ಪ್ರವಾಸಿಗರ ಕಣ್ಣೇದುರಲ್ಲೇ ಪುಟ್ಟ ಮರಿಗೆ ಜನ್ಮ ನೀಡಿದ ತಿಮಿಂಗಿಲ – ಅಪರೂಪದ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೇದುರಲ್ಲೇ ಪುಟ್ಟ ಮರಿಗೆ ಜನ್ಮ ನೀಡಿದ ತಿಮಿಂಗಿಲ – ಅಪರೂಪದ ದೃಶ್ಯ ಸೆರೆ

ಸಾಗರ ಎಂಬುದು ಜನಸಮಾನ್ಯರ ಪಾಲಿಗೆ ನಿಗೂಢ ಲೋಕ. ಸಾಗರದಾಳದ ಜೀವಿಗಳೆಂದರೆ ಸಹಜವಾಗಿಯೇ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಪ್ರವಾಸಿಗರು ಸಮುದ್ರಕ್ಕೆ ತೆರಳಿದ ವೇಳೆ ಕ್ಯಾಮರಾ ಕಣ್ಣಿಗೆ ಸಾಕಷ್ಟು ಅತ್ಯಪರೂಪದ ದೃಶ್ಯಗಳು ಸೆರೆಯಾಗುತ್ತವೆ. ಇದೀಗ ಕ್ಯಾಲಿಫೋರ್ನಿಯಾದ ಪ್ರವಾಸಿಗರ ತಂಡವೊಂದಕ್ಕೆ ಸಾಗರದಲ್ಲಿ ವಿಶೇಷ ಅನುಭವ ಸಿಕ್ಕಿದೆ.

ಇದನ್ನೂ ಓದಿ: Watch – ಬಿಟ್ಟು ಹೋಗದಿರು ನನ್ನ… ಸಂಗಾತಿಗಾಗಿ ರೋದಿಸುತ್ತಿರುವ ಗಿಣಿರಾಮ

ಕ್ಯಾಲಿಫೋರ್ನಿಯಾದ ಹವ್ಯಾಸಿ ಪ್ರವಾಸಿಗರ ತಂಡ ಬೋಟ್ ನಲ್ಲಿ ತೆರಳುತ್ತಿದ್ದ ವೇಳೆ ಬರೋಬ್ಬರಿ 35 ಅಡಿ ಉದ್ದದ ಬೂದು ಬಣ್ಣದ ತಿಮಿಂಗಿಲ ಕಣ್ಣೆದುರಲ್ಲೇ ಪುಟ್ಟ ತಿಮಿಂಗಿಲಕ್ಕೆ ಜನ್ಮ ನೀಡಿರುವ ದೃಶ್ಯಕ್ಕೆ ಪ್ರತ್ಯಕ್ಷದರ್ಶಿಗಳಾಗಿರುವ ಅಪರೂಪದ ಪ್ರಸಂಗ ನಡೆದಿದೆ.

ಸಮುದ್ರದ ಮಧ್ಯದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮೊದಲು ಬೂದುಬಣ್ಣದ ವಲಸಿಗ ತಿಮಿಂಗಲವೊಂದು ಬರುತ್ತಿರುವುದನ್ನು ಪ್ರವಾಸಿಗರು ಗಮನಿಸಿದ್ದರು. ನಂತರ ಬೋಟ್ ಅನ್ನು ನಿಧಾನಕ್ಕೆ ತಿಮಿಂಗಿಲದ ಬಳಿ ಕೊಂಡೊಯ್ದಿದ್ದರು. ಆದರೆ ತಿಮಿಂಗಲದ ವರ್ತನೆ ವಿಚಿತ್ರವಾಗಿರುವುದನ್ನು ಕೆಲವು ಪ್ರವಾಸಿಗರು ಗುರುತಿಸಿದ್ದು, ಆ ವೇಳೆಯಲ್ಲಿ ಪುಟ್ಟ ತಿಮಿಂಗಲ ರಕ್ತಸ್ರಾವದೊಂದಿಗೆ ಹೊರ ಬಂದಿದ್ದು, ತಕ್ಷಣವೇ ಈಜಾಡುತ್ತ ತಾಯಿ ತಿಮಿಂಗಲದ ಸುತ್ತ ಸುತ್ತಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಅತ್ಯಪರೂಪದ ದೃಶ್ಯವನ್ನು ಪ್ರವಾಸಿಗರ ತಂಡ ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಸಫಾರಿ ಸರ್ವೀಸ್ ಕೂಡಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ.

suddiyaana