ಕೋವಿಡ್‌ನಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಹೆಚ್ಚಿದ ಮಧುಮೇಹ..! – ಅಧ್ಯಯನದಿಂದ ಆತಂಕಕಾರಿ ವಿಚಾರ ಬಹಿರಂಗ

ಕೋವಿಡ್‌ನಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಹೆಚ್ಚಿದ ಮಧುಮೇಹ..! – ಅಧ್ಯಯನದಿಂದ ಆತಂಕಕಾರಿ ವಿಚಾರ ಬಹಿರಂಗ

ಕೋವಿಡ್ -19 ಸಾಂಕ್ರಾಮಿಕ ರೋಗ ಬಂದ ಮೇಲೆ ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಅಮೆರಿಕಾದ ಇಲಿನಾಯ್ಸ್‌ನಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚು ಗರ್ಭಿಣಿಯರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದಿದೆ.

ಇದನ್ನೂ ಓದಿ: ಚೀನಾದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್‌ ಕೇಸ್‌! – ಮೇ ತಿಂಗಳಲ್ಲಿ ಶೇ.40 ರಷ್ಟು ಸೋಂಕು ಏರಿಕೆ

ಮೊದಲ ಅಧ್ಯಯನದಲ್ಲಿ ಓಹಿಯೋದ ಕೊಲಂಬಸ್‌ನಲ್ಲಿರುವ ನೇಷನ್ವೈಡ್ ಚಿಲ್ಡ್ರನ್ಸ್ ಆಸ್ಪತ್ರೆಯ ಸಂಶೋಧಕರು ಮಕ್ಕಳಲ್ಲಿ ಮಧುಮೇಹ ಹೆಚ್ಚಾಗಲು ಕೆಲವೊಂದು ಕಾರಣ ನೀಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚಳವಾದಾಗ ಮಕ್ಕಳು ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಆಗ ಮಕ್ಕಳು ಹೆಚ್ಚು ತಿನ್ನಲು ಆರಂಭಿಸಿದ್ದರು. ಅನಾರೋಗ್ಯಕರ ಆಹಾರಗಳನ್ನು ಕೂಡಾ ಹೆಚ್ಚಾಗಿ ಸೇವಿಸುತ್ತಿದ್ದರು. ಇದು ಕೂಡಾ ತೂಕ ಹೆಚ್ಚಾಗಲು ಕಾರಣವಾಗಿದೆ. ಇದು ಟೈಪ್-2 ಮಧುಮೇಹದ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಯಿತು ಎಂದು ಸಂಶೋಧನೆ ತಿಳಿಸಿವೆ. ಎರಡನೇ ಅಧ್ಯಯನ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ತಂಡವು ಕೋವಿಡ್ -19 ರ ಹಿಂದಿನ ಎರಡು ವರ್ಷಗಳಲ್ಲಿ ನಡೆದ 14,663 ಗರ್ಭಧಾರಣೆಗಳಲ್ಲಿ ಮಧುಮೇಹ ಪತ್ತೆಯಾಗಿದೆ. ಅದರಲ್ಲಿ 6,890 ಮಹಿಳೆಯರು ಮೊದಲ ವರ್ಷದಲ್ಲಿ ಮತ್ತು 6,654 ಮಹಿಳೆಯರು ಎರಡನೇ ವರ್ಷದಲ್ಲಿ ಎಂದು ತಿಳಿದುಬಂದಿದೆ. ಜನಸಂಖ್ಯೆಯಲ್ಲಿನ ಬದಲಾವಣೆಗಳು ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಬದಲಾವಣೆಗಳಿಂದಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರ್ಭಾವಸ್ಥೆಯ ಮಧುಮೇಹವು ಹೆಚ್ಚಾಗಿದೆ ಎಂದು ಹೇಳಿದೆ.

suddiyaana