ಅಫ್ಘಾನ್ಗೆ ಭಾರತ ಫಾಲೋಆನ್ ಅಸ್ತ್ರ – ಡೆಬ್ಯೂ ಮ್ಯಾಚ್ನಲ್ಲೇ ಸುತಾರ್ 6 ವಿಕೆಟ್
3ನೇ ದಿನವೇ ಗೆದ್ದ ಟೀಂ IND?

ನ್ಯೂ ಚಂಡೀಗಢದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಏಕೈಕ ಟೆಸ್ಟ್ ಪಂದ್ಯದ ರೋಚಕ ಘಟ್ಟ ತಪ್ಪಿದೆ. ಎರಡನೇ ದಿನದಾಟದ ಅಂತ್ಯದಲ್ಲಿ, ಭಾರತ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಹಿಡಿತ ಸಾಧಿಸಿದ್ರೆ 3ನೇ ದಿನದಾಟದದ ಆರಂಭದಲ್ಲೇ ಅಘ್ಘಾನ್ ರನ್ಗಳಿಸೋಕೆ ಪರದಾಡಿ ಆಲ್ಔಟ್ ಆಯ್ತು. 2ನೇ ದಿನಾಟದಲ್ಲಿ564 ರನ್ಗೆ ಭಾರತ ಡಿಕ್ಲೇರ್ ಮಾಡಿಕೊಳ್ತು. ಅದರಲ್ಲೂ ಪದಾರ್ಪಣೆ ಪಂದ್ಯದಲ್ಲಿ ಮಾನವ್ ಸುತಾರ್ ಬೆಂಕಿ ಬಿರುಗಾಳಿ ಬೌಲಿಂಗ್ ಮಾಡಿದ್ರು. ಮೊದಲ ಟೆಸ್ಟ್ ಪದ್ಯದಲ್ಲಿ, ಮೊದಲ ಓವರ್ನಲ್ಲಿ.. ಮೊದಲ ಇನ್ನಿಂಗ್ಸ್ನಲ್ಲಿ ವಿಕೆಟ್ ಮೇಲೆ ವಿಕೆಟ್ ತೆಗೆದು ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ಗೆ ಅಫ್ಘಾನ್ ಪತರುಗುಟ್ಟಿ ಹೋಗಿದೆ.
ಅಫ್ಘಾನ್ ಮತ್ತು ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವೇ ಪಾರುಪತ್ಯ ಸಾಧಿಸಿದೆ. ಟೀಂ ಇಂಡಿಯಾ ಆಲ್ರೌಂಡ್ ಆಟಕ್ಕೆ ಅಫ್ಘಾನ್ ಮಂಕಾಗಿ ಹೋಗಿದೆ. ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ಅನ್ನು 564 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡ್ರೆ, 3ನೇ ದಿನದಾಟದ ಆರಂಭದಲ್ಲಿ ಅಫ್ಘಾನ್ನನ್ನ ಟೀಂ ಇಂಡಿಯಾ ಆಲ್ಔಟ್ ಮಾಡಿದೆ.
ಇನ್ನು ಈ ಪಂದ್ಯದಲ್ಲಿ ಭಾರತದ ಪರ ಶುಭಮನ್ ಗಿಲ್, ರಿಷಭ್ ಪಂತ್, ಕೆಎಲ್ ರಾಹುಲ್ ಅಮೋಘ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ 126 ರನ್ ಗಳಿಸಿದರೆ, ರಾಹುಲ್ 100 ರನ್ ಸಿಡಿಸಿದರು. ಸುದರ್ಶನ್ ಮತ್ತು ಪಂತ್ ತಲಾ 81 ರನ್ ಗಳಿಸಿದರು. ಸುಂದರ್ ಕೂಡ ಅಜೇಯ 52 ರನ್ ಗಳಿಸಿದರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಬೃಹಕ್ ಮೊತ್ತ ಕಲೆಹಾಕಿ ಡಿಕ್ಲೆರ್ ಮಾಡಿಕೊಳ್ತು.
ಸುತಾರ್ ಸುಂಟರಗಾಳಿ ಬೌಲಿಂಗ್
ಬ್ಯಾಟರ್ಗಳ ಅಮೋಘ ಪ್ರದರ್ಶನದ ಬಳಿಕ ಯುವ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಮಾರಕ ದಾಳಿ ನಡೆಸಿದ್ರು. ಇದರೊಂದಿಗೆ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮಾನವ್ ಸುತಾರ್ ಬಿಗುವಿನ ದಾಳಿ ನಡೆಸಿ ಆರ್ಭಟಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಸುತಾರ್ 6 ವಿಕೆಟ್ ಪಡೆದು ಬೀಗಿದ್ದಾರೆ. ಸುತಾರ್ ತಮ್ಮ ಮೊದಲ ಓವರ್ನಲ್ಲಿಯೇ ವಿಕೆಟ್ ಪಡೆಯುವ ಮೂಲಕ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದರು.
ಅಫ್ಘಾನಿಸ್ತಾನ ವಿರುದ್ಧದ ಈ ಟೆಸ್ಟ್ ಪಂದ್ಯಕ್ಕೆ ಸ್ಟಾರ್ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ಮಾನವ್ ಸುತಾರ್ ಬ್ಯಾಟಿಂಗ್ನಲ್ಲಿ 41 ಎಸೆತಗಳಲ್ಲಿ 28 ರನ್ ಸಿಡಿಸಿದರು. ಭಾನುವಾರ ಇವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಂಡು ಬೌಲ್ ಮಾಡಿದ ಸುತಾರ್ ಮೊದಲ ಓವರ್ನಲ್ಲೇ, ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್ಮನ್ ಅಬ್ದುಲ್ ಮಲಿಕ್ ಅವರನ್ನು ನಾಲ್ಕನೇ ಎಸೆತದಲ್ಲಿ ಔಟ್ ಮಾಡಿದರು. ಮಲಿಕ್ ಬಳಿಕ ಗುರ್ಬಾಜ್ ಹಾಗೂ ಅಫ್ಸರ್ ವಿಕೆಟನ್ನೂ ಮಾನವ್ ಪಡೆಯುವ ಮೂಲಕ ಆಫ್ಘನ್ ಆಟಕ್ಕೆ ಕಡಿವಾಣ ಹಾಕಿದರು. 3ನೇ ದಿನವೂ ಕೂಡ ಸುತಾರ್ ಆರ್ಭಟ ನಿಲ್ಲಲಿಲ್ಲ.. ಇವತ್ತು ಕೂಡ 3 ವಿಕೆಟ್ ಕಬಳಿಸಿ ಒಟ್ಟು ಪದಾರ್ಪಣೆ ಪಂದ್ಯದಲ್ಲೇ ಒಟ್ಟು 6 ವಿಕೆಟ್ ಕಬಳಿಸಿದ್ರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲಲೇ ಮಾನವ್ 22 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮಾನವ್ ಸುತಾರ್ ಚರಿತ್ರೆ – ಅಫ್ಘಾನಿಸ್ತಾನದ ಮೇಲೆ ಫಾಲೋಆನ್ ಹೇರಿದ ಟೀಮ್ ಇಂಡಿಯಾ
ಭಾರತೀಯ ಬೌಲರ್ ತಮ್ಮ ಮೊದಲ ಟೆಸ್ಟ್ ಪಂದ್ಯದ ಮೊದಲ ಓವರ್ನಲ್ಲೇ ವಿಕೆಟ್ ಪಡೆದು 25 ವರ್ಷಗಳು ಕಳೆದಿದ್ದವು. ಈಗ ಈ ಸಾಧನೆ ಮಾನವ್ ಸುತಾರ್ ಅವರ ಪಾಲಾಗಿದೆ. ಹಾಗೇ ಟೆಸ್ಟ್ನಲ್ಲಿ ಪಾದಾರ್ಪಣೆ ಪಂದ್ಯದ ಮೊದಲ ಓವರ್ನಲ್ಲೇ ವಿಕೆಟ್ ಕಿತ್ತ ಭಾರತದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಮಾನವ್ ಸುತಾರ್ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಬಿಗಿ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿ ಅಫ್ಘಾನ್ ಬ್ಯಾಟರ್ಗೆ ಪೆವಿಲಿಯನ್ ಹಾದಿ ತೋರಿದರು. ಇನ್ನೂ ಟೀಂ ಇಂಡಿಯಾ ಅಫ್ಘಾನ್ಗೆ ಫಾಲೋ ಆನ್ ಹೇರಿದ್ದು, ಅಪ್ಘಾನ್ ಮತ್ತೆ ಬ್ಯಾಟಿಂಗ್ ಶುರುಮಾಡಿದೆ. ಅಫ್ಘಾನ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ 412 ರನ್ಗಳಿಸಬೇಕಿದೆ. ಟೀಂ ಇಂಡಿಯಾ ಬೌಲರ್ ಅಬ್ಬರದ ನಡುವೆ ಈ ಸ್ಕೋರ್ ಕಲೆಹಾಕೋದು ಅಫ್ಘಾನ್ಗೆ ಕಷ್ಟ.. ಸೆಕಂಡ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡ್ತಿರೋ ಅಫ್ಘಾನ್ 3ನೇ ದಿನದ ಅಂತ್ಯಕ್ಕೆ ಅಫ್ಘಾನ್ ಆಲ್ಔಟ್ ಆಗೋ ಸಾಧ್ಯತೆ ಹೆಚ್ಚಿದ್ದು, ಟೀಂ ಇಂಡಿಯಾ ಅಫ್ಘಾನ್ ವಿರುದ್ಧ ಏಕೈಕೆ ಟೆಸ್ಟ್ ಪಂದ್ಯವನ್ನ ಗೆಲ್ಲೋದು ಬಹುತೇಕೆ ಪಕ್ಕಾ ಆಗಿದೆ.

ನೋಡಿರಿ

