಈ ಇಬ್ಬರ ಫೇಲ್ಯೂರ್​ನಿಂದ ಫ್ಯಾನ್ಸ್ ಹಾರ್ಟ್ ಬ್ರೇಕ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನ ಹಾಕೋ ಮೂಲಕ ಮೀಮ್ಸ್ ಗಳನ್ನ ಶೇರ್ ಮಾಡ್ತಿದ್ದಾರೆ.

ಕಿಂಗ್ ವಿರಾಟ್ ಕೊಹ್ಲಿಯವ್ರ 8 ಬಾಲ್ ಡಕ್ ನೋಡಲು ನಾನು ನಿನ್ನೆ ರಾತ್ರಿ ನಿದ್ದೆ ಮಾಡಲಿಲ್ಲ ಅಂತಾ ಒಬ್ಬ  ಬಳಕೆದಾರರು ಬರೆದಿದ್ದರೆ, ರೋಹಿತ್ – ಕೊಹ್ಲಿ ಕಮ್‌ಬ್ಯಾಕ್‌ಗಾಗಿ ತುಂಬಾ ಸಮಯದಿಂದ ಕಾಯುತ್ತಿದ್ದೆ. ಆದರೆ, ಭಾನುವಾರ ಬರ್ಬಾದ್ ಆಯಿತು ಎಂದು ಮತ್ತೊಬ್ಬರು ಬರ್ಕೊಂಡಿದ್ದಾರೆ. ಹೀಗೆ ಒಂದಷ್ಟು ಫ್ಯಾನ್ಸ್ ರೋಕೊ ಜೋಡಿಯಿಂದ ನಿರಾಸೆಯಾಗಿದೆ, ಬಿಗ್ ಇನ್ನಿಂಗ್ಸ್ ಬರ್ಬೇಕಿತ್ತು ಅಂತಾ ಪೋಸ್ಟ್​ಗಳನ್ನ ಹಾಕಿಕೊಂಡ್ರೆ ಇನ್ನೂ ಕೆಲವ್ರು ರೋಹಿತ್-ಕೊಹ್ಲಿ ಬೇಗ ಔಟ್ ಆಗಿದ್ದಕ್ಕೆ ಬಿಸಿಸಿಐಗೆ ಖುಷಿಯಾಗಿದೆ ಅಂತಾ ಬರ್ಕೊಂಡಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅಂತೂ ಫುಲ್ ಹ್ಯಾಪಿಯಾಗಿರ್ತಾರೆ ಅಂತಾ ಸಾಗರ್ ಅನ್ನೋ ಅಕೌಂಟ್​ನಿಂದ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೇರೆ ಬೇರೆ ಅಕೌಂಟ್​ಗಳಿಂದ ರೋಹಿತ್-ಕೊಹ್ಲಿ ಬಗ್ಗೆ ಮೀಮ್ಸ್ ಹರಿದಾಡ್ತಿವೆ. ಬಟ್ ನಿಜ ಹೇಳ್ಬೇಕಂದ್ರೆ ಈ ಇಬ್ಬರು ಲೆಜೆಂಡರಿ ಪ್ಲೇಯರ್ಸ್​ಗೆ ಆಸ್ಟ್ರೇಲಿಯಾ ಸರಣಿ ತುಂಬಾನೇ ಇಂಪಾರ್ಟೆಂಟ್. ಆಲ್ರೆಡಿ ಟಿ-20ಐ ಮತ್ತು ಟೆಸ್ಟ್ ಕ್ರಿಕೆಟ್​ಗೆ ಗುಡ್ ಬೈ ಹೇಳಿರೋದ್ರಿಂದ ಏಕದಿನ ಸರಣಿಯಲ್ಲಿ ಅವ್ರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇಬ್ಬರು ಆಟಗಾರರು 2027ರ ಏಕದಿನ ವಿಶ್ವಕಪ್​ನಲ್ಲಿ ಆಡ್ಬೇಕು ಅನ್ನೋ ಇಂಟೆನ್ಷನ್​ನಲ್ಲಿ ಇರೋದ್ರಿಂದ ಅವ್ರ ಫಾರ್ಮ್​ನ ಪ್ರೂವ್ ಮಾಡಿಕೊಳ್ಬೇಕಿದೆ. ಈಗಾಗ್ಲೇ ಬಿಸಿಸಿಐ ಇಬ್ಬರನ್ನೂ ಹೊರಗಿಟ್ಟು ಯಂಗ್​ಸ್ಟರ್ಸ್​ಗೆ ಅವಕಾಶ ನೀಡ್ಬೇಕು ಅನ್ನೋ ಯೋಜನೆಯಲ್ಲಿ ಇರೋದ್ರಿಂದ ಅಟ್​ಲೀಸ್ಟ್ ಇನ್ನೂ ಕೆಲ ಪಂದ್ಯಗಳಲ್ಲಾದ್ರೂ ಆಡ್ಬೇಕು ಅಂದ್ರೆ ಇಬ್ಬರಿಂದ ರನ್ಸ್ ಬೇಕೇಬೇಕು. ಅಷ್ಟಕ್ಕೂ ಫಸ್ಟ್ ಮ್ಯಾಚಲ್ಲಿ ಮಂಕಾಗೋಕೆ ಕೆಲ ಕಾರಣಗಳೂ ಕೂಡ ಇದೆ. ಒಂದು 7 ಮಂತ್ಸ್ ಗ್ಯಾಪ್.. ಐಪಿಎಲ್ ಆಡಿ 5 ತಿಂಗಳಾಯ್ತು. ಜೊತೆಗೆ ಫಸ್ಟ್ ಮ್ಯಾಚ್​ಗೂ ಮುನ್ನ ಜಸ್ಟ್ 2 ಡೇಸ್ ಅಷ್ಟೇ ಪ್ರಾಕ್ಟೀಸ್. ಇನ್ನು ಮಳೆ ಬಂದು ಪಿಚ್ ಬೇರೆ ಒದ್ದೆಯಾಗಿತ್ತು. ಹಾಗಂತ ಉಳಿದ ಬ್ಯಾಟರ್​ಗಳಿಂದಲೂ ಬಿಗ್ ಸ್ಕೋರ್ ಬಂದಿಲ್ಲ. ಆದ್ರೆ ಇಲ್ಲಿ ರೋ-ಕೊ ಜೋಡಿ ಮೇಲೆ ಎಲ್ಲರ ಕಣ್ಣಿದ್ದು ಕೆರಿಯರ್ ಎಂಡ್​ನಲ್ಲಿ ಇರೋದ್ರಿಂದ ಆಡ್ಲೇಬೇಕಾಗುತ್ತೆ. ಸೋ ಫಸ್ಟ್ ಮ್ಯಾಚಲ್ಲಂತೂ ರನ್ಸ್ ಬಂದಿಲ್ಲ ನಿಜ. ನೆಕ್ಸ್​ಟ್ ಅಕ್ಟೋಬರ್ 23 ಮತ್ತು 25ಕ್ಕೆ ಎರಡು ಮತ್ತು ಮೂರನೇ ಮ್ಯಾಚ್ ಇದೆ. ಉಳಿದ ಎರಡು ಪಂದ್ಯಗಳಲ್ಲಾದ್ರೂ ಕಮ್ ಬ್ಯಾಕ್ ಮಾಡ್ಲೇಬೇಕು.

Shantha Kumari