ಮೆಟ್ರೋ ಕಾಮಗಾರಿಗಳಿಗೆ ಸಿಕ್ತು ವೇಗ – ಮುಂದಿನ ವರ್ಷ ಡಿಸೆಂಬರ್‌ ಗೆ ಪಿಂಕ್‌ ಮಾರ್ಗ ಉದ್ಘಾಟನೆ?

ಮೆಟ್ರೋ ಕಾಮಗಾರಿಗಳಿಗೆ ಸಿಕ್ತು ವೇಗ – ಮುಂದಿನ ವರ್ಷ ಡಿಸೆಂಬರ್‌ ಗೆ ಪಿಂಕ್‌ ಮಾರ್ಗ ಉದ್ಘಾಟನೆ?

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗಳಿಗೆ ಇದೀಗ ವೇಗ ಸಿಕ್ಕಂತೆ ಕಾಣುತ್ತಿದೆ. ಹಳೇ ಮದ್ರಾಸ್‌ ರೋಡ್‌ ಬಳಿಯ ಬೆನ್ನಿಗನಹಳ್ಳಿ ಹಾಗೂ ಮೈಸೂರು ರಸ್ತೆಯ ಚಲ್ಲಘಟ್ಟ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಆಗಸ್ಟ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಅಂತಾ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಭರವಸೆ ನೀಡಿದೆ. ಇದೀಗ ನಾಗವಾರ ಮತ್ತು ಕಾಳೇನ ಅಗ್ರಹಾರ ನಡುವಿನ  21.25-ಕಿಮೀ ಉದ್ದದ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿಯು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋದೊಳಗೆ ಜೋರಾಗಿ ಸಂಗೀತ ಕೇಳಿದ್ರೆ ಹುಷಾರ್! – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಠಿಣ ಕ್ರಮ?  

ನಾಗವಾರ ಮತ್ತು ಕಾಳೇನ ಅಗ್ರಹಾರ ನಡುವಿನ  21.25-ಕಿಮೀ ಉದ್ದದ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾದರೆ, ಹೊರ ವರ್ತುಲ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ನಡುವಿನ ಮೆಟ್ರೋ ಸಂಪರ್ಕವು ನಗರದ ಟ್ರಾಫಿಕ್ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಬಿಎಂಆರ್ ಸಿಎಲ್ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಎರಡನೇ ಹಂತದಲ್ಲಿ ರೀಚ್‌ 6 ಮಾರ್ಗದಲ್ಲಿ ನಾಗವಾರದಿಂದ ಡೇರಿ ವೃತ್ತದವರೆಗೆ 13.89 ಕಿ.ಮೀ ದೂರ ಸುರಂಗ ಮಾರ್ಗದ ಕಾರಿಡಾರ್ ನಿರ್ಮಾಣವಾಗುತ್ತಿದೆ. ತಾವರೆಕೆರೆ (ಸ್ವಾಗತ್ ಕ್ರಾಸ್ ನಿಂದ) ಕಾಳೇನ ಅಗ್ರಹಾರ( ಗೊಟ್ಟಿಗೆರೆ)ವರೆಗೆ 7.5 ಕಿ.ಮೀ ದೂರ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದ್ದು, ಜಿಆರ್ ಇನ್‌ಫ್ರಾ ಲಿಮಿಟೆಡ್‌ಗೆ ಗುತ್ತಿಗೆ ಪಡೆದಿದೆ. ಎತ್ತರಿಸಿದ ಮಾರ್ಗ ಮುಂದಿನ ವರ್ಷದ ಡಿಸೆಂಬರ್‌ ಗೂ ಮೊದಲೇ ಸಿದ್ಧವಾಗಲಿದೆ. 251 ಸೆಗ್ಮೆಂಟಲ್ ಸ್ಪ್ಯಾನ್‌ಗಳಲ್ಲಿ 43 ಇನ್ನೂ ಪೂರ್ಣಗೊಳ್ಳಬೇಕಿದೆ. ಈ ವರ್ಷದ ಅಕ್ಟೋಬರ್‌ ವೇಳೆಗೆ ಹಳಿ ಹಾಕಲು ಎದುರು ನೋಡುತ್ತಿದ್ದೇವೆ. ನಿಲ್ದಾಣ ನಿರ್ಮಾಣ ಕೆಲಸ ಸ್ಥಿರವಾಗಿ ನಡೆಯುತ್ತಿದ್ದು, ಫಿನಿಶಿಂಗ್ ಕೆಲಸಗಳು ಮಾತ್ರ ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. .

ಇನ್ನು ಡೈರಿ ಸರ್ಕಲ್‌ನಿಂದ ವೆಲ್ಲರಾ ಜಂಕ್ಷನ್ (RT-01) ವೆಲ್ಲರಾ ಜಂಕ್ಷನ್‌ನಿಂದ ಶಿವಾಜಿ ನಗರಕ್ಕೆ (RT-02); ಶಿವಾಜಿನಗರದಿಂದ ಪಾಟರಿ ಟೌನ್ (RT-03) ಮತ್ತು ಟ್ಯಾನರಿ ರಸ್ತೆಯಿಂದ ನಾಗವಾರ (RT-04) ಇವುಗಳಲ್ಲಿ RT-03 ಮತ್ತು RT-04 ಅನ್ನು ಲಾರ್ಸನ್ ಮತ್ತು ಟೂಬ್ರೊ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ. ಇತರ ಎರಡು ಸುರಂಗ ಮಾರ್ಗ ನಿರ್ಮಾಣ ಕಾರ್ಯ  ಕೂಡ ಉತ್ತಮ ಪ್ರಗತಿಯಲ್ಲಿದೆ. ಡೈರಿ ಸರ್ಕಲ್ ಬಳಿಯ ಜಯನಗರ ಅಗ್ನಿಶಾಮಕ ಕೇಂದ್ರದ ಬಳಿ ಒಟ್ಟು ಶೇ.78 ರಷ್ಟು ಸುರಂಗ ನಿರ್ಮಾಣ  ಪೂರ್ಣಗೊಂಡಿದೆ. ಟ್ಯಾನರಿ ರಸ್ತೆಯಿಂದ ಉತ್ತರ ರ್‍ಯಾಂಪ್‌ ನಲ್ಲಿ ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು  ಹೇಳಿದ್ದಾರೆ.

suddiyaana