INDಗೆ ಆಫ್ಘನ್ ಸ್ಪಿನ್ ಚಕ್ರವ್ಯೂಹ – ಭಾರತದ ವೀಕ್ ನೆಸ್ IPLನಲ್ಲಿ ರಿವೀಲ್?
ಏಷ್ಯಾಕಪ್ ಗಾಗಿ ರಶೀದ್ ರಣತಂತ್ರ ರೆಡಿ

ಏಷ್ಯಾಕಪ್ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆಯಾದ್ರೂ ಭಾರತವೇ ಬಲಿಷ್ಠ ಟೀಂ ಅನ್ನೋದ್ರಲ್ಲಿ ಡೌಟೇ ಇಲ್ಲ. ಏಷ್ಯಾಕಪ್ ಇತಿಹಾಸದಲ್ಲೂ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ತಂಡವೂ ಭಾರತವೇ ಆಗಿದೆ. 16 ಆವೃತ್ತಿಗಳ ಪೈಕಿ 8 ಸಲ ಭಾರತವೇ ಚಾಂಪಿಯನ್ ಪಟ್ಟಕ್ಕೇರಿದೆ. 6 ಸಲ ಟ್ರೋಫಿ ಗೆದ್ದಿರೋ ಶ್ರೀಲಂಕಾ ಸೆಕೆಂಡ್ ಪ್ಲೇಸ್ನಲ್ಲಿದೆ. ಇನ್ನು 2 ಸಲ ಕಪ್ ಗೆದ್ದು ಪಾಕಿಸ್ತಾನ ಥರ್ಡ್ ಪ್ಲೇಸ್ನಲ್ಲಿದೆ. ಬಟ್ ಈ ಸಲ ಭಾರತಕ್ಕೆ ಟಫ್ ಫೈಟ್ ಕೊಡೋದು ಲಂಕಾನೂ ಅಲ್ಲ, ಪಾಕಿಸ್ತಾನನೂ ಅಲ್ಲ.
ಇದನ್ನೂ ಓದಿ : ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ರೆ 5 ಕೋಟಿ.. ರಾಷ್ಟ್ರೀಯ ಪದಕ ಗೆದ್ರೆ ₹7 ಲಕ್ಷ ಬಹುಮಾನ! – ಸಿಎಂ ಸಿದ್ದರಾಮಯ್ಯ ಘೋಷಣೆ!
ಏಷ್ಯಾಕಪ್ ಇತಿಹಾಸದಲ್ಲಿ ಮೂರು ರಾಷ್ಟ್ರಗಳಿಗೆ ಮಾತ್ರವೇ ಚಾಂಪಿಯನ್ ಪಟ್ಟಕ್ಕೇರೋ ಅವಕಾಶ ಸಿಕ್ಕಿದೆ. ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳಷ್ಟೇ ಟ್ರೋಫಿ ಗೆಲುವಿನ ರುಚಿ ಕಂಡಿದೆ. ಉಳಿದ ಐದು ಟೀಮ್ಗಳು ಚೊಚ್ಚಲ ಕಪ್ ನಿರೀಕ್ಷೆಯಲ್ಲಿವೆ. 6 ಸಲ ಪ್ರಶಸ್ತಿಗೆ ಮುತ್ತಿಕ್ಕಿರೋ ಶ್ರೀಲಂಕಾ ತಂಡವನ್ನ ಈ ಸಲ ಚರಿತ್ ಅಸಲಂಕಾ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ತಂಡವನ್ನ ಸಲ್ಮಾನ್ ಅಲಿ ಅಘ ಲೀಡ್ ಮಾಡ್ತಾರೆ. ಟೋಟಲ್ 17 ಪ್ಲೇಯರ್ಸ್ ಟೂರ್ನಿಗೆ ಸೆಲೆಕ್ಟ್ ಆಗಿದ್ದಾರೆ. ಅಲ್ದೇ ಈ ಸಲ ಪಾಕಿಸ್ತಾನ ತಂಡದಲ್ಲಿ ಸ್ಟಾರ್ ಆಟಗಾರರಾದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಇಲ್ಲದೆ ಇರೋದು ಸಪ್ಪೆ ಅನ್ನಿಸ್ತಿದೆ. ಪಾಕ್ ಕೂಡ ಭಾರತಕ್ಕೆ ಕಠಿಣ ಪೈಪೋಟಿ ನೀಡೋದು ಕಷ್ಟ. ಬಟ್ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ಟಫ್ ಫೈಟ್ ಕೊಡುತ್ತೆ ಅಂತಾ ಕ್ರಿಕೆಟ್ ಎಕ್ಸ್ಪರ್ಟ್ಸ್ ಪ್ರೆಡಿಕ್ಟ್ ಮಾಡಿದ್ದಾರೆ. ಅವ್ರ ಈ ವಾದಕ್ಕೆ ಕಾರಣವೂ ಇದೆ.
ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ಸೂಪರ್ ಸ್ಟ್ರಾಂಗ್!
ಏಷ್ಯಾಕಪ್ನಲ್ಲಿ 8 ಟೀಮ್ಗಳಿದ್ರೂ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳೇ ಸ್ಟ್ರಾಂಗ್ ಟೀಮ್ಸ್. ಹೀಗಿದ್ರೂ ಈ ಸಲ ಪಾಕ್ ಕ್ರಿಕೆಟ್ ಟೀಂ ಎಷ್ಟೊಂದು ವೀಕ್ ಅನ್ನೋದನ್ನ ಅಲ್ಲಿನ ಮಾಜಿ ಆಟಗಾರರೇ ಜಗಜ್ಜಾಹೀರು ಮಾಡಿದ್ದಾರೆ. ಆದ್ರೆ ಶ್ರೀಲಂಕಾ ಸ್ವಲ್ಪ ಪೈಪೋಟಿ ನೀಡಬಹುದು. ಬಟ್ ಅಫ್ಘಾನಿಸ್ತಾನ ಮಾತ್ರ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿದೆ. ಹಿಂದೆಲ್ಲಾ ಕ್ರಿಕೆಟ್ ಶಿಶುಗಳು ಅಂತಾ ಕರೆಸಿಕೊಳ್ತಿದ್ದ ಆಫ್ಘನ್ನರು ಇತ್ತೀಚಿನ ದಿನಗಳಲ್ಲಿ ಸುಲಭಕ್ಕೆ ಸೋಲೊಪ್ಪಿಕೊಳ್ಳೋ ಜಾಯಮಾನವೇ ಇಲ್ಲ. ಏಷ್ಯಾದ ಸ್ಪಿನ್ ಪಿಚ್ ಗಳಲ್ಲಂತೂ ಅವ್ರ ಅಬ್ಬರ ಜಾಸ್ತಿನೇ ಇರುತ್ತೆ. ಇದೀಗ ಬಲಿಷ್ಠ ಭಾರತಕ್ಕೆ ತೀವ್ರ ಪ್ರತಿಸ್ಪರ್ಧೆ ಒಡ್ಡಬಲ್ಲ ತಂಡವಾಗಿ ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ಕಾಣಿಸಿಕೊಳ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ಜೊತೆ ಬಿ ಗುಂಪಿನಲ್ಲಿರುವ ಆಫ್ಘನ್ ಟೀಂ ಸೂಪರ್ 4 ಹಂತಕ್ಕೆ ದಾಂಗುಡಿಯಿಡೋ ಸಾಧ್ಯತೆ ಇದೆ. ಹಾಗೇನಾದ್ರೂ ಇಲ್ಲಿ ಭಾರತಕ್ಕೆ ಎದುರಾಳಿಯಾದ್ರೆ ಭಾರತ ಎಚ್ಚರಿಕೆಯ ಆಟವಾಡ್ಬೇಕು. ಯಾಕಂದ್ರೆ ಭಾರತದ ಅಷ್ಟೂ ಆಟಗಾರರ ಬಲ ಮತ್ತು ದೌರ್ಬಲ್ಯಗಳೆರಡೂ ರಶೀದ್ ಖಾನ್ ಗೆ ಗೊತ್ತು. ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವ ಆಫ್ಘನ್ ತಂಡದ ಇನ್ನಿತರ ಆಟಗಾರರಿಗೂ ಗೊತ್ತು.
ಅಫ್ಘನ್ ಟೀಂ ಪ್ಲಸ್ ಪಾಯಿಂಟ್ಸ್!
ರಶೀದ್ ಖಾನ್ ಕ್ಯಾಪ್ಟನ್ಸಿಯಲ್ಲಿ ಏಷ್ಯಾಕಪ್ ಗೆ ಬಲಿಷ್ಠ ತಂಡ
ಬ್ಯಾಟಿಂಗ್ ವಿಭಾಗ ಸ್ಟ್ರಾಂಗ್, ಇಬ್ರಾಹಿಂ ಜದ್ರಾನ್ ಮತ್ತು ಸೆಡಿಕುಲ್ಲಾ
ರಹಮಾನುಲ್ಲಾ ಗುರ್ಬಾಜ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ
ಅನುಭವಿ ಆಟಗಾರ ಮತ್ತು ಟಾಪ್ ಆರ್ಡರ್ನಲ್ಲಿ ಡೇಂಜರಸ್ ಬ್ಯಾಟ್ಸ್ ಮನ್
ಮಿಡಲ್ ಆರ್ಡರ್ & ಆಲ್ ರೌಂಡರ್ಸ್ ಪಟ್ಟಿಯಲ್ಲೂ ಸ್ಟಾರ್ ಆಟಗಾರರ ದಂಡು
ಮೊಹಮ್ಮದ್ ನಬಿ, ನೂರ್ ಅಹ್ಮದ್ ಮತ್ತು ಮುಜೀಬ್ ಉರ್ ರೆಹಮಾನ್
ಫರೀದ್ ಅಹ್ಮದ್, ನವೀನ್-ಉಲ್-ಹಕ್ ಮತ್ತು ಫಜಲ್ಹಕ್ ಫಾರೂಕಿ ವೇಗಿಗಳು
2023ರ ಏಕದಿನ ವಿಶ್ವಕಪ್ ವರೆಗೂ ಅಫ್ಘಾನಿಸ್ತಾನ ತಂಡ ವೀಕ್ ಆಗಿ ಕಾಣ್ತಿತ್ತು
ಟೂರ್ನಿಯಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನೇ ಸೋಲಿಸಿ ಶಾಕ್
2024ರ T20 ವಿಶ್ವಕಪ್ ನಲ್ಲೂ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾಕ್ಕೆ ಸೋಲಿನ ರುಚಿ
ಕಳೆದ ಮಾರ್ಚ್ ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಗೆ ನೀರು
ಭಾರತಕ್ಕೆ ಪ್ರಬಲ ಪೈಪೋಟಿ ನೀಡಬಲ್ಲದು ಅಂತಾ ಕ್ರಿಕೆಟಿಗರು ಭವಿಷ್ಯ
ಪ್ರಸ್ತುತ ಏಷ್ಯಾಕಪ್ಗೆ ಸೆಲೆಕ್ಟ್ ಆಗಿರೋ ಭಾರತ ತಂಡಕ್ಕೆ ಸ್ಪಿನ್ ಬೌಲಿಂಗ್ ವೀಕ್ನೆಸ್ ಕಾಡಬಹುದು. ಬಟ್ ಇತ್ತೀಚಿನ ವರ್ಷಗಳಲ್ಲಿ ಸ್ಪಿನ್ ಪಿಚ್ ಗಳಲ್ಲಿ ಅಫ್ಘನ್ನಷ್ಟು ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿರೋ ಟೀಂ ಇನ್ನೊಂದಿಲ್ಲ. ಈಗಾಗಲೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸ್ಪಿನ್ ಪಿಚ್ ನ ರುಚಿ ನೋಡಿರುವ ಅಫ್ಘಾನಿಸ್ತಾನಿಯರು ಈ ಬಾರಿ ಟೂರ್ನಿಯಲ್ಲಿ ಭಾರತವೂ ಸೇರಿದಂತೆ ಉಳಿದೆಲ್ಲಾ ತಂಡಗಳಿಗೂ ಶಾಕ್ ಕೊಡೋಕೆ ಕಾಯ್ತಿದ್ದಾರೆ. ಹೀಗಾಗಿ ಭಾರತ ಎಚ್ಚರಿಕೆ ಆಟವಾಡಲೇಬೇಕು.

ನೋಡಿರಿ

