ಕಳೆದ 8 ತಿಂಗಳಲ್ಲಿ 9 ದೇಶಗಳ ಮಾಜಿ ಪ್ರಧಾನಿ, ಅಧ್ಯಕ್ಷರ ಬಂಧನ! – ಅವರ ಮೇಲಿರುವ ಕೇಸ್‌ಗಳೇನು ಗೊತ್ತಾ?

ಕಳೆದ 8 ತಿಂಗಳಲ್ಲಿ 9 ದೇಶಗಳ ಮಾಜಿ ಪ್ರಧಾನಿ, ಅಧ್ಯಕ್ಷರ ಬಂಧನ! – ಅವರ ಮೇಲಿರುವ ಕೇಸ್‌ಗಳೇನು ಗೊತ್ತಾ?

ಈ ವರ್ಷ ವಿಶ್ವದ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಕ್ರಿಮಿನಲ್‌ ಮೊಕದ್ದಮೆ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಹೀಗೆ ನಾನಾ ಕಾರಣಗಳಿಂದ ಸುಮಾರು 9 ದೇಶಗಳ ಹಾಲಿ  ಅಧ್ಯಕ್ಷ, ಮಾಜಿ ಪ್ರಧಾನಿ, ಮಾಜಿ ಅಧ್ಯಕ್ಷರನ್ನು ಆಯಾಯ ದೇಶದ ಸರ್ಕಾರಗಳು ಬಂಧಿಸಿವೆ. ಯಾವ ಯಾವ ದೇಶದ ಹಾಲಿ  ಅಧ್ಯಕ್ಷ, ಮಾಜಿ ಪ್ರಧಾನಿ, ಮಾಜಿ ಅಧ್ಯಕ್ಷರನ್ನು ಬಂಧಿಸಲಾಗಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ..

ಮುಹಿದ್ದೀನ್ ಯಾಸಿನ್: 2020ರ ಮಾರ್ಚ್‌ನಿಂದ 2021ರ ಆಗಸ್ಟ್‌ವರೆಗೆ ಮಲೇಷ್ಯಾದ 8ನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಮುಹಿದ್ದೀನ್ ಯಾಸಿನ್‌ ಅವರನ್ನು ಕಳೆದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಅವರ ಮೇಲೆ ಸರ್ಕಾರ ಭ್ರಷ್ಟಾಚಾರ ಆರೋಪವನ್ನು ಮಾಡಿತ್ತು.

ಫ್ರಾಂಕ್ ಬೈನಿಮಾರಾಮ: 2007 ರಿಂದ 2022ರವರೆಗೆ ಫಿಜಿಯ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಫ್ರಾಂಕ್‌ ಬೈನಿಮಾರಾಮರನ್ನು ಕಳೆದ ಮಾರ್ಚ್‌ನಲ್ಲಿ ಬಂದಿಸಲಾಗಿತ್ತು. ತಮ್ಮ ಅಧಿಕಾರವನ್ನು ಬಳಸಿಕೊಂಡು ಪೊಲೀಸ್‌ ತನಿಖೆಯನ್ನು ತಡೆದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.

ಅಲೈನ್ ಗುಯಿಲೌಮ್ ಬನ್ಯೋನಿ: 2020ರ ಜೂನ್‌ 2022ರ ಸೆಪ್ಟೆಂಬರ್‌ ವರೆಗೆ ಬುರುಂಡಿ ದೇಶದ ಪ್ರಧಾನಿಯಾಗಿದ್ದ ಅಲೈನ್ ಗುಯಿಲೌಮ್ ಬನ್ಯೋನಿ ಅವರನ್ನು ಈ ವರ್ಷದ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ದೇಶದ ರಾಷ್ಟ್ರಪತಿಗಳ ವಿರುದ್ಧವೇ ಪಿತೂರಿ ನಡೆಸಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು.

ನಿಕೋಲಸ್ ಸರ್ಕೋಜಿ: 2007ರಿಂದ 20112ರವರೆಗೆ ಫ್ರಾನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಿಕೋಲಸ್‌ ಸರ್ಕೋಜಿ ಅವರನ್ನು ಇದೇ ವರ್ಷದ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು.  ತನ್ನ ವಿರುದ್ಧ ದಾಖಲಾದ ಕಾನೂನು ಕೇಸ್‌ನಲ್ಲಿ ಮಾಹಿತಿ ನೀಡುವಂತೆ ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪದಲ್ಲಿ ಅವರನ್ನು ಆರೋಪಿ ಎಂದು ಫ್ರಾನ್ಸ್‌ ಕೋರ್ಟ್‌ ಆದೇಶ ನೀಡಿತ್ತು. ಅದರೊಂದಿಗೆ ಲಿಬಿಯಾದ ಮಾಜಿ ಸೇನಾಧ್ಯಕ್ಷ ಗಡ್ಡಾಫಿಗೆ ಫಂಡಿಂಗ್‌ ನೀಡಿದ ಆರೋಪದಲ್ಲಿಯೂ ಅವರು ವಿಚಾರಣೆ ಎದುರಿಸಬೇಕಿದೆ.

ಇಮ್ರಾನ್‌ ಖಾನ್‌: 2018ರ ಆಗಸ್ಟ್‌ನಿಂದ 2022ರ ಏಪ್ರಿಲ್‌ವರೆಗೆ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಇಮ್ರಾನ್‌ ಖಾನ್‌ರನ್ನು ಮೇ ತಿಂಗಳಿನಲ್ಲಿ ತೋಶ್‌ಖಾನಾ ಕೇಸ್‌ಗೆ ಸಂಬಂಧಪಟ್ಟಂತೆ ಬಂಧಿಸಲಾಗಿತ್ತು. 70 ವರ್ಷದ ಇಮ್ರಾನ್‌ ಖಾನ್‌ ಸದ್ಯ ಜೈಲಿನಲ್ಲಿಯೇ ಇದ್ದಾರೆ.

ಬೆಟ್ಸಿ ಚಾವೆಜ್: ದಕ್ಷಿಣ ಅಮೆರಿಕದ ಪೆರು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದಾಕೆ  ಬೆಟ್ಸಿ ಚಾವೆಜ್. 2022ರ ನವೆಂಬರ್‌ನಿಂದ 2022ರ ಡಿಸೆಂಬರ್‌ವರೆಗೆ ಈಕೆ ಹುದ್ದೆಯಲ್ಲಿದ್ದರು. ದೇಶದ ವಿರುದ್ಧ ದಂಗೆ ಮತ್ತು ಪಿತೂರಿಯ ಆರೋಪದಲ್ಲಿ ಈ ವರ್ಷದ ಜೂನ್‌ನಲ್ಲಿ ಬಂಧಿತರಾಗಿದ್ದರು.

ಮೊಹಮ್ಮದ್ ಬಾಜೂಮ್: 2021 ರಿಂದ 2023ರವರೆಗೆ ನೈಜರ್‌ ದೇಶದ ಪ್ರಧಾನಿಯಾಗಿದ್ದ ಮೊಹಮ್ಮದ್‌ ಬಾಜೂಮ್‌  ಈ ವರ್ಷದ ಜುಲೈನಲ್ಲಿ ಬಂಧಿತರಾಗಿದ್ದರು.

ತಕ್ಸಿನ್ ಶಿನವತ್ರಾ: 2001 ರಿಂದ 2006ರವರೆಗೆ ಥಾಯ್ಲೆಂಡ್‌ ದೇಶದ ಪ್ರಧಾನಿಯಾಗಿದ್ದ ತಕ್ಸಿನ್ ಶಿನವತ್ರಾ ಅವರನ್ನು ಕಳೆದ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಅಂದಾಜು 15 ವರ್ಷಗಳ ಕಾಲ ನಾಪತ್ತೆಯಾದ ಬಳಿಕ ಥಾಯ್ಲೆಂಡ್‌ಗೆ ವಾಪಸಾದ ಬೆನ್ನಲ್ಲಿಯೇ ಜೈಲು ಸೇರಿದ್ದರು.

ಡೊನಾಲ್ಡ್‌ ಟ್ರಂಪ್‌: 2017ರ ರಿಂದ 2021ರವರೆಗೆ ಅಮೆರಿಕದ 45ನೇ ಅಧ್ಯಕ್ಷರಾಗಿದ್ದವರು ಡೊನಾಲ್ಡ್‌ ಟ್ರಂಪ್‌. 2020ರ ಚುನಾವಣಾ ಅಕ್ರಮಕ್ಕೆ ಸಂಬಂಧಪಟ್ಟಂತೆ ಆಗಸ್ಟ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು. ಬಂಧನವಾದ ಕೆಲವೇ ಹೊತ್ತಲ್ಲಿ ಟ್ರಂಪ್‌ ಜೈಲಿನಿಂದ ಹೊರಗೆ ಬಂದಿದ್ದಾರೆ.

suddiyaana