ಬಿರಿಯಾನಿ ಮೇಲೆ ಹೆಚ್ಚಾದ ಒಲವು! – ಆರು ತಿಂಗಳಲ್ಲಿ ಸ್ವಿಗ್ಗಿಯಲ್ಲಿ ಬರೋಬ್ಬರಿ 72 ಲಕ್ಷ ಬಿರಿಯಾನಿ ಆರ್ಡರ್!

ಬಿರಿಯಾನಿ ಮೇಲೆ ಹೆಚ್ಚಾದ ಒಲವು! – ಆರು ತಿಂಗಳಲ್ಲಿ ಸ್ವಿಗ್ಗಿಯಲ್ಲಿ ಬರೋಬ್ಬರಿ 72 ಲಕ್ಷ ಬಿರಿಯಾನಿ ಆರ್ಡರ್!

ಬಿರಿಯಾನಿ ಮಾಂಸ ಪ್ರಿಯರಿಗೆ ಅಚ್ಚುಮೆಚ್ಚಿನ ತಿನಿಸು. ನಾನ್‌ ವೆಜ್‌ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೋದಾಗ ಅನೇಕರು ಹೆಚ್ಚಾಗಿ ಬಿರಿಯಾನಿಯನ್ನೇ ಆರ್ಡರ್‌ ಮಾಡುತ್ತಾರೆ. ಜು.2 ರಂದು ಅಂತಾರಾಷ್ಟ್ರೀಯ ಬಿರಿಯಾನಿ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಸ್ವಿಗ್ಗಿ ಬಿರಿಯಾನಿ ಕುರಿತು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದೆ. ಕಳೆದ ಆರು ತಿಂಗಳಿನಲ್ಲಿ ಬರೋಬ್ಬರಿ 72 ಲಕ್ಷ ಬಿರಿಯಾನಿಯನ್ನು ಭಾರತೀಯರು ಆರ್ಡರ್‌ ಮಾಡಿದ್ದಾರೆ.  12 ತಿಂಗಳುಗಳಲ್ಲಿ ಒಟ್ಟು 1.‌ 5 ಕೋಟಿ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: 1 ರೂಪಾಯಿಗೆ ಚಿಕನ್‌ ಬಿರಿಯಾನಿ!‌ – ಹೋಟೆಲ್‌ ಮಾಲೀಕನ ಪ್ಲಾನ್ ಪ್ಲಾಪ್ , ತಿನ್ನಲು ಬಂದವರಿಗೆ ₹250 ಫೈನ್‌!

ಸ್ವಿಗ್ಗಿಯ ಆರ್ಡರ್ ವಿಶ್ಲೇಷಣೆಯು 2023 ರ ಮೊದಲಾರ್ಧದಿಂದ ಕೆಲವು ಆಸಕ್ತಿದಾಯಕ ಬಿರಿಯಾನಿ ಆರ್ಡರ್ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಕಳೆದ ಐದೂವರೆ ತಿಂಗಳಲ್ಲಿ, 2022 ರ ಇದೇ ಅವಧಿಗೆ ಹೋಲಿಸಿದರೆ ಬಿರಿಯಾನಿ ಆರ್ಡರ್‌ಗಳಲ್ಲಿ ಶೇಕಡಾ 8.26 ರಷ್ಟು ಹೆಚ್ಚಾಗಿದೆ. ದೇಶಾದ್ಯಂತ 2.6 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಸ್ವಿಗ್ಗಿ ಮೂಲಕ ಬಿರಿಯಾನಿ ನೀಡಿದರೆ, ಅವುಗಳಲ್ಲಿ 28,000 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೇವಲ ಬಿರಿಯಾನಿ ತಯಾರಿಸುವುದರಲ್ಲಿಯೇ ಪರಿಣತಿ ಪಡೆದಿವೆ. ದೇಶದಾದ್ಯಂತ ಜನರು ಪ್ರತಿ ನಿಮಿಷಕ್ಕೆ ಸುಮಾರು 219 ಬಿರಿಯಾನಿ ಆರ್ಡರ್‌ ಮಾಡಿದ್ದಾರೆ ಎಂದು ತಿಳಿಸಿದೆ.

ಇನ್ನು ಹೆಚ್ಚು ಬಿರಿಯಾನಿ ಹೋಟೆಲ್‌ ರೆಸ್ಟೋರೆಂಟ್‌ ಯಾವ ನಗರದಲ್ಲಿವೆ ಎಂದು ನೋಡಿದರೆ, ಬೆಂಗಳೂರು ಸುಮಾರು 24,000 ಬಿರಿಯಾನಿ ಸರ್ವಿಂಗ್ ರೆಸ್ಟೋರೆಂಟ್‌ಗಳೊಂದಿಗೆ ಮುಂಚೂಣಿಯಲ್ಲಿದೆ. ಮುಂಬೈ 22,000 ಮತ್ತು ದೆಹಲಿ 20,000ಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್‌ಗಳನ್ನು ಸ್ವಿಗ್ಗಿಯಲ್ಲಿ ಹೊಂದಿವೆ. ಬಿರಿಯಾನಿ ಆರ್ಡರ್‌ ಮಾಡುವ ನಗರಗಳಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ಈ ವರ್ಷದ ಜೂನ್‌ವರೆಗೆ ಇಲ್ಲಿಂದ 7.2 ಮಿಲಿಯನ್ ಆರ್ಡರ್ ಮಾಡಲಾಗಿದೆ. ಬೆಂಗಳೂರು ಸುಮಾರು 5 ಮಿಲಿಯನ್ ಆರ್ಡ‌್ರಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಸುಮಾರು 3 ಮಿಲಿಯನ್ ಆರ್ಡ‌್ರಗಳೊಂದಿಗೆ ಚೆನ್ನೈ ಮೂರನೇ ಸ್ಥಾನದಲ್ಲಿದೆ ಎಂದು ಕಂಪನಿ ಉಲ್ಲೇಖಿಸಿದೆ.

ಚೆನ್ನೈನ ಬಿರಿಯಾನಿ ಪ್ರಿಯರೊಬ್ಬರು ಒಂದೇ ಆರ್ಡರ್‌ಗೆ 31,532 ರೂ. ಖರ್ಚು ಮಾಡಿದ್ದು ವಿಶೇಷವಾಗಿದೆ. ಸುಮಾರು 85 ರೀತಿಯ ಬಿರಿಯಾನಿಗಳು ಮತ್ತು 6.2 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳೊಂದಿಗೆ, ‘ದಮ್ ಬಿರಿಯಾನಿ’ ನಿರ್ವಿವಾದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಬಿರಿಯಾನಿ ರೈಸ್ 3.5 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ‘ಹೈದರಬಾದಿ ಬಿರಿಯಾನಿ’ 2.8 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿದೆ.

ಹಿಂದಿನ ವರ್ಷ ಇದೇ ಅವಧಿಯಲ್ಲಿ 2023 ರ ಮೊದಲಾರ್ಧದ ಸ್ವಿಗ್ಗಿ ಡೇಟಾವು ಬಿರಿಯಾನಿ ಆರ್ಡರ್‌ಗಳಲ್ಲಿ ಶೇ.8.39 ಬೆಳವಣಿಗೆ ತೋರಿಸುತ್ತದೆ. ದಮ್ ಬಿರಿಯಾನಿಗೆ 9 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಬಂದಿದ್ದು, ಬಿರಿಯಾನಿ ರೈಸ್​​ಗೆ 7.9 ಲಕ್ಷ ಆರ್ಡರ್‌ಗಳು ಬಂದಿವೆ. ಮಿನಿ ಬಿರಿಯಾನಿಗೆ 5.2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಬಂದಿವೆ. 15,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳ ಮೆನು ಪಟ್ಟಿಯಲ್ಲಿ ಬಿರಿಯಾನಿ ಇದ್ದೇ ಇರುತ್ತದೆ. ಕುಕಟ್‌ಪಲ್ಲಿ, ಮಾದಾಪುರ, ಅಮೀರ್‌ಪೇಟ್, ಬಂಜಾರಾ ಹಿಲ್ಸ್, ಕೊತಪೇಟ್ ಮತ್ತು ದಿಲ್‌ಸುಖ್‌ ನಗರಗಳಲ್ಲಿ ಬಿರಿಯಾನಿ ರೆಸ್ಟೋರೆಂಟ್‌ ಹೆಚ್ಚಿವೆ. ಬಿರಿಯಾನಿ ಸೇವಿಸುವವರ ಹಾಟ್‌ಸ್ಪಾಟ್‌ ಪರಿಶೀಲಿಸಿದಾಗ, ಆಯಾ ಪ್ರದೇಶಗಳಲ್ಲಿ ಆರ್ಡರ್​​​​ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕುಕಟ್‌ಪಲ್ಲಿಯು ಬಿರಿಯಾನಿ ಪ್ರಿಯರ ಪಾಲಿಗೆ ಸ್ವರ್ಗ. ನಂತರ ಮಾದಾಪುರ, ಬಂಜಾರ ಹಿಲ್ಸ್, ಗಚಿಬೌಲಿ ಮತ್ತು ಕೊಂಡಾಪುರಗಳು ಈ ಸಾಲಿನಲ್ಲಿವೆ. ಸ್ವಿಗ್ಗಿಯು ಸಮಗ್ರವಾಗಿ ವಿಶ್ಲೇಷಣೆ ಮಾಡಿ ಸಂಶೋಧನೆ ಮಾಡಿದ ಪ್ರಕಾರ ಇದು ಜನವರಿ 2023 ಮತ್ತು ಜೂನ್ 15, 2023ರ ನಡುವಿನ ಅಂಕಿಅಂಶ ಆಧರಿಸಿದೆ.

suddiyaana