AFG ಟೆಸ್ಟ್ ಫೈಟ್.. ನಬಿಗೆ ಟಿಕೆಟ್ – BACK UP ತೇಪೆ ಹಚ್ಚಿತಾ BCCI?
ರಣಜಿ ಹೀರೋಗೆ ಸಿಗುತ್ತಾ ನ್ಯಾಯ?

ಬರೋಬ್ಬರಿ 2 ತಿಂಗಳಿಂದ ಐಪಿಎಲ್ ಫೀವರ್ನಲ್ಲಿ ಮುಳುಗೆದ್ದ ಫ್ಯಾನ್ಸ್ ಈಗ ಐಪಿಎಲ್ ಮುಗೀತಿದ್ದಂತೆ ಮಿಸ್ ಮಾಡಿಕೊಳ್ತಿದ್ದಾರೆ. ಹಂಗಂತ ತುಂಬಾ ಬೇಜಾರಾಗೋದು ಬೇಡ. ಇದೇ ವೀಕೆಂಡ್ನಿಂದ ಟೀಂ ಇಂಡಿಯಾ ಜರ್ನಿ ಸ್ಟಾರ್ಟ್ ಆಗುತ್ತೆ. ಅದೂ ಕೂಡ ರೆಡ್ ಬಾಲ್ ಕ್ರಿಕೆಟ್ ಮೂಲಕ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮ್ಯಾಚ್ ಜೂನ್ 6ರಿಂದ ಸ್ಟಾರ್ಟ್ ಆಗಲಿದೆ. ಇದೀಗ ಸರಣಿಗೆ ಅನೌನ್ಸ್ ಆಗಿದ್ದ ಸ್ಕ್ವಾಡ್ನಲ್ಲಿ ಮೇಜರ್ ಸರ್ಜರಿಯಾಗಿದೆ. ಬ್ಯಾಕಪ್ ಪ್ಲೇಯರ್ ಆಗಿ ರಣಜಿ ಹೀರೋ ಅಕೀಬ್ ನಬಿಗೆ ಅವಕಾಶ ಸಿಕ್ಕಿದೆ.
ಇದನ್ನೂ ಓದಿ : T-20 ಕ್ರಿಕೆಟ್ ಗೆ ಮೇಜರ್ ಸರ್ಜರಿ – IP ಇರಲ್ಲ.. 4 ಓವರ್ ಪವರ್ ಪ್ಲೇ?
ಡೊಮೆಸ್ಟಿಮ್ ಮ್ಯಾಚ್ಗಳಲ್ಲಿ ಮ್ಯಾಜಿಕ್ ಮಾಡಿ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುವ ಭಾರತದ ಪ್ರತೀ ಆಟಗಾರನ ಪರಮಗುರಿಯೇ ಭಾರತಕ್ಕಾಗಿ ಆಡ್ಬೇಕು ಅನ್ನೋದು. ಬ್ಲ್ಯೂ ಜೆರ್ಸಿಯನ್ನ ತೊಟ್ಟು ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದೇ ಅತಿದೊಡ್ಡ ಗಿಫ್ಟ್. ಆದ್ರೆ ಕೆಲವೊಮ್ಮೆ ಪ್ರತಿಭೆ ಇದ್ರೂ ಅದೃಷ್ಟ ಇರಲ್ಲ. ಅರ್ಹತೆ ಇದ್ರೂ ಅವಕಾಶ ಸಿಗಲ್ಲ. ಈ ಸಾಲಿನಲ್ಲಿ ನಿಲ್ಲುವ ಪ್ರತಿಭಾವಂತ ಆಟಗಾರ ಆಕಿಬ್ ನಬಿ. ಜಮ್ಮು ಕಾಶ್ಮೀರದ ಆಕಿಬ್ ನಬಿ ಎಲೆಮರೆ ಕಾಯಿಯಂತೆ ಕಳೆದೇ ಹೋಗ್ತಾರೇನೋ ಎನ್ನುವಾಗದೇ ದೊಡ್ಡ ಬೆಳವಣಿಗೆಯಾಗಿದೆ.
ಅಫ್ಘನ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಬ್ಯಾಕಪ್ ಪ್ಲೇಯರ್ ನಬಿ!
ಅಫ್ಘಾನಿಸ್ತಾನ ತಂಡವು ಜೂನ್ 6 ರಿಂದ ಭಾರತ ಪ್ರವಾಸ ಕೈಗೊಳ್ಳಲಿದೆ. ಇಲ್ಲಿ ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿವೆ. ಈಗಾಗಗ್ಲೇ ವಾರಗಳ ಹಿಂದೆಯೇ ಬಿಸಿಸಿಐ ಎರಡೂ ಮಾದರಿಯ ಪಂದ್ಯಗಳಿಗೆ ಟೀಂ ಅನೌನ್ಸ್ ಮಾಡಿತ್ತು. ಅದ್ರಲ್ಲೂ ಏಕೈಕ ಟೆಸ್ಟ್ ಪಂದ್ಯಕ್ಕೆ ಗುರ್ನೂರ್ ಬ್ರಾರ್, ಮಾನವ್ ಸುತಾರ್ ಮತ್ತು ಹರ್ಷ್ ದುಬೆ ಎಂಬ ಮೂವರು ಹೊಸ ಮುಖಗಳನ್ನು ಸೆಲೆಕ್ಟ್ ಮಾಡಿದ್ರು. ಆದ್ರೆ ರೆಡ್ ಬಾಲ್ ಫಾರ್ಮೆಟ್ನಲ್ಲಿ ರಣಜಿಯಲ್ಲಿ ಹೀರೋ ಆಗಿದ್ದ ಆಕಿಬ್ ನಬಿಗೆ ಅವಕಾಶ ನೀಡಿರಲಿಲ್ಲ. ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನಿರ್ಧಾರಕ್ಕೆ ಮಾಜಿ ಕ್ರಿಕೆಟರ್ಸ್ ಕೂಡ ಅಸಮಾಧಾನ ಹೊರಹಾಕಿದ್ರು. ನಬಿಯಂಥ ಟ್ಯಾಲೆಂಟೆಡ್ ಪ್ಲೇಯರ್ಗೇ ಅವಕಾಶ ನೀಡದೇ ಇರುವುದು ಸರಿಯಲ್ಲ. ಬೇಕಾದವ್ರಿಗೆ ಚಾನ್ಸ್ ಕೊಡೋ ಹಾಗಿದ್ರೆ ರಣಜಿ ಸೇರಿದಂತೆ ಡೊಮೆಸ್ಟಿಕ್ ಟೂರ್ನಿಗಳನ್ನ ಯಾಕೆ ನಡೆಸುತ್ತೀರಿ, ಮಾನದಂಡ ಏನು, ಪ್ರದರ್ಶನವೇ ಕಣ್ಣ ಮುಂದಿದ್ರೂ ಅವಕಾಶ ಯಾಕಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ರು. ಯಾವಾಗ ತಮ್ಮ ನಿರ್ಧಾರ ಬ್ಯಾಕ್ ಫೈರ್ ಆಗ್ತಿದೆ ಅಂತಾ ಗೊತ್ತಾಯ್ತೋ ಅಲರ್ಟ್ ಆದ ಬಿಸಿಸಿಐ ಈಗ ಬ್ಯಾಕಪ್ ಪ್ಲೇಯರ್ ಆಗಿ ಅವಕಾಶ ನೀಡಿದೆ. ಅಂದ್ರೆ ಅಧಿಕೃತ ತಂಡದಲ್ಲಿ ಇರಲ್ಲ.. ಹೆಚ್ಚುವರಿಯಾಗಿ ತಂಡದ ಜೊತೆ ಟ್ರಾವೆಲ್ ಮಾಡ್ಬೋದು. ಹಂಗಂತ ಪ್ಲೇಯಿಂಗ್ 11ನಲ್ಲೂ ಅವಕಾಶ ಸಿಗೋದು ಕಷ್ಟ. ಅಧಿಕೃತ ತಂಡದಲ್ಲಿ ಇದ್ದವ್ರು ಯಾರಾದ್ರೂ ಇಂಜುರಿಯಾಗಿ ಆಡೋದೇ ಇಲ್ಲ ಅಂದಾಗ ಮಾತ್ರ ಅವಕಾಶ ಸಾಧ್ಯ. ವಿಪರ್ಯಾಸ ಅಂದ್ರೆ ಇರೋದೇ ಒಂದು ಟೆಸ್ಟ್ ಮ್ಯಾಚ್. ಇದ್ರಲ್ಲಿ ಇಂಜುರಿ ಎಲ್ಲಿಂದ ಬಂತು. ಅವಕಾಶ ಸಿಗೋದಾದ್ರೂ ಹೇಗೆ. ನೆಟ್ ಬೌಲರ್ ಆಗಿ ಬಳಸಿಕೊಳ್ತಾರೆ ಅಷ್ಟೇ. ಸೋ ಅಲ್ಲಿಗೆ ಇದು ಪಕ್ಕಾ ಇದು ತೇಪೆ ಹಚ್ಚೋ ಕೆಲಸ ಅಷ್ಟೇ. ಆದ್ರಿಲ್ಲಿ ಅಕಿಬ್ ನಬಿಗಾಗಿ ಸುನಿಲ್ ಗವಾಸ್ಕರ್, ಕಪಿನ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಸಂಜಯ್ ಮಂಜ್ರೇಕರ್ ಸೇರಿದಂತೆ ಸಾಕಷ್ಟು ಮಾಜಿ ಕ್ರಿಕೆಟರ್ಸ್ ಧ್ವನಿ ಎತ್ತಿದ್ರು. ಇವರ ಈ ಕನ್ಸರ್ನ್ಗೆ ಕಾರಣವೂ ಇದೆ.
ರಣಜಿ ಟೂರ್ನಿನಲ್ಲಿ ಇತಿಹಾಸ ಸೃಷ್ಟಿಸಿದ್ದ ಆಕಿಬ್ ನಬಿ!
ಯೆಸ್. ದಿಗ್ಗಜ ಕ್ರಿಕೆಟರ್ಗಳೆಲ್ಲಾ ನಬಿ ಬೆನ್ನಿಗೆ ನಿಲ್ಲೋಕೆ ಕಾರಣವೇ ಆತನಲ್ಲಿರೋ ಟ್ಯಾಲೆಂಟ್. ಅದ್ರಲ್ಲೂ ಟೆಸ್ಟ್ ಫಾರ್ಮೆಟ್ನಲ್ಲಿ ಬೆಂಕಿ ಚೆಂಡು ಆತ. 29 ವರ್ಷದ ನಬಿ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯವ್ರು. ದೇಶೀಯ ಕ್ರಿಕೆಟ್ನಲ್ಲಿ ಜಮ್ಮು ಕಾಶ್ಮೀರ ತಂಡವನ್ನ ಪ್ರತಿನಿಧಿಸುತ್ತಾರೆ. ಭಾರತದ ಪ್ರತಿಷ್ಠಿತ ಮತ್ತು ಸಾಂಪ್ರದಾಯಿಕ ರಣಜಿ ಟ್ರೋಫಿ ಟೂರ್ನಿಯ 2025-26 ರ ಸಾಲಿನಲ್ಲಿ ನಾಯಕನಾಗಿ ಜಮ್ಮು ಕಾಶ್ಮೀರ ತಂಡವನ್ನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಜಮ್ಮು ಟೀಂ ಕರ್ನಾಟಕದ ವಿರುದ್ಧ ಫೈನಲ್ನಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಈ ಐತಿಹಾಸಿಕ ಕ್ಷಣವನ್ನ ತಂಡ ಗೆಲ್ಲಲಿಲ್ಲ ಕ್ರಿಕೆಟ್ ಗೆದ್ದಿತು, ರಣಜಿ ಟ್ರೋಫಿ ಗೆದ್ದಿತು ಅಂತಾನೇ ಬಣ್ಣಿಸಲಾಗಿತ್ತು. ಯಾಕಂದ್ರೆ ಬಂದೂಕು, ಬಾಂಬ್ಗಳ ಸದ್ದೇ ಕೇಳುವ ಜಮ್ಮುವಿನಲ್ಲಿ ಕ್ರಿಕೆಟ್ನ ಕಿಕ್ ಏರಿಸಿದ್ದು ಈ ಆಕಿಬ್ ನಬಿ. ಕಳೆದ ಆವೃತ್ತಿಯಲ್ಲಿ ನಬಿ ಚರಿತ್ರೆಯನ್ನೇ ಬರೆದಿದ್ರು.
ನಬಿ ಎನ್ನುವ ಸಮರ್ಥ ಕ್ರಿಕೆಟಿಗ!
ಒಂದೇ ರಣಜಿ ಟ್ರೋಫಿ ಟೂರ್ನಿಯಲ್ಲಿ 60 ವಿಕೆಟ್ಸ್ ಪಡೆದಿದ್ದ ನಬಿ
92 ವರ್ಷಗಳ ಇತಿಹಾಸದಲ್ಲಿ ಮೂವರು ಮಾತ್ರವೇ 60+ ವಿಕೆಟ್ಸ್
ಎರಡು ವರ್ಷಗಳಲ್ಲಿ 18 ರಣಜಿ ಪಂದ್ಯಗಳಿಂದ 104 ವಿಕೆಟ್ಸ್ ಬೇಟೆ
ಅದರಲ್ಲಿ 13 ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಸಾಧನೆ
ಕರ್ನಾಟಕ ವಿರುದ್ಧ ರಣಜಿ ಫೈನಲ್ ಪಂದ್ಯದಲ್ಲಿ 54 ರನ್ ನೀಡಿ 5 ವಿಕೆಟ್
ಕೆಎಲ್ ರಾಹುಲ್, ಮಯಾಂಕ್, ಕರುಣ್ ನಾಯರ್ ವಿಕೆಟ್ಸ್ ಬೇಟೆ
ಟೂರ್ನಿಯಲ್ಲೇ ಅತೀ ಹೆಚ್ಚು ವಿಕೆಟ್ಸ್, ಪ್ಲೇಯರ್ ಆಫ್ ದಿ ಟೂರ್ನಮೆಂಟ್
ಆಲ್ರೌಂಡರ್ ಆಗಿರುವ ನಬಿ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಇವರ ಅದ್ಭುತ ಸಾಮರ್ಥ್ಯದಿಂದಾಗಿ ಇವರನ್ನು ದೇಶೀಯ ಕ್ರಿಕೆಟ್ ನಲ್ಲಿ ಬಾರಾಮುಲ್ಲಾ ಎಕ್ಸ್‌ಪ್ರೆಸ್ ಅಂತಾನೇ ಕರೆಯಲಾಗುತ್ತೆ. ಎಷ್ಟೇ ಟ್ಯಾಲೆಂಟ್ ಇದ್ರೂ ಏನೇ ಸಾಧನೆ ಇದ್ರೂ ಕೆಲವೊಮ್ಮೆ ಆಯ್ಕೆದಾರರಿಗೆ ಪ್ರತಿಷ್ಠೆಯೇ ದೊಡ್ಡದಾಗುತ್ತೆ. ಅಥವಾ ಸ್ವಹಿತಾಸಕ್ತಿ ಮುಂದೆ ಉಳಿದದ್ದೆಲ್ಲಾ ಕಾಣೋದೂ ಇಲ್ಲ. ಆದ್ರೆ ಈ ಬಾರಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮ್ಯಾಚ್ಗೆ ಬ್ಯಾಕಪ್ ಪ್ಲೇಯರ್ ಆಗಿ ಇರ್ತಾರೆ. ಜೂನ್ 6ರಿಂದ 10ರವರೆಗೆ ನಡೆಯೋ ಈ ಪಂದ್ಯಕ್ಕೂ ಮುನ್ನ ನೆಟ್ ಬೌಲರ್ ಆಗಿ ಅವ್ರನ್ನ ಬಳಸಿಕೊಳ್ಬೋದು. ವರ್ಲ್ಟ್ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ನ ಈ ಸೈಕಲ್ನಲ್ಲಿ ಸೋತು ಸೋತು ಹಳ್ಳ ಹಿಡ್ದಿರೋ ಟೀಂ ಇಂಡಿಯಾಗೆ ವರ್ತ್ ಇರೋ ಪ್ಲೇಯರ್ಗಳು ಬೇಕಿದೆ. ಮುಂದಿನ ದಿನಗಳಲ್ಲಾದ್ರೂ ಅವಕಾಶ ಸಿಗ್ಬೇಕಿದೆ. ಯಾಕಂದ್ರೆ ಪ್ರತಿಭಾವಂತರಿಗೆ ಅವಕಾಶಗಳು ಸಿಕ್ಕಾಗ ಮಾತ್ರ ನ್ಯಾಯ ಸಿಗೋದು.

ನೋಡಿರಿ

