ತಂದೆಯನ್ನೇ ಮದುವೆಯಾಗಬೇಕು ಮಗಳು! – ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ!
ಅಮ್ಮ ಅಂದರೆ ದೇವರು.. ಅಪ್ಪ ಅಂದರೆ ಆಕಾಶ ಅಂತ ಹೇಳ್ತೀವಿ.. ಆದ್ರೆ ಇದೊಂದು ಜನಾಂಗದಲ್ಲಿ ಅಪ್ಪನೇ ಗಂಡ.. ಅಮ್ಮನೇ ಸವತಿ.. ಹೆಣ್ಣು ಮಗುವಿನ ಬಾಳು ಘೋರಾತಿಘೋರ.. ಇಂತಹ ಅನಾಗರಿಕ ಸಂಪ್ರದಾಯದ ವಿರುದ್ಧ ದಿಟ್ಟ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಧ್ವನಿಯೆತ್ತಿರೋದ್ರಿಂದ ಈ ಪದ್ಧತಿ ಬಾಹ್ಯ ಪ್ರಪಂಚಕ್ಕೆ ಗೊತ್ತಾಗಿದೆ… ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಲೋಕಾರ್ಪಣೆ – ಅಮೆರಿಕಾ, ಫ್ರಾನ್ಸ್, ಮಾರಿಷಸ್‌ನಲ್ಲೂ ರಾಮಭಕ್ತರ ಜಯಘೋಷ!
ಮದುವೆ ಎನ್ನುವುದು ನಾಗರಿಕ ಸಮಾಜದ ಅತ್ಯಂತ ಪ್ರಮುಖ ಗುರುತು. ಇಲ್ಲಿ ಸಂಬಂಧಗಳು ನಿರ್ಣಯ ಆಗುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಗಳು ಕೂಡ ನಿಗದಿಯಾಗುತ್ತವೆ.. ಹಾಗಿದ್ದರೂ ಕೆಲವು ಸಮುದಾಯಗಳಲ್ಲಿ ಅಣ್ಣ-ತಮ್ಮಂದಿರನ್ನು ಒಬ್ಬಳೇ ಮಹಿಳೆ ವಿವಾಹ ಆಗಿರುವ ನಿದರ್ಶನಗಳು ಸಿಗುತ್ತವೆ. ಇಂತಹ ಬಹುಪತಿತ್ವ ಪದ್ದತಿ ಹಲವು ಬುಡಕಟ್ಟು ಸಮುದಾಯಗಳಲ್ಲಿ ಜಾರಿಯಲ್ಲಿದೆ. ಆದರೆ ಇದಕ್ಕಿಂತಲೂ ಅನಿಷ್ಠ ಪದ್ದತಿ ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿದೆ.
ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮೂದಾಯದಲ್ಲಿ ತಂದೆ ತನ್ನ ಮಗಳನ್ನು ಮದುವೆಯಾಗುತ್ತಾನೆ.. ಆಕೆಯೊಂದಿಗೆ ಸಂಸಾರ ನಡೆಸುವ ಕೆಟ್ಟ ಸಂಪ್ರದಾಯವಿದೆ. ಮಂಡಿ ಜನಾಂಗದಲ್ಲಿ ಹೆಣ್ಣುಮಕ್ಕಳು ತಮ್ಮ ಮಲ ತಂದೆಯನ್ನೇ ಮದುವೆಯಾಗುವ ಸಂಪ್ರದಾಯ ಆಚರಣೆಯಲ್ಲಿದೆಯಂತೆ.. ಮಲ ತಂದೆಯನ್ನು ಗಂಡನನ್ನಾಗಿ ಸ್ವೀಕರಿಸಿ ಮಕ್ಕಳನ್ನು ಪಡೆಯುತ್ತಾರೆ. ಈ ಸಮುದಾಯದ ಎಲ್ಲಾ ತಂದೆಯರೂ ತಮ್ಮ ಮಕ್ಕಳನ್ನು ಮದುವೆಯಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಗಂಡನನ್ನು ಕಳೆದುಕೊಳ್ಳುವ ಮಹಿಳೆ, ಮತ್ತೊಂದು ವಿವಾಹವಾಗಲು ಅವಕಾಶ ಇದೆ. ಆದರೆ ಆಕೆಯನ್ನು ವಿವಾಹವಾಗುವ ವ್ಯಕ್ತಿ ತನ್ನ ಒಂದು ವೇಳೆ ಪತ್ನಿಗೆ ಮೊದಲ ಗಂಡನಿಂದ ಹುಟ್ಟಿರುವ ಹೆಣ್ಣು ಮಗಳಿದ್ದರೆ ಆಕೆಯನ್ನು ಕೂಡ ಮದುವೆಯಾಗುತ್ತಾನೆ. ಅಂದರೆ ಆಕೆ ಮಲಮಗಳಾದರೂ ವಿಧವೆಯನ್ನು ವಿವಾಹವಾಗುವ ಜೊತೆಗೆ ಆಕೆಯ ಮಗಳನ್ನು ಮದುವೆಯಾಗುತ್ತಾರಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ.
ತಾಯಿ ತನ್ನ ಗಂಡನಿಂದ ಮಕ್ಕಳನ್ನು ಹೆತ್ತರೆ, ಇತ್ತ ಮಗಳು ಕೂಡ ತನ್ನ ಮಲತಂದೆಯಿಂದಲೇ ಮಕ್ಕಳನ್ನು ಪಡೆಯುತ್ತಾಳೆ. ಆತ ತನ್ನ ಮಕ್ಕಳಿಗೆ ಅಜ್ಜನೂ ಅವನೇ.. ಅಪ್ಪನೂ ಅವನೇ ಅನ್ನೋದು ವಿಪರ್ಯಾಸ. ದುರಂತ ಎಂದರೆ ಈ ವಿಚಿತ್ರ ಪದ್ಧತಿಯನ್ನು ಮಂಡಿ ಜನಾಂಗ ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆಯಂತೆ. ಈ ಪದ್ದತಿಯನ್ನು ಅನುಸರಿಸುವ ಹಿಂದಿನ ಕಾರಣವನ್ನು ಆ ಜನಾಂಗ ಬಿಂಬಿಸೋದು ಹೀಗೆ.. ಒಬ್ಬ ವಿಧವೆ ಎರಡನೇ ಮದುವೆಯಾದರೆ, ಆಕೆಗೆ ಮೊದಲೇ ಮಗುವಿದ್ದರೆ ಆ ಮಗು ಅನಾಥವಾಗುತ್ತದೆ. ಅದರಲ್ಲೂ ಹೆಣ್ಣು ಮಗು ಅನಾಥವಾದರೆ ಬದುಕು ಸಾಗಿಸೋದು ಕಷ್ಟ.. ಅದರ ರಕ್ಷಣೆಗೂ ಯಾರೂ ಇರೋದಿಲ್ಲ.. ಹಾಗಾಗಿ ತಾಯಿ ಮದುವೆಯಾಗುವ ವ್ಯಕ್ತಿಯನ್ನೇ ವರಿಸಿದರೆ, ಆ ವ್ಯಕ್ತಿ ಅವರಿಬ್ಬರನ್ನೂ ದೀರ್ಘಕಾಲದವರೆಗೆ ಚೆನ್ನಾಗಿ ನೋಡಿಕೊಳ್ಳಬಹುದು ಅನ್ನೋ ನಂಬಿಕೆ ಇದೆಯಂತೆ.
ಈ ಸಂಪ್ರದಾಯ ಶತಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಈ ಬಗ್ಗೆ ಪ್ರಶ್ನಿಸಿದವರು ಯಾರೂ ಇರಲಿಲ್ಲ. ಅಜ್ಜ ನಟ್ಟ ಆಲದ ಮರಕ್ಕೆ ಜೋತು ಬಿದ್ದ ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನರು, ಇಂದಿಗೂ ಇದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿಗೆ ಈ ಸಂಪ್ರದಾಯದ ವಿರುದ್ಧ ಓರೋಲಾ ಎನ್ನುವ ಯುವತಿ ಧ್ವನಿ ಎತ್ತಿದ್ದಳು. ಈಕೆ ತನ್ನ ಮಲ ತಂದೆಯನ್ನು ಮದುವೆಯಾಗಲು ನಿರಾಕರಿಸಿದ್ದಳು. ತಾಯಿಯ 2ನೇ ಗಂಡನನ್ನು ಮದುವೆಯಾಗಬೇಕು ಎನ್ನುವ ಕುಟುಂಬಸ್ಥರ ಒತ್ತಾಯವನ್ನು ಆಕೆ ಪ್ರಶ್ನಿಸಿದ್ದಾಳೆ. ಈಗ, ಆಕೆಗೆ ತನ್ನ ತಂದೆಯಿಂದಲೇ ಮೂರು ಮಕ್ಕಳಿದ್ದಾರೆ. ಹಳ್ಳಿಯ ಅವಳ ವಯಸ್ಸಿನ ಎಲ್ಲಾ ಹೆಣ್ಣುಮಕ್ಕಳ ಭವಿಷ್ಯ ಇದೇ ಆಗಿದೆ. ಹೀಗಾಗಿ ಈ ಕೆಟ್ಟ ಪದ್ದತಿಯನ್ನು ಇಲ್ಲಿಗೆ ನಿಲ್ಲಿಸಬೇಕು ಎನ್ನುವ ಪ್ರತಿಭಟನೆಯ ಧ್ವನಿ ಎತ್ತಿದ್ದಾಳೆ. ಈಕೆಯ ಹೋರಾಟಕ್ಕೆ ಜಯ ಸಿಗುತ್ತಾ ಕಾದು ನೋಡಬೇಕಿದೆ.