ಅಫ್ಘನ್ ಚೆಂಡಾಡಿದ ಚೇಟಾ – ಸೂರ್ಯವಂಶಿಗೆ ಬೆಂಚ್ ಫಿಕ್ಸ್
ಕ್ಲೀನ್ ಸ್ವೀಪ್ ಟಾರ್ಗೆಟ್ ಗೆಲ್ತಾರಾ?

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯವನ್ನೂ ಗೆಲ್ಲೋ ಮೂಲಕ ಭಾರತ ಸರಣಿ ಕೈವಶ ಮಾಡ್ಕೊಂಡಿದೆ. ಫಸ್ಟ್ ಮ್ಯಾಚಲ್ಲಿ ಅಭಿಷೇಕ್ ಶರ್ಮಾ ಆರ್ಭಟಿಸಿದ್ರೆ ಸೆಕೆಂಡ್ ಮ್ಯಾಚಲ್ಲಿ ಸಂಜು ಸ್ಯಾಮ್ಸನ್ ಸುನಾಮಿ ಎಬ್ಬಿಸಿದ್ರು. ಸಂಜು ಅಬ್ಬರದ ಬಳಿಕ ಟೀಂ ಇಂಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ T20 ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಸರಣಿ ಗೆದ್ದಾಗಿದೆ. ಌಂಡ್ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಭಾರತದಲ್ಲಿ ಮೊದಲ T20 ಸರಣಿ ಗೆದ್ದಿದೆ.
ಇದನ್ನೂ ಓದಿ : ಅಫ್ಘಾನಿಸ್ತಾನಕ್ಕೆ ಮತ್ತೆ ಸೋಲುಣಿಸಿದ ಶ್ರೇಯಸ್ ಪಡೆ! – 2-0 ಸರಣಿ ಗೆದ್ದ ಟೀಂ ಇಂಡಿಯಾ
ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲೂ ಗೆದ್ದ ಭಾರತ!
ಪಂದ್ಯಕ್ಕೂ ಮುನ್ನ ಶ್ರೆಯಸ್ ಅಯ್ಯರ್ ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಅದ್ರಂತೆ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನಕ್ಕೆ ಮತ್ತೆ ಬ್ಯಾಟರ್ಸ್ ಕೈಕೊಟ್ರು. ಇಬ್ರಾಹಿಂ ಝದ್ರಾನ್ 37 ರನ್ಸ್ ಕಲೆ ಹಾಕಿದ್ದೇ ಹೈಯೆಸ್ಟ್ ಸ್ಕೋರ್. ಉಳಿದಂತೆ ಯಾವ ಬ್ಯಾಟರ್ಸ್ ಕಡೆಯಿಂದಲೂ ಬಿಗ್ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು. ನಿತೀಶ್ ಕುಮಾರ್ ರೆಡ್ಡಿ 3 ವಿಕೆಟ್ಸ್ ಪಡೆದ್ರೆ ಅರ್ಶದೀಪ್ 2 ವಿಕೆಟ್, ಬುಮ್ರಾ, ಅಕ್ಷರ್ ಹಾಗೂ ಬಿಷ್ಣೋಯ್ ತಲಾ ಒಂದೊಂದು ವಿಕೆಟ್ಸ್ ತೆಗೆದ್ರು. ಇನ್ನು 160 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್‌ಗಳನ್ನು ಕಳೆದುಕೊಂಡು 15ನೇ ಓವರ್ನಲ್ಲಿಯೇ ಗೆದ್ದು ಬೀಗಿತು. ಅದ್ರಲ್ಲೂ ಸಂಜು ಅಂತೂ ಸುನಾಮಿ ಎಬ್ಬಿಸಿದ್ರು. ಸಂಜು ರನ್ಸ್ ಬರ್ತಿಲ್ಲ ರನ್ಸ್ ಬರ್ತಿಲ್ಲ ಅನ್ನೋ ಪ್ರೆಶರ್ ಜೊತೆಗೆ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಿ ಅನ್ನೋ ಕೂಗಿನ ನಡುವೆ ಗ್ರೇಟ್ ಕಂ ಬ್ಯಾಕ್ ಮಾಡಿದ್ರು. ಐಪಿಎಲ್ ಬಳಿಕ 5 ಇನ್ನಿಂಗ್ಸ್ ಆಡಿದ್ದ ಸಂಜು ಕೇವಲ 43 ರನ್ಸ್ ಅಷ್ಟೇ ಕಲೆ ಹಾಕಿದ್ದು. ಹೀಗಾಗಿ ಸಂಜು ಕಂ ಬ್ಯಾಕ್ ಮಾಡಲೇಬೇಕಿತ್ತು. ಹೀಗಾಗಿ ಬಿಗ್ ಹಿಟ್ಗಳಲ್ಲೇ ಅಬ್ಬರಿಸಿದ ಸಂಜು ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂತಿಮವಾಗಿ 22 ಬಾಲ್ಗಳನ್ನ ಪೇಸ್ ಮಾಡಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 57 ರನ್ ಬಾರಿಸಿ ಔಟಾದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್ಗೆ ಇದು ಅವರ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕವಾಗಿದೆ. 259.09 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು. ಇನ್ನು ಅಭಿಷೇಕ್ ಶರ್ಮಾ 39 ರನ್ಸ್ ಕಲೆ ಹಾಕಿದ್ರೆ ಇಶಾನ್ ಕಿಶನ್ 38 ರನ್ಸ್ ಸಿಡಿಸಿದ್ರು. ಹೀಗೆ ಭಾರತ ಆಲ್ರೌಂಡ್ ಪ್ರದರ್ಶನದ ಮೂಲಕ ಎರಡೂ ಪಂದ್ಯಗಳನ್ನ ಗೆದ್ದು ಸರಣಿ ವಶಪಡಿಸಿಕೊಂಡಿದೆ. ನಾಳೆ ಮೂರನೇ ಪಂದ್ಯ ಇದ್ದು ಇದನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡೋ ಟಾರ್ಗೆಟ್ನಲ್ಲಿದ್ದಾರೆ. ಈ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್ ಮೇಲಿನ ಪ್ರೆಶರ್ ಕೂಡ ಕಮ್ಮಿಯಾಗಿದೆ.

ನೋಡಿರಿ

