AFG ಚೆಂಡಾಡಿದ ಗಿಲ್ & ಕಿಶನ್ – ಫಸ್ಟ್ ಬಾಲಲ್ಲೇ ಎಡವಿದ KL
ಬ್ಯಾಟಿಂಗ್ ನಲ್ಲಿ ಚರಿತ್ರೆ ಬರೆದ ಭಾರತ

AFG ಚೆಂಡಾಡಿದ ಗಿಲ್ & ಕಿಶನ್ – ಫಸ್ಟ್ ಬಾಲಲ್ಲೇ ಎಡವಿದ KLಬ್ಯಾಟಿಂಗ್ ನಲ್ಲಿ ಚರಿತ್ರೆ ಬರೆದ ಭಾರತ

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮ್ಯಾಚಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡಿ ಗೆದ್ದಿದ್ದ ಭಾರತ ಈಗ ಏಕದಿನ ಮಾದರಿಯಲ್ಲೂ ಅಫ್ಘನ್ನರ ಚಳಿ ಬಿಡಿಸಿದ್ದಾರೆ. ಮಳೆ ಕಣ್ಣಾಮುಚ್ಚಾಲೆ ನಡುವೆ ಫಸ್ಟ್ ಮ್ಯಾಚ್ ವಿನ್ ಆಗಿದ್ದ ಟೀಂ ಇಂಡಿಯಾ ಸೆಕೆಂಡ್ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಧೂಳೆಬ್ಬಿಸಿದೆ. ದೋಸ್ತಿಗಳ ಸೆಂಚುರಿ ಅಬ್ಬರಕ್ಕೆ ಅಫ್ಘಾನಿಸ್ತಾನ ಬೌಲರ್ಸ್ ಅಕ್ಷರಶಃ ಥಂಡಾ ಹೊಡೆದಿದ್ರು.

ಇದನ್ನೂ ಓದಿ : ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಅಫ್ಘಾನ್ ಸುಸ್ತು – 403ರನ್‌ಗಳ ಬಿಗ್ ಟಾರ್ಗೆಟ್ ನೀಡಿದ ಗಿಲ್ ಪಡೆ

ಲಕ್ನೋದ ಏಕನಾ ಸ್ಟೇಡಿಯಮ್​ನಲ್ಲಿ ಸ್ಟಾರ್ಟ್ ಆದ ಸೆಕೆಂಡ್ ಮ್ಯಾಚ್​ಗೆ ಭಾರತ ಪ್ಲೇಯಿಂಗ್ 11ನಲ್ಲಿ ಮೂರು ಸರ್ಜರಿಗಳನ್ನ ಮಾಡಿತ್ತು. ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಯಶಸ್ವಿ ಜೈಸ್ವಾಲ್, ಪ್ರಸಿದ್ಧ್ ಕೃಷ್ಣ ಬದಲಿಗೆ ಪ್ರಿನ್ಸ್ ಯಾದವ್​ ಹಾಗೇ ಹರ್ಷ್ ದುಬೆ ಬದ್ಲಿಗೆ ಕುಲ್ದೀಪ್ ಯಾದವ್ ಜಾಯ್ನ್ ಆಗಿದ್ರು. ಌಂಡ್ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ರು. ಕ್ಯಾಪ್ಟನ್ ಶುಭ್​ಮನ್ ಗಿಲ್ ಒನ್ ಡೌನ್ ಬ್ಯಾಟರ್ ಆಗಿ ಬರ್ತಾರೆ. ನಾಲ್ಕನೇ ಸ್ಲಾಟಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಿದ್ರು. ಅದ್ರಲ್ಲೂ ಈ ಮ್ಯಾಚಲ್ಲಿ ಹೈಲೆಟ್ ಆಗಿದ್ದು ನಾಯಕ ಶುಭ್​ಮನ್ ಗಿಲ್ ಮತ್ತು ಪಾಕೆಟ್ ಡೈನಮೋ ಇಶಾನ್ ಕಿಶನ್ ಪಾಟ್ನರ್​ಶಿಪ್ ಌಂಡ್ ಸೆಂಚುರಿ ಧಮಾಕ.

ಅಫ್ಘನ್ ಬೌಲರ್ ಗಳನ್ನು ಚೆಂಡಾಡಿದ ಗಿಲ್ ಮತ್ತು ಕಿಶನ್!

ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಜೈಸ್ವಾಲ್ ವಿಕೆಟ್​ ಕಳ್ಕೊಳ್ತಾರೆ. ನೆಕ್ಸ್​ಟ್ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಪಾಟ್ನರ್​ಶಿಪ್​ನಲ್ಲಿ ಒಳ್ಳೆ ರನ್ಸ್ ಬಂತು. ಬಟ್ ರೋಹಿತ್ ಅರ್ಧಶತಕದ ಹೊಸ್ತಿಲಲ್ಲಿ ಔಟ್ ಆದಾಗ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ಜೋಡಿ ಆಫ್ಘನ್ ಬೌಲರ್ಸ್​ನ ಚೆಂಡಾಡಿದ್ರು. ಒಂದೇ ಓವರ್​ನಲ್ಲಿ ಇಬ್ಬರೂ ಶತಕ ಕೂಡ ಕಂಪ್ಲೀಟ್ ಮಾಡಿಕೊಂಡ್ರು. 40 ಓವರ್​ಗಳ ವರೆಗೆ ಕಂಪ್ಲೀಟ್ ಡಾಮಿನೇಟ್ ಮಾಡಿದ ಭಾರತ ಬ್ಯಾಕ್ ಟು ಬ್ಯಾಕ್ ಶುಭ್​ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಳ್ತಾರೆ. ಸೋ ಅಲ್ಲಿಂದ ರನ್ಸ್ ಸ್ವಲ್ಪ ಆಗ್ತಾ ಹೋಯ್ತು. 360ಕ್ಕೆ 4 ವಿಕೆಟ್ ಇದ್ದ ಭಾರತ ಅಂತಿಮವಾಗಿ ಇನ್ನೂ ಒಂದು ಎಸೆತ ಬಾಕಿ ಇದ್ದಂತೆಯೇ 402 ರನ್​ಗಳಿಗೆ ಆಲೌಟ್ ಆಯ್ತು.

ಬ್ಯಾಟಿಂಗ್ ನಲ್ಲಿ ಧೂಳೆಬ್ಬಿಸಿದ ಭಾರತ!

ಅವಕಾಶ ಸಿಕ್ರೂ ಸದ್ದು ಮಾಡದ ಜೈಸ್ವಾಲ್ 4(9) ರನ್ ಗಳಿಗೆ ಔಟ್

ಅರ್ಧಶತಕದ ಹೊಸ್ತಿಲಲ್ಲೇ ಎಡವಿದ ರೋಹಿತ್ ಶರ್ಮಾ 48(39) ರನ್ಸ್

ಲಿಸ್ಟ್ ಎ ಕ್ರಿಕೆಟ್​ನಲ್ಲಿ 14000 ರನ್ ಪೂರೈಸಿದ ರೋಹಿತ್ ಶರ್ಮಾ

ಏಕದಿನ ಮಾದರಿಯಲ್ಲಿ ಕ್ಯಾಪ್ಟನ್ ಆಗಿ ಮೊದಲ ಶತಕ ಸಿಡಿಸಿದ ಗಿಲ್

77 ಬಾಲಲ್ಲಿ ಶತಕ ಸಿಡಿಸಿದ ಗಿಲ್.. 154(110) ರನ್ ಗಳಿಸಿ ಔಟ್

ಏಕದಿನ ವೃತ್ತಿ ಜೀವನದಲ್ಲಿ ಎರಡನೇ ಅತೀ ಹೆಚ್ಚು ರನ್ಸ್ ಕಲೆ ಹಾಕಿದ ಪ್ರಿನ್ಸ್

ಒಂದೇ ಓವರ್ ನಲ್ಲಿ ಇಬ್ಬರ ಸೆಂಚುರಿ.. 224 ರನ್ ಗಳ ಜೊತೆಯಾಟ

71 ಬಾಲಲ್ಲೇ ಶತಕ.. 125(79) ರನ್ಸ್ ಗೆ ಔಟ್.. 14 ಫೋರ್, 7 ಸಿಕ್ಸ್

52 ಬಾಲಲ್ಲಿ ಅರ್ಧಶತಕ ಬಾರಿಸಿ ಮುಂದಿನ 19 ಎಸೆತಗಳಲ್ಲಿ ಶತಕ

ಏಕದಿನ ಮಾದರಿಯಲ್ಲಿ 1,000 ರನ್ಸ್ ಕಂಪ್ಲೀಟ್ ಮಾಡಿದ ಕಿಶನ್

ಫಸ್ಟ್ ಬಾಲಲ್ಲೇ ಬಿಗ್ ಹಿಟ್ ಗೆ ಕೈ ಹಾಕಿ ರಾಹುಲ್ ಗೋಲ್ಡನ್ ಡಕ್

Shantha Kumari

Leave a Reply

Your email address will not be published. Required fields are marked *