ವೈಟ್‌ಫೀಲ್ಡ್ -ಕೆಆರ್ ಪುರ ನಡುವಿನ ನೇರಳೆ ಮಾರ್ಗ ಉದ್ಘಾಟನೆ – ಮೋದಿ ಮೆಟ್ರೋ ಯಾನ ಹೇಗಿತ್ತು?

ವೈಟ್‌ಫೀಲ್ಡ್ -ಕೆಆರ್ ಪುರ ನಡುವಿನ ನೇರಳೆ ಮಾರ್ಗ ಉದ್ಘಾಟನೆ – ಮೋದಿ ಮೆಟ್ರೋ ಯಾನ ಹೇಗಿತ್ತು?

ಕರ್ನಾಟಕದಲ್ಲಿ ಇವತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾ ಜೋರಾಗಿಯೇ ಸಾಗಿದೆ. ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆ ಮಾಡಿದ ಮೋದಿ, ನಂತರ ವೈಟ್​ಫೀಲ್ಡ್​-ಕೆಆರ್ ಪುರ ನಡುವಿನ ನೇರಳೆ ಮಾರ್ಗವನ್ನು ಉದ್ಘಾಟಿಸಿದರು. ದೇಶದಲ್ಲೇ 2ನೇ ಅತಿ ಉದ್ದದ ಮಾರ್ಗ ಹೊಂದಿರುವ ಹೆಗ್ಗಳಿಕೆ ನಮ್ಮ ಮೆಟ್ರೋ ಭಾಜನವಾಗಿದೆ. KR ಪುರ-ವೈಟ್‌ಫೀಲ್ಡ್ ನಡುವೆ 13.71 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ಈ ಮಾರ್ಗದಿಂದ ಪ್ರತಿದಿನ 2 ರಿಂದ 3 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ:  ಚಿಕ್ಕಬಳ್ಳಾಪುರದಲ್ಲಿ ‘ಮೋದಿ’ ಹವಾ – ಪ್ರಧಾನ ಮಂತ್ರಿಗಳಿಂದ ಮೆಡಿಕಲ್ ಕಾಲೇಜು ಉದ್ಘಾಟನೆ

ವೈಟ್​​ಫೀಲ್ಡ್​-ಕೆಆರ್ ಪುರ ನಡುವಿನ ನೇರಳೆ ಮಾರ್ಗವನ್ನು 4500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸ ಮಾರ್ಗದಿಂದ ಕೃಷ್ಣರಾಜಪುರ – ವೈಟ್‌ಫೀಲ್ಡ್‌ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ರಸ್ತೆ ಮಾರ್ಗವಾಗಿ ಹೋಗುವುದಾದರೆ ಕನಿಷ್ಠ ಒಂದು ಗಂಟೆಯಾದರೂ ಬೇಕಾಗುತ್ತದೆ. ಇದು ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ದುಡ್ಡು ಕೊಟ್ಟು ಟೋಕನ್‌ ಖರೀದಿಸಿಯೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಮತ್ತೊಂದು ವಿಶೇಷ. ಮೆಟ್ರೋ ರೈಲಿನಲ್ಲಿ ಕೆಲ ಕಾಲ ನಿಂತುಕೊಂಡು ಹಾಗೂ ಕುಳಿತುಕೊಂಡು ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಈ ವೇಳೆ ಮಕ್ಕಳು ಸೇರಿ ಹಲವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.

ಕೆಆರ್ ಪುರಂ- ವ್ಹೈಟ್ ಫೀಲ್ಡ್ಸ್ ನಡುವಿನ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ ನರೇಂದ್ರ ಮೋದಿ ನಂತರ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.  ದುಡ್ಡು ಕೊಟ್ಟು ಟೋಕನ್‌ ಖರೀದಿಸಿಯೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು. ಮೆಟ್ರೋ ರೈಲಿನಲ್ಲಿ ಕೆಲ ಕಾಲ ನಿಂತುಕೊಂಡು ಹಾಗೂ ಕುಳಿತುಕೊಂಡು ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಈ ವೇಳೆ ಮಕ್ಕಳ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

suddiyaana