DK ಜೊತೆ ಹಾರ್ದಿಕ್! ಸತ್ಯ ಏನು? – 1 RUN 80 ಲಕ್ಷ. ಲಿವಿಂಗ್‌ಸ್ಟನ್ ದುಬಾರಿ

DK ಜೊತೆ ಹಾರ್ದಿಕ್! ಸತ್ಯ ಏನು?  – 1 RUN 80 ಲಕ್ಷ. ಲಿವಿಂಗ್‌ಸ್ಟನ್ ದುಬಾರಿ

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್- ಬ್ಲೂಜೆರ್ಸಿಯಿಂದ ಕೊಹ್ಲಿ ನೋಡಲು ಕಾಯುತ್ತಿದ್ದವರಿಗೆ ನಿರಾಸೆ

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ  RCB ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮತ್ತು ವದಂತಿಗಳು ಕ್ರಿಕೆಟ್ ವಲಯದಲ್ಲಿ ಶುರುವಾಗಿವೆ. ಆದ್ರೆ ಇದರ ಬಗ್ಗೆ ನಿಮ್ಮ ಸುದ್ದಿಯಾನ ರಿಯಾಟಿಕೆ ಚೆಕ್ ನಡೆಸಿದಾಗ, ಇದು AI ಫೋಟೋ ಅನ್ನೋದು ತಿಳಿದು ಬಂದಿದೆ.

ಆರ್‌ಸಿಬಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ತಂಡ ಅನ್ನೋದು ಈ ಸೀಸನ್‌ನಲ್ಲಿ ಮತ್ತೆ ಸಾಬೀತಾಗಿದೆ.  ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ 6 ಪಂದ್ಯಗಳು ಆರ್​ಸಿಬಿ ಆಡಿದ ಪಂದ್ಯಗಳಾಗಿವೆ.  ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವೆ ನಡೆದ ಫೈನಲ್ ಪಂದ್ಯ ಅಗ್ರಸ್ಥಾನ ಪಡೆದಿದ್ದು, ಇದು 520 ಮಿಲಿಯನ್ ವೀಕ್ಷಣೆ ಪಡೆದಿದೆ.

13 ಕೋಟಿಗೆ  ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದ ಲಿಯಾಮ್ ಲಿವಿಂಗ್‌ಸ್ಟನ್ ಈ ಸೀಸನ್‌ನಲ್ಲಿ  ಕಳಪೆ ಪ್ರದರ್ಶನ ನೀಡಿದ್ರ ಬಗ್ಗೆ ಚರ್ಚೆ ಜೋರಾಗಿದೆ. ಈ ಸಲ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದ್ದ ಇವರು 15 ರನ್ ಗಳಿಸಿ ದುಬಾರಿ ವೈಫಲ್ಯ ಅನುಭವಿಸಿದ್ದಾರೆ. ಈ ಸೀಸನ್‌ನಲ್ಲಿ  ಲಿವಿಂಗ್‌ಸ್ಟನ್ 1 ರನ್ ಬಾರಿಸಲು ಸನ್‌ರೈಸರ್ಸ್ ತಂಡದಿಂದ ಪಡೆದ ಸಂಭಾವನೆ  ಸುಮಾರು 80 ಲಕ್ಷ ರೂ.ಗೂ ಅಧಿಕವಾಗಿದೆ.

ಐಪಿಎಲ್ 2026 ರಲ್ಲಿ ಸಂಚಲನ ಸೃಷ್ಟಿಸಿದ ವೈಭವ್ ಸೂರ್ಯವಂಶಿ ಬಿಹಾರದಲ್ಲಿರುವ ತಮ್ಮ ಊರನ್ನ ಸೇರಿದ್ದಾರೆ. ಈ ಸುದ್ದಿ ಹರಡಿದ ತಕ್ಷಣ, 15 ವರ್ಷದ ಸೂಪರ್‌ಸ್ಟಾರ್‌ನನ್ನು ಭೇಟಿ ಮಾಡಲು ಜನಸಮೂಹ ಅವರ ಮನೆ ಮುಂದೆ ಜಮಾಯಿಸುತ್ತಿದೆ. ಹಾಗೇ ವೈಭವ್ ಅವರ ಊರು ಸಮಷ್ಟಿಪುರದ ತಾಜ್‌ಪುರದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. ಈಗ ವೈಭವ್ ಅವರನ್ನು ಭೇಟಿಯಾಗಲು ಹಾಗೂ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಲ್‌ ಅವರ ಮನೆ ಕಡೆ ಹೋಗುತ್ತಿದ್ದಾರೆ.

 

ಸೋಲಿನ ಬಳಿಕ ಗುಜರಾತ್ ಟೈಟಾನ್ಸ್ ನಾಯಕ ಗಿಲ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಾವು ಗೆಲುವಿನ ಅಂಚಿನವರೆಗೆ ತಲುಪಿದ್ದೆವು. ಆದರೆ ಅಂತಿಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಸೋಲು ತುಂಬಾ ನೋವುಂಟು ಮಾಡಿದೆ ಮತ್ತು ನಿರಾಸೆಯ ಭಾರವೂ ಹೆಚ್ಚಾಗಿದೆ. ಆದರೆ ನಾವು ಪ್ರೀತಿಸುವ ಈ ಆಟ ಜೀವನದ ಅನೇಕ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಈ ಆಟ ನನಗೆ ಕಲಿಸಿದ ಒಂದು ವಿಷಯವೆಂದರೆ, ನಾವು ಮತ್ತೆ ಎದ್ದು ನಿಲ್ಲುತ್ತಾ, ಎಂದಿಗೂ ಕೈಚೆಲ್ಲದೆ ಮುಂದುವರಿದರೆ ಸೋಲಿನಲ್ಲಿ ನಿಜವಾದ ಸೋಲು ಎಂಬುದೇ ಇರುವುದಿಲ್ಲ  ಎಂದು ಗಿಲ್ ಬರೆದುಕೊಂಡಿದ್ದಾರೆ.

SRH  ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ 2027ರ ಐಪಿಎಲ್ ಸೀಸನ್‌ನಿಂದ ಹೊರಗುಳಿಯುವ ಸುಳಿವು ನೀಡಿದ್ದಾರೆ.  2027ರಲ್ಲಿ ಆಸ್ಟ್ರೇಲಿಯಾ ತಂಡವು ಆ್ಯಷಸ್​ ಸೇರಿ ಬ್ಯಾಕ್-ಟು-ಬ್ಯಾಕ್ ಪ್ರಮುಖ ಟೂರ್ನಿಗಳನ್ನು ಆಡಬೇಕಿರುವುದರಿಂದ ತಮ್ಮ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಗಾಯದ ಕಾರಣ ಅಫ್ಘಾನಿಸ್ತಾನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಜೂನ್ 13ರಿಂದ ಮೂರು ಏಕದಿನ ಸರಣಿಗಳು ನಡೆಯಲಿವೆ. ಆದರೆ, ಇಂಜೂರಿ ಕಾರಣದಿಂದ ಕೊಹ್ಲಿ ಅವರು ಈ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಇದೆ. ಈ ಬಾರಿಯ ಐಪಿಎಲ್ ಫೈನಲ್ ವೇಳೆ ಅವರ ಬ್ಯಾಟ್​ನಿಂದ 75 ರನ್​​ಗಳು ಬಂದಿದ್ದವು. ಕಾಲಿನಲ್ಲಿ ಉಂಟಾದ ಸಮಸ್ಯೆ ಅವರ ಆಟದ ಮೇಲೆ ನೇರ ಪರಿಣಾಮ ಬೀಳುತ್ತಾ ಇತ್ತು. ಅವರು ಗಾಯದ ಮಧ್ಯೆಯೂ ಆಟ ಮುಂದುವರಿಸಿದ್ದರು. ಈಗ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರು ಅಫ್ಘಾನ್ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿಯಾಗಿ ಹರ್ಮನ್‌ಪ್ರೀತ್ ಕೌರ್ ಹೊಸ ಇತಿಹಾಸ ಬರೆದಿದ್ದಾರೆ. ನ್ಯೂಜಿಲೆಂಡ್ ಆಟಗಾರ್ತಿ ಸೂಜಿ ಬೇಟ್ಸ್ ಇಲ್ಲಿಯವರೆಗೆ 367 ಪಂದ್ಯಗಳನ್ನಾಡಿ ವಿಶ್ವದಾಖಲೆ ಹೊಂದಿದ್ದರು. ಈಗ ಹರ್ಮನ್‌ಪ್ರೀತ್ ಕೌರ್ ತಮ್ಮ ವೃತ್ತಿಜೀವನದಲ್ಲಿ 368ನೇ ಅಂತರರಾಷ್ಟ್ರೀಯ ಪಂದ್ಯವನ್ನು ಪೂರ್ಣಗೊಳಿಸಿದರು. ಇದರೊಂದಿಗೆ, ಅವರು ನ್ಯೂಜಿಲೆಂಡ್ ಆಟಗಾರ್ತಿಯ ಹೆಸರಿನಲ್ಲಿದ್ದ ದಾಖಲೆಯನ್ನು ಕೌರ್ ಹಿಂದಿಕ್ಕಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ವಿಐಪಿ ಭದ್ರತೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಅದರ ಭಾಗವಾಗಿ, ಸೌರವ್ ಗಂಗೂಲಿ ಅವರ Z ಕ್ಯಾಟಗರಿ ಭದ್ರತೆಯನ್ನು Y ಕ್ಯಾಟಗರಿಗೆ ಇಳಿಸಲಾಗಿದೆ. ಗಂಗೂಲಿಗೆ ಯಾವುದೇ ನೇರ ಬೆದರಿಕೆ ಇಲ್ಲದಿರುವುದು ಮತ್ತು ಸಕ್ರಿಯ ಅಧಿಕೃತ ಹುದ್ದೆಗಳಿಲ್ಲದಿರುವುದು ಭದ್ರತೆ ಕಡಿತಕ್ಕೆ ಕಾರಣ. ಗಂಗೂಲಿಗೆ ಮಾತ್ರವಲ್ಲದೆ ಹಲವು ವಿಐಪಿಗಳಿಗೂ ಈ ರೂಲ್ಸ್ ಅನ್ವಯಿಸಲಿದೆ.

RCB ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಅವರು ಮಧ್ಯಪ್ರದೇಶ ಲೀಗ್ ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಂಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗ್ವಾಲಿಯರ್ ಚೀತಾಸ್ ತಂಡವನ್ನು ಮುನ್ನಡೆಸಿದ ಪಾಟಿದಾರ್, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ 92 ರನ್‌ಗಳ ಹೀನಾಯ ಸೋಲು ಅನುಭವಿಸಿದರು.

Kishor KV

Leave a Reply

Your email address will not be published. Required fields are marked *