ಉತ್ತರಾಖಂಡದಲ್ಲಿ ಭಾರಿ ಭೂ ಕುಸಿತ : ಅಳಿವಿನಂಚಿನಲ್ಲಿದೆಯಾ ಜೋಶಿಮಠ ?  

ಉತ್ತರಾಖಂಡದಲ್ಲಿ ಭಾರಿ ಭೂ ಕುಸಿತ : ಅಳಿವಿನಂಚಿನಲ್ಲಿದೆಯಾ ಜೋಶಿಮಠ ?  

ಉತ್ತರಾಖಂಡ್​ನ ಜೋಶಿಮಠ ಈಗ ಅಕ್ಷರಶ: ವಿನಾಶದ ಅಂಚಿನಲ್ಲಿದೆ. ಉತ್ತರಾಖಂಡ್​ನ ಚಮೋಲಿ ಜಿಲ್ಲೆಯ ಜೋಶಿಮತ್​​ ಪಟ್ಟಣದಲ್ಲಿ 561 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನತೆ ಇಡೀ ಪಟ್ಟಣವನ್ನೇ ತೊರೆಯುತ್ತಿದ್ದಾರೆ.

ಪಟ್ಟಣದ ತಳ ಮಟ್ಟದಲ್ಲಿ ಭೂಮಿ ಕುಸಿಯುತ್ತಿದೆ. ಹೀಗಾಗಿ ಮನೆಗಳು ಬಿರುಕು ಬೀಳುತ್ತಿವೆ. ಪ್ರತಿ ಗಂಟೆಗೂ ಬಿರುಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಪಟ್ಟಣದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ತನ್ನ ಮಕ್ಕಳನ್ನು ಹಿಂಪಡೆಯಲು ಲಿಂಗವನ್ನೇ ಬದಲಾಯಿಸಿಕೊಂಡ ವಿಚ್ಚೇದಿತ

ಜೋಶಿಮಠದಲ್ಲಿ ಶುಕ್ರವಾರ ದೇವಾಲಯ ಕುಸಿದುಬಿದ್ದಿದೆ. ಇದರ ಬೆನ್ನಲ್ಲೇ ಕರ್ಣಪ್ರಯಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ‘ಭೂಮಿ ಮುಳುಗಡೆ’ಯ ಘಟನೆಗಳೂ ಇಲ್ಲಿ ವರದಿಯಾಗಿವೆ.

ಘಟನಾ ಸ್ಥಳಕ್ಕೆ, ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಸೇರಿದಂತೆ ತಜ್ಞ ಭೂವಿಜ್ಞಾನಿಗಳ ತಂಡವು ಜೋಶಿಮಠದಲ್ಲಿ ಭೂ ಮುಳುಗಡೆ ಪೀಡಿತ ಪ್ರದೇಶಗಳ ಆಳವಾದ ಸಮೀಕ್ಷೆ ನಡೆಸಿದ್ದಾರೆ. ಜೋಶಿಮಠದಲ್ಲಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.

ಜೋಶಿಮಠದಲ್ಲಿ ಭೂ ಕುಸಿತದ ಕುರಿತು ‘ಕ್ಷಿಪ್ರ ಅಧ್ಯಯನ’ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ. ಸಮಿತಿಯು ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡಿದೆ.

ಜೋಶಿಮಠದಲ್ಲಿ ಭೂ ಕುಸಿಯಲು ಕಾರಣವೇನು?

ಜೋಶಿಮಠ ಪಟ್ಟಣದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಈ ಪಟ್ಟಣ ಭಾರಿ ಸೂಕ್ಷ್ಮವಾಗಿರುವ ಬೆಟ್ಟ ಪ್ರದೇಶದಲ್ಲಿದೆ. ಈ ಹಿಂದೆಯೂ ಹಲವು ಬಾರಿ ಇಲ್ಲಿ ಭೂಕುಸಿತವಾಗಿತ್ತು. ಇದಕ್ಕೆ ಕಾರಣ ಭೂಕುಸಿತವಾದ ಮಣ್ಣಿನ ಮೇಲೆಯೇ ಪಟ್ಟಣ ನಿರ್ಮಾಣ ಮಾಡುತ್ತಿರುವುದು. ಅಲ್ಲದೇ ಜೋಶಿಮತ್​ ಪ್ರದೇಶದಲ್ಲಿ ಒರತೆಯ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ಭೂಮಿಯಾಳಕ್ಕೆ ನಿರಂತರ ಒರತೆ ನೀರು ಹರಿಯುತ್ತಲೇ ಇದೆ. ಹೀಗಾಗಿ ಮಣ್ಣು ದಿನದಿಂದ ದಿನಕ್ಕೆ ಸಡಿಲವಾಗುತ್ತಿದೆ.

ಭೂಕುಸಿತದಿಂದ ಜನರು ಊರನ್ನೇ ತೊರೆಯುವಂಥಾ ಪರಿಸ್ಥಿತಿ ಎದುರಾಗಿದೆ. ಇಲ್ಲಿರೋ ಏಷ್ಯಾದ ಅತೀ ದೊಡ್ಡ ರೋಪ್​​ವೇಯನ್ನು ಕೂಡ ಈಗ ಸ್ಥಗಿತಗೊಳಿಸಲಾಗಿದೆ. ಎರಡು ದೊಡ್ಡ ಹೋಟೆಲ್​​ಗಳು ಈಗಾಗ್ಲೇ ಬಂದ್ ಆಗಿವೆ.

suddiyaana