IND Vs AFG.. ಕೊಹ್ಲಿಗೆ ಕೊಕ್? – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?  
ವಿಂಡೀಸ್ ನಲ್ಲಿ ರೋHIT ಗೇಮ್ ಹೇಗಿದೆ?

IND Vs AFG.. ಕೊಹ್ಲಿಗೆ ಕೊಕ್? – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?  ವಿಂಡೀಸ್ ನಲ್ಲಿ ರೋHIT ಗೇಮ್ ಹೇಗಿದೆ?

ಟಿ-20 ವಿಶ್ವಕಪ್​ನಲ್ಲಿ ಸೂಪರ್ 8 ಸುತ್ತಿನ ಸಮರ ಶುರುವಾಗಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವಿನ ಶುಭಾರಂಭ ಮಾಡಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ್ದ ಅಮೆರಿಕ, ಸೂಪರ್ -8 ಹಂತದ ಮೊದಲ ಪಂದ್ಯದಲ್ಲಿ ಇನ್ನೇನು ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 19ನೇ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ ತೋರಿದ ಸಾಹಸ ಪಂದ್ಯದ ದಿಕ್ಕನ್ನೇ ಬದಲಿಸಿತು. ಪರಿಣಾಮ ಅಮೆರಿಕ ಸೋಲೊಪ್ಪಿಕೊಳ್ಳಬೇಕಾಯ್ತು. ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಿದ್ವು. ವೆಸ್ಟ್ ಇಂಡೀಸ್ ನೀಡಿದ್ದ 181 ರನ್​ಗಳ ಟಾರ್ಗೆಟ್ ಅನ್ನ 17ನೇ ಓವರ್​ನಲ್ಲೇ ರೀಚ್ ಆಗುವ ಮೂಲಕ ಇಂಗ್ಲೆಂಡ್ ತಂಡ ಗೆದ್ದುಕೊಳ್ತು. ಇದೀಗ ಸೂಪರ್ 8ನ ಮೂರನೇ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಭಾರತದ ವಿರುದ್ಧ ಅಫ್ಘಾನಿಸ್ತಾನ ಕಣಕ್ಕಿಳಿಯಲಿದೆ. ಇಲ್ಲಿ ಟೀಂ ಇಂಡಿಯಾದ ಹಿಂದಿನ ದಾಖಲೆಗಳನ್ನ ನೋಡಿದ್ರೆ ಸ್ಟ್ರಾಂಗ್ ಅಂತಾ ಕಂಡ್ರೂ ಆಫ್ಘನ್ ತಂಡವನ್ನ ಈಸಿಯಾಗಿ ತೆಗೆದುಕೊಳ್ಳೋಕೆ ಆಗಲ್ಲ.

ಇದನ್ನೂ ಓದಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ದುರಂತ ಅಂತ್ಯ- 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣು

ಬುಧವಾರದಿಂದಲೇ ಟಿ20 ವಿಶ್ವಕಪ್​​​​ನಲ್ಲಿ ಸೂಪರ್​​​​-8 ಪಂದ್ಯಗಳು ಆರಂಭಗೊಂಡಿವೆ. ಆದರೆ ಟೀಮ್ ಇಂಡಿಯಾದ ಅಭಿಯಾನ ಶುರುವಾಗೋದು ಇಂದಿನಿಂದ. ಮೊದಲ ಪಂದ್ಯದಲ್ಲೇ ಭಾರತ ತಂಡ ಡೇಂಜರಸ್​​ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಭಾರತಕ್ಕೆ ಮೊದಲೆರಡು ಪಂದ್ಯಗಳಲ್ಲಿ ಆಫ್ಘನ್‌ ಹಾಗೂ ಬಾಂಗ್ಲಾದೇಶ ಎದುರಾಗಲಿದ್ದು, 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಹೀಗಾಗಿ ಮೂರನೇ ಪಂದ್ಯಕ್ಕೂ ಮುನ್ನವೇ ಸೆಮಿಫೈನಲ್‌ಗೆ ಪ್ರವೇಶ ಖಚಿತಪಡಿಸಿಕೊಳ್ಳುವುದು ಟೀಂ ಇಂಡಿಯಾದ ಗುರಿಯಾಗಲಿದೆ. ಆದ್ರೆ ಗ್ರೂಪ್​ ಸ್ಟೇಜ್​​ನಲ್ಲಿ ದೊಡ್ಡ ತಂಡಗಳಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಅಫ್ಘನ್​ ಭಾರತಕ್ಕೆ ಶಾಕ್ ಕೊಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ  ಗ್ರೂಪ್​ ಸ್ಟೇಜ್​​ನಲ್ಲಿ ಅಜೇಯವಾಗಿದ್ದ ಭಾರತ ಮತ್ತೊಂದು ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಬಾರ್ಬಡೋಸ್​ನಲ್ಲಿ ನಡೆಯುವ ಸೂಪರ್​​​-8 ಹಣಾಹಣಿಯಲ್ಲಿ ಬಲಾಢ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ಉಭಯ ತಂಡಗಳು ಶುಭಾರಂಭ ಮಾಡೋಕೆ ಕಾತರರಾಗಿದ್ದು ಏಷ್ಯನ್​ ತಂಡಗಳಿಗೆ ಗೆಲುವೊಂದೇ ಗುರಿಯಾಗಿದೆ. ಬಟ್ ಇಲ್ಲಿ ಅಫ್ಘಾನಿಸ್ತಾನವನ್ನ ಮಟ್ಟ ಹಾಕ್ಬೇಕು ಅಂದ್ರೆ ಭಾರತ ತಂಡದಲ್ಲಿ ಕೆಲ ಬದಲಾವಣೆ ಮಾಡಬೇಕಿದೆ.

ಅಪ್ಘಾನಿಸ್ತಾನ ಎಷ್ಟು ಡೇಂಜರಸ್ ಅನ್ನೋದು ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಇಡೀ ಜಗತ್ತೇ ನೋಡ್ತಿದೆ. ಇಂತಹ​​ ತಂಡವನ್ನ ಬಗ್ಗುಬಡಿಯಬೇಕು ಅಂದ್ರೆ ಟೀಂ ಇಂಡಿಯಾಗೆ ಉತ್ತಮ ಓಪನಿಂಗ್ ಸಿಗ್ಬೇಕು. ಬಟ್  ಭಾರತಕ್ಕೆ ಆರಂಭಿಕರೇ ದೊಡ್ಡ ತಲೆನೋವಾಗಿದ್ದಾರೆ. ಗ್ರೂಪ್ ಸ್ಟೇಜ್​ನಲ್ಲಿ ರೋಹಿತ್​​​-ಕೊಹ್ಲಿ ಜೋಡಿ ಓಪನರ್ ಆಗಿ ಕಣಕ್ಕಿಳಿದು ಫೇಲ್ಯೂರ್ ಆಗಿದೆ. 22 ರನ್​ ಇದುವರೆಗಿನ ಬೆಸ್ಟ್​ ಪಾರ್ಟ್ನರ್​​ಶಿಪ್​ ಆಗಿದೆ. ಸೋ ಇವತ್ತಾದ್ರೂ ಈ ಜೋಡಿ ಬಿಗ್ ಸ್ಕೋರ್ ಹಿಟ್ ಮಾಡೋ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಅದ್ರಲ್ಲೂ ಈ ಸಲ ತುಂಬಾನೇ ಚರ್ಚೆ ಆಗ್ತಿರೋ ವಿಚಾರ ಅಂದ್ರೆ ಅದು ಕಿಂಗ್ ಕೊಹ್ಲಿ ಆರಂಭಿಕ ಸ್ಥಾನ. ಟೂರ್ನಿಯಲ್ಲಿ ರನ್ ಗಳಿಸೋಕೆ ಪರದಾಡ್ತಿರೋ ಕೊಹ್ಲಿಯವ್ರನ್ನ ಆರಂಭಿಕ ಸ್ಥಾನದಿಂದ ಕೆಳಗಿಳಿಸಿ ಫೇವರಿಟ್ 3ನೇ ಸ್ಲಾಟ್​ನಲ್ಲಿ ಆಡಿಸ್ಬೇಕು ಅನ್ನೋ ಮಾತು ಕೇಳಿ ಬರ್ತಿದೆ. ಈ ಸ್ಲಾಟ್​ನಲ್ಲಿ ವಿರಾಟ್​​ ರೆಕಾಡ್ಸ್​​ ಅದ್ಭುತವಾಗಿದೆ. ಹೀಗಾಗಿ ಕೊಹ್ಲಿಗೇನಾದ್ರೂ ಓಪನರ್ ಸ್ಥಾನದಿಂದ ಕೊಕ್​ ನೀಡಿದ್ರೆ ಜೈಸ್ವಾಲ್​​ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಅಲ್ದೇ ಈ ಹಿಂದೆ ಭಾರತ ಲೀಗ್ ಹಂತದ ಪಂದ್ಯಗಳನ್ನ ಅಮೆರಿಕದಲ್ಲಿ ಆಡಿತ್ತು. ಅಮೆರಿಕದ ಪಿಚ್​ಗಳು ವೇಗಿಗಳ ಸ್ವರ್ಗವಾಗಿತ್ತು. ಅಲ್ಲಿ ಭಾರತ ತಂಡ ನಾಲ್ವರು ಫಾಸ್ಟ್ ಬೌಲರ್​ಗಳನ್ನ ಆಡಿಸಿತ್ತು. ಆದರೆ ವೆಸ್ಟ್​​ಇಂಡೀಸ್​ ತಾಣಗಳಲ್ಲಿ ಸ್ಪಿನ್ನರ್ಸ್​ಗೆ ಹೆಚ್ಚು ಸಹಕಾರಿಯಾಗಿದೆ. ಸೋ ಮೂವರು ಫಾಸ್ಟ್ ಬೌಲರ್ಸ್​ ಆಡಿಸುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲಿ ಬೂಮ್ರಾ ಹಾಗೂ ಹಾರ್ದಿಕ್​ ಆಡೋದಂತೂ ಕನ್ಫರ್ಮ್​. ಉಳಿದ 1 ಸ್ಥಾನಕ್ಕೆ ಸಿರಾಜ್ ಹಾಗೂ ಅರ್ಷ್​ದೀಪ್ ಸಿಂಗ್​ ನಡುವೆ ಫೈಟ್ ಏರ್ಪಡಲಿದೆ. ಹಾಗೇನಾದ್ರೂ ಇಂದಿನ ಪಂದ್ಯದಲ್ಲಿ  ಕ್ಯಾಪ್ಟನ್ ರೋಹಿತ್​ ಶರ್ಮಾ ಮೂವರು ವೇಗಿಗಳನ್ನ ಆಡಿಸಿದ್ರೆ ಅವರಿಗೆ ತ್ರಿಮೂರ್ತಿ ಸ್ಪಿನ್ನರ್ಸ್​ ಸಹ ಸಾಥ್​ ನೀಡಲಿದ್ದಾರೆ. ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಡುವುದು ಬಹುತೇಕ ಪಕ್ಕಾ. ಆದರೆ 3ನೇ ಸ್ಪಿನ್ನರ್ ಆಗಿ ಕುಲ್ದೀಪ್​ ಯಾದವ್ ಆಡ್ತಾರಾ ಅಥವಾ ಚಹಲ್ ಆಡ್ತಾರಾ ಅನ್ನೋದೆ ಈಗಿರುವ ಪ್ರಶ್ನೆ..

ಇತ್ತ ಅಫ್ಘಾನಿಸ್ತಾನ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸೂಪರ್ ಸ್ಟ್ರಾಂಗ್ ಆಗಿ ಮುನ್ನುಗ್ಗುತ್ತಿದೆ.  ಫಜಲ್ ಹಕ್ ಫಾರೂಕಿ 12 ವಿಕೆಟ್‌ಗಳೊಂದಿಗೆ ಟೂರ್ನಿಯ ಗರಿಷ್ಠ ವಿಕೆಟ್ ಸರದಾರ ಎನಿಸಿದ್ದು, ನಾಯಕ ರಶೀದ್ ಖಾನ್, ವೇಗಿ ನವೀನ್ ಉಲ್-ಹಕ್, ಎಡಗೈ ಸ್ಪಿನ್ನರ್ ನೂರ್ ಅಹ್ಮದ್, ಅನುಭವಿಗಳಾದ ಗುಲ್ಬದಿನ್ ನೈಬ್, ಮೊಹಮದ್ ನಬಿ ಬಲವೂ ತಂಡಕ್ಕಿದೆ. ಇನ್ನು ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಉತ್ತಮ ಲಯದಲ್ಲಿದ್ದಾರೆ. ಸೋ ಇವರಿಬ್ಬರನ್ನು ಭಾರತ ಎಷ್ಟು ಬೇಗ ಔಟ್ ಮಾಡುತ್ತದೆಯೋ ಗೆಲುವು ಅಷ್ಟು ಸುಲಭವಾಗಬಹುದು. ಫೈನಲಿ ಟೀಂ ಇಂಡಿಯಾ ಸೂಪರ್ 8ನ ಮೊದಲನೇ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಅಫ್ಘಾನಿಸ್ತಾನದ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಈ ವೇಳೆ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಇದೀಗ ಟಿ20 ವಿಶ್ವಕಪ್​ನ ದ್ವಿತೀಯ ಸುತ್ತಿನಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿದ್ದು ಎರಡೂ ತಂಡಗಳೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸೋ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಏನೆಲ್ಲಾ ಚೇಂಜಸ್ ಆಗ್ಬೇಕು.

Shwetha M