PAK ಸೋತ್ರೆ ಫ್ಯಾನ್ಸ್ ಗೆ ಹಬ್ಬ – ಇಂಡೋ-ಪಾಕ್ ಪಂದ್ಯದಲ್ಲಿ ಚರಿತ್ರೆ
ಸೆಮೀಸ್ ನಲ್ಲಿ ಎದುರಾದ್ರೆ ಸುನಾಮಿ

PAK ಸೋತ್ರೆ ಫ್ಯಾನ್ಸ್ ಗೆ ಹಬ್ಬ – ಇಂಡೋ-ಪಾಕ್ ಪಂದ್ಯದಲ್ಲಿ ಚರಿತ್ರೆಸೆಮೀಸ್ ನಲ್ಲಿ ಎದುರಾದ್ರೆ ಸುನಾಮಿ

ಕ್ರಿಕೆಟ್ ಲೋಕದ ಗ್ರೇಟೆಸ್ಟ್ ರೈವರ್ಲಿ ಅಂದ್ರೆ ಅಂದು ಭಾರತ-ಪಾಕಿಸ್ತಾನ ಪಂದ್ಯಗಳು. ಹೀಗೆ ಕರೆಯೋಕೆ ಕಾರಣವೇ ಈ ಪಂದ್ಯಗಳಿಗೆ ಇರುವಂಥ ಕ್ರೇಜ್. ಜಗತ್ತಿನಾದ್ಯಂತ ಇರೋ ಕ್ರಿಕೆಟ್ ಅಭಿಮಾನಿಗಳು ಕ್ಯೂರಿಯಸ್ ಆಗಿ ಈ ಮ್ಯಾಚ್ ನೋಡ್ತಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ವೀಕ್ಷಣೆಯಲ್ಲಿ ಚರಿತ್ರೆಯನ್ನೇ ಸೃಷ್ಟಿಸಿದೆ. ಭಾರತದ ಎದುರು ಪಾಕಿಸ್ತಾನ ಸೋಲೋದನ್ನ ಕೋಟಿ ಕೋಟಿ ಜನ ನೋಡಿ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ : ರೀಲ್ಸ್ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! – ಇನ್ಮುಂದೆ ಈ ಸ್ಥಳಗಳಲ್ಲಿ ರೀಲ್ಸ್‌ ಮಾಡುವಂತಿಲ್ಲ!

ಫೆಬ್ರವರಿ 15 ರಂದು ಕೊಲಂಬೊದ ಆ‌ರ್.ಪ್ರೇಮದಾಸ ಸ್ಟೇಡಿಯಮ್​ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಬ್ಲಾಕ್ ಬಸ್ಟರ್ ವೀಕ್ಷಣೆ ಪಡೆದಿದೆ. ಆನ್ ಫೀಲ್ಡ್ ಜೊತೆಗೆ ಡಿಜಿಟಲ್ ಪ್ಲಾಟ್ ಫಾರ್ಮ್​ನಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದೂ ಕೂಡ 2024ರ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕಿಂತಲೂ ಜಾಸ್ತಿ ವ್ಯೂವರ್ಸ್ ಆಗಿದೆ. ಜಿಯೋ ಹಾಟ್ ಸ್ಟಾರ್ ರಿಲೀಸ್ ಮಾಡಿರೋ ನಂಬರ್​ಗಳೇ ಇದಕ್ಕೆ ಸಾಕ್ಷಿ. ಜಿಯೋಸ್ಟಾರ್‌ನ ಕ್ರೀಡಾ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಶರ್ಮಾ ರಿವೀಲ್ ಮಾಡಿದ್ದಾರೆ.

ಭಾರತ ಮತ್ತು ಪಾಕ್ ಪಂದ್ಯಕ್ಕೆ ದಾಖಲೆಯ ವೀಕ್ಷಣೆ!

ಭಾರತ ಮತ್ತು ಪಾಕ್ ಮ್ಯಾಚ್ ಈ ಸಲ ತುಂಬಾನೇ ಹೈಪ್ ಪಡೆದಿತ್ತು. ಯಾಕಂದ್ರೆ ಆಪರೇಷನ್ ಸಿಂಧೂರ್ ಆದ್ಮೇಲೆ ಉಭಯ ತಂಡಗಳು ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ವು. ಌಂಡ್ ಪಾಕಿಸ್ತಾನ ಟೂರ್ನಿ ಆರಂಭದಲ್ಲೇ ಬೇಜಾನ್ ಬಿಲ್ಡಪ್ ಕೊಟ್ಟಿದ್ರು. ಒಂದ್ಸಲ ಬಾಯ್ಕಾಟ್ ಅಂದ್ರೆ ಇನ್ನೋಂದ್ಸಲ ಪಂದ್ಯ ಆಡ್ತೇವೆ ಅಂತಾ ಡ್ರಾಮಾ ಮಾಡಿತ್ತು. ಇದೇ ಕಾರಣದಿಂದಲೇ ಟಿವಿ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ರೆಕಾರ್ಡ್ಸ್ ಬ್ರೇಕಿಂಗ್ ವ್ಯೂಸ್ ಪಡೆದಿದೆ. ಐಸಿಸಿ ಮೆನ್ಸ್ ಟಿ20 ವಿಶ್ವಕಪ್ 2026 ರ ಅಧಿಕೃತ ಡಿಜಿಟಲ್ ಮತ್ತು ಬ್ರಾಡ್​ಕಾಸ್ಟ್ ಪಾರ್ಟ್ನರ್ ಆಗಿರುವ ಜಿಯೋಸ್ಟಾರ್​ನಲ್ಲಿ ಈ ಪಂದ್ಯ 163 ಮಿಲಿಯನ್ ವೀಕ್ಷಣೆ ಪಡೆದಿದೆ. ಅಂದ್ರೆ 16.3 ಕೋಟಿ  ಡಿಜಿಟಲ್ ವೀಕ್ಷಕರನ್ನು ರೀಚ್ ಆಗೋ ಮೂಲಕ ಇತಿಹಾಸ ಸೃಷ್ಟಿಸಿದೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಇದು 2024ರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯದ ವೀಕ್ಷಣೆಯನ್ನೂ ಹಿಂದಿಕ್ಕಿದೆ. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿ ದಾಖಲೆ ಬರೆದಿದೆ. ಭಾರತ ತಂಡದ ಅತ್ಯದ್ಭುತ ಪ್ರದರ್ಶನದಿಂದಾಗಿ 2024ರ ಆವೃತ್ತಿಯಲ್ಲಿನ ಭಾರತ-ಪಾಕ್ ಪಂದ್ಯಕ್ಕೆ ಕಂಪೇರ್ ಮಾಡಿದ್ರೆ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಶೇ 56ರಷ್ಟು ಏರಿಕೆಯಾಗಿದೆ. ಎಲ್ಲಾ ಸ್ಕ್ರೀನ್​ಗಳ ಮೂಲಕ ಒಟ್ಟು 2,000 ಕೋಟಿ (20 ಬಿಲಿಯನ್) ನಿಮಿಷಗಳ ಕಾಲ ಈ ಪಂದ್ಯವನ್ನು ನೋಡಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವು ಟೆಲಿವಿಷನ್ ರೇಟಿಂಗ್‌ನಲ್ಲಿ (ಟಿವಿಆರ್) ಶೇ 71 ರಷ್ಟು ಏರಿಕೆ ಕಂಡಿದೆ. ಇದು 2021 ರಿಂದೀಚೆಗೆ ಟಿವಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಟಿ20 ಪಂದ್ಯವಾಗಿದೆ.

61 ರನ್ ಗಳಿಂದ ಪಾಕ್ ಪಡೆಗೆ ಹೀನಾಯ ಸೋಲು!

ಕೊಲೊಂಬೋದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ಫಸ್ಟ್ ಬ್ಯಾಟಿಂಗ್​ ಮಾಡಿತ್ತು. ಮೈದಾನದಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಆಗಿ ಡಾಮಿನೇಟ್ ಮಾಡಿದ ಭಾರತ 61 ರನ್‌ಗಳಿಂದ ಪಾಕಿಸ್ತಾನವನ್ನ ಸೋಲಿಸಿತ್ತು. ಈ ಪಂದ್ಯದ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಪಾಕಿಸ್ತಾನ ಈ ಇನಿಂಗ್ಸ್‌ನಲ್ಲಿ ಆರು ಮಂದಿ ಸ್ಪಿನ್ನರ್‌ಗಳನ್ನು ಬಳಸಿದ್ದು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದು ತಂಡ ಬಳಸಿದ ಅತಿ ಹೆಚ್ಚು ಸ್ಪಿನ್ನರ್‌ಗಳ ದಾಖಲೆಯಾಗಿತ್ತು. ಹೀಗಿದ್ರೂ ಪಂದ್ಯ ಗೆಲ್ಲೋಕೆ ಆಗಿರಲಿಲ್ಲ. ಭಾರತದ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲೋದನ್ನ ಜಗತ್ತಿನಾದ್ಯಂತ ಇರೋ ಕ್ರಿಕೆಟ್ ಫ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ. ಅಭಿಮಾನಿಗಳ ಇದೇ ಕ್ರೇಜ್​ನಿಂದಲೇ ಐಸಿಸಿ ಕೂಡ ಬಾಯ್ಕಾಟ್ ನಾಟಕ ಮಾಡಿದ್ದ ಪಾಕಿಸ್ತಾನವನ್ನ ಒಪ್ಪಿಸಿ ಭಾರತದ ವಿರುದ್ಧ ಕಣಕ್ಕಿಳಿಸಿತ್ತು. ಒಟ್ನಲ್ಲಿ ಭಾರತ-ಪಾಕ್ ಮ್ಯಾಚಂದ್ರೆ ವರ್ಷದಿಂದ ವರ್ಷಕ್ಕೆ ಲೆವೆಲ್ ಕ್ರೇಜ್ ಜಾಸ್ತಿಯಾಗ್ತಾನೇ ಇದೆ. ಹಾಗೇನಾದ್ರೂ ಈ ಸಲ ಸೆಮಿಫೈನಲ್ ಅಥವಾ ಫೈನಲ್ ನಲ್ಲಿ ಮತ್ತೆ ಮುಖಾಮುಖಿಯಾದ್ರೆ ಈ ದಾಖಲೆ ಇನ್ನೆಷ್ಟು ಹೆಚ್ಚುತ್ತೋ ನೋಡ್ಬೇಕು.

Shantha Kumari