ತಮಿಳುನಾಡಿಗೆ ಹೆಚ್ಚಿದ ಕಾವೇರಿ ನೀರು ಹರಿವು – ಪ್ರತಿನಿತ್ಯ 3,250 ರಿಂದ 3,300 ಕ್ಯೂಸೆಕ್‌ ನೀರು ಬಿಡುಗಡೆ

ತಮಿಳುನಾಡಿಗೆ ಹೆಚ್ಚಿದ ಕಾವೇರಿ ನೀರು ಹರಿವು – ಪ್ರತಿನಿತ್ಯ 3,250 ರಿಂದ 3,300 ಕ್ಯೂಸೆಕ್‌ ನೀರು ಬಿಡುಗಡೆ

ತಮಿಳುನಾಡಿನಲ್ಲಿ ಮಿಚಾಂಗ್‌ ಚಂಡಮಾರುತದ ಎಫೆಕ್ಟ್‌ನಿಂದಾಗಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಕೆಲವು ದಿನಗಳ ಹಿಂದೆ ಮಳೆಯಾಗಿದೆ. ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ 3,250-3,300 ಕ್ಯೂಸೆಕ್‌ನಷ್ಟು ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ಮನುಷ್ಯತ್ವವನ್ನೇ ಮರೆತರಾ ಜನ? – ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದಕ್ಕೆ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ!

ಹೌದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಉತ್ತಮ ಮಳೆಯಿಂದಾಗಿ ತಮಿಳುನಾಡಿಗೆ ನಿತ್ಯ 3,250-3,300 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.  ಮೂಲಗಳ ಪ್ರಕಾರ, ಈ ನೀರನ್ನು ಕಬಿನಿ ಅಥವಾ ಕೆಆರ್‌ಎಸ್ ಅಣೆಕಟ್ಟುಗಳಿಂದ ಹರಿಸಲಾಗುತ್ತಿಲ್ಲ. ಆದರೆ ಕೆಆರ್‌ಎಸ್ ಮತ್ತು ಕಬಿನಿ ನಡುವಿನ ವಲಯದಲ್ಲಿ ಬಿಳಿಗುಂಡ್ಲುವಿಗೆ ಹೆಚ್ಚುವರಿ ನೀರು ಹರಿಯುತ್ತಿದೆ. ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸುಮಾರು 200 ಮಿ. ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿದ್ದು, ಈ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಶಾನ್ಯ ಮಾನ್ಸೂನ್ ಮತ್ತು ಹವಾಮಾನ ವೈಫರೀತ್ಯದಿಂದ ಸಾಕಷ್ಟು ಪ್ರಮಾಣದ ಮಳೆಯಾಗಿದೆ.

ಸೆಪ್ಟೆಂಬರ್-ಅಂತ್ಯದಲ್ಲಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೆಪ್ಟೆಂಬರ್ 27 ಕ್ಕೆ ಕೊನೆಗೊಂಡ ಹದಿನೈದು ದಿನಗಳಲ್ಲಿ ಸಂಗ್ರಹವಾಗಿರುವ 0.7 ಟಿಎಂಸಿ ಅಡಿ ಕೊರತೆಯನ್ನು ಸರಿದೂಗಿಸಲು ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ತಿಳಿಸಿತು. ನೈಋತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ನೀರಿನ ಇಳುವರಿಯಲ್ಲಿ ಕೊರತೆ ಉಂಟಾಗಿರುವುದರಿಂದ ನೀರು ಬಿಡುವುದು ಕಷ್ಟ ಎಂದು ಕರ್ನಾಟಕ ಹೇಳಿತ್ತು.

Shwetha M