10 ಟೀಮ್‌ಗಳ ಪೈಕಿ ಅತ್ಯಂತ ಸ್ಟ್ರಾಂಗ್ ಯಾವುದು? – ಐಪಿಎಲ್‌ನಲ್ಲಿ ಹೆಚ್ಚು all-rounders ಇರೋ ಟೀಮ್ ಯಾವುದು?

10 ಟೀಮ್‌ಗಳ ಪೈಕಿ ಅತ್ಯಂತ ಸ್ಟ್ರಾಂಗ್ ಯಾವುದು? – ಐಪಿಎಲ್‌ನಲ್ಲಿ ಹೆಚ್ಚು all-rounders ಇರೋ ಟೀಮ್ ಯಾವುದು?

ಈ ಬಾರಿಯ ಐಪಿಎಲ್​ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ಫ್ಯಾನ್ಸ್ ಅಂತೂ ಈಗಾಗ್ಲೇ ಐಪಿಎಲ್​ ಟೀಮ್​ಗಳ ಬಗ್ಗೆ ಚರ್ಚೆ ನಡೆಸ್ತಾ ಇದ್ದಾರೆ. 10 ಟೀಮ್​ಗಳ ಪೈಕಿ ಅತ್ಯಂತ ಸ್ಟ್ರಾಂಗ್ ಯಾವುದು? ಟ್ರೋಫಿ ಗೆಲ್ಲೋಕೆ ಈ ಬಾರಿ ಯಾರು ಫೇವರೇಟ್? ಹೈಯೆಸ್ಟ್ ಸ್ಕೋರರ್..ಹೈಯೆಸ್ಟ್ ವಿಕೆಟ್ ಟೇಕರ್ ಯಾರಾಗಬಹುದು? ಈ ಎಲ್ಲಾ ಲೆಕ್ಕಾಚಾರಗಳು ಕೂಡ ನಡೀತಿದೆ.  ಐಪಿಎಲ್​ನಲ್ಲಿ ಆರ್​ಸಿಬಿ ಸೇರಿದಂತೆ 10 ಟೀಮ್​ಗಳಲ್ಲಿ ಯಾವ ತಂಡದಲ್ಲಿ ಎಷ್ಟು ಮಂದಿ ಆಲ್ರೌಂಡರ್ಸ್ ಇದ್ದಾರೆ ಅನ್ನೋ ವಿಚಾರ ಕೂಡಾ ಇಲ್ಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಲ್ಲ, ಆರ್‌ಸಿಬಿ ಪಂದ್ಯ ನೋಡೋಕೆ ಆಗಲ್ಲ..! – ಜಲಕಂಟಕದಿಂದಾಗಿ ಮ್ಯಾಚ್ ಶಿಫ್ಟ್ ಮಾಡುವಂತೆ ಒತ್ತಾಯ

ಟಿ20 ಫಾರ್ಮೆಟ್​​ನಲ್ಲಿ ಆಲ್ರೌಂಡರ್ಸ್​​ಗಳ ರೋಲ್ ಎಷ್ಟು ಇಂಪಾರ್ಟೆಂಟ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್ ಎರಡೂ ಮಾಡೋ ಸಾಮರ್ಥ್ಯವಿರೋ ಆಟಗಾರರು ಟೀಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂದ್ರೆ ಅದು ಆ ಟೀಮ್​​ಗೆ ತುಂಬಾನೆ ದೊಡ್ಡ ಅಡ್ವಾಂಟೇಜ್. ಟೀಮ್​ನ ಕ್ವಾಲಿಟಿ ಕೂಡ ಹೆಚ್ಚಾಗುತ್ತೆ. ಇಡೀ ಮ್ಯಾಚ್​ನ್ನ ಟರ್ನ್ ಮಾಡೋ ತಾಕತ್ತು ಆಲ್ರೌಂಡರ್ಸ್​ಗಳಿಗಿರುತ್ತೆ. ಈ ಹಿಂದೆಯೂ ಹಲವು ಬಾರಿ ಇದು ಪ್ರೂವ್ ಆಗಿದೆ. ಈ ಬಾರಿ ಐಪಿಎಲ್​​​ನಲ್ಲಿರೋ ಟೀಮ್​​ಗಳಲ್ಲಿನ ಆಲ್ರೌಂಡರ್ಸ್​​ಗಳು ಲಿಸ್ಟ್ ಬಗ್ಗೆ ವಿವರಣೆ ಇಲ್ಲಿದೆ.

ಶಾರುಖ್ ಖಾನ್ ಒಡೆತನದ ಕೆಕೆಆರ್​ನಲ್ಲಿ ಒಟ್ಟು ಐದು ಮಂದಿ ಫುಲ್​ ಫ್ಲೆಡ್ಜ್ ಆಲ್ರೌಂಡರ್ಸ್​ಗಳಿದ್ದಾರೆ. ಅಂದ್ರೆ ಇದು ಪ್ಲೇಯಿಂಗ್-11 ಅಂತೇನಲ್ಲ. ಓವರ್​ ಆಲ್ ಆಗಿ ಐವರು ಬೆಸ್ಟ್ ಆಲ್ರೌಂಡರ್ಸ್ ಇದ್ದಾರೆ.

KKR ಆಲ್​​ರೌಂಡರ್ಸ್

ಆಂಡ್ರೆ ರಸೆಲ್, ಅನ್​ಕುಲ್​​​ ರಾಯ್, ರಮಣ್​ದೀಪ್ ಸಿಂಗ್, ವೆಂಕಟೇಶ್ ಐಯ್ಯರ್ & ರದರ್​ಫೋರ್ಡ್

ಈ ಪೈಕಿ ಆಂಡ್ರೆ ರಸೆಲ್, ರಮಣ್​ದೀಪ್ ಸಿಂಗ್, ಆಲ್ರೌಂಡರ್ಸ್​ ಅಂತಾ ಹೇಳಬಹುದು. ಆದ್ರೆ ವೆಂಕಟೇಶ್ ಐಯ್ಯರ್ ಅಷ್ಟಾಗಿ ಬೌಲಿಂಗ್ ಮಾಡೋದಿಲ್ಲ. ಸ್ಟಿಲ್ ಇರೋದ್ರಲ್ಲಿ ಓಕೆ. ಇನ್ನು ಆಂಡ್ರೆ ರಸೆಲ್​ ಕೂಡ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಷ್ಟು ಎಫೆಕ್ಟಿವ್ ಆಗಿಲ್ಲ. ಆಗಾಗ ಇಂಜ್ಯೂರಿ, ಫಾರ್ಮ್ ಸಮಸ್ಯೆ ಫೇಸ್ ಮಾಡ್ತಾ ಇರ್ತಾರೆ.

ಇನ್ನು ಸನ್​ರೈಸರ್ಸ್ ಹೈದರಾಬಾದ್ ಟೀಮ್​ನ ಆಲ್ರೌಂಡರ್ಸ್​ಗಳ ಲಿಸ್ಟ್​ಗೆ ಬರೋದಾದ್ರೆ. ಈ ಟೀಮ್​​ನಲ್ಲಿ ಏಳು ಮಂದಿ ಎಫೆಕ್ಟಿವ್ ಆಲ್ರೌಂಡರ್ಸ್ ಇದ್ದಾರೆ

SRH ಆಲ್​​ರೌಂಡರ್ಸ್

ಮಾರ್ಕೊ ಜ್ಯಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಆಹ್ಮದ್, ಹಸರಂಗ, ಪ್ಯಾಟ್ ಕಮಿನ್ಸ್

ನೋಡಿ ಸನ್​ರೈಸರ್ಸ್ ಹೈದರಾಬಾದ್​ ಬಳಿ ಟಾಪ್​ ಕ್ಲಾಸ್ ಆಲ್ರೌಂಡರ್ಸ್​​ಗಳ ಒಂದು ಪಡೆಯೇ ಇದೆ. ಪ್ಲೇಯಿಂಗ್-11ನಲ್ಲಿ ಆಡಿಸೋಕೆ ಪ್ಲೆಂಟಿ ಆಫ್ ಆಪ್ಷನ್ ಇದೆ. ಕೆಕೆಆರ್​ಗೆ ಕಂಪೇರ್​ಗೆ ಮಾಡಿದ್ರೆ ಹೈದರಬಾದ್ ಸನ್​ರೈಸರ್ಸ್​​ನಲ್ಲಿ ಆಲ್ರೌಂಡರ್ಸ್​ ಲೈನ್​​ಅಪ್​ ತುಂಬಾನೆ ಸ್ಟ್ರಾಂಗ್ ಇದೆ. ಆಲ್ರೌಂಡರ್ಸ್​ಗಳ ವಿಚಾರಕ್ಕೆ ಬರೋದಾದ್ರೆ ಎಸ್​ಆರ್​ಹೆಚ್ ವನ್ ಆಫ್ ದಿ ಬೆಸ್ಟ್ ಯುನಿಟ್ ಅಂತಾನೆ ಹೇಳಬಹುದು.

CSK ಆಲ್​​ರೌಂಡರ್ಸ್

ರವೀಂದ್ರ ಜಡೇಜ, ರಚಿನ್ ರವೀಂದ್ರ, ಡ್ಯಾರೆಲ್ ಮಿಚೆಲ್, ಮೊಯಿನ್ ಅಲಿ, ಶಿವಮ್ ದುಬೆ, ನಿಶಾಂತ್ ಸಿಂಧು, ಅಜಯ್​ ಮಂಡಲ್, ಮಿಶೆಲ್ ಸ್ಯಾಂಟ್ನರ್

ಟೋಟಲ್ 8 ಮಂದಿ ಆಲ್ರೌಂಡರ್ಸ್ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿದ್ದಾರೆ. ಈ ಪೈಕಿ ರವೀಂದ್ರ ಜಡೇಜ, ಡ್ಯಾರೆಲ್ ಮಿಚೆಲ್, ಶಿವಮ್ ದುಬೆ ಅಂತಾ ಧೋನಿ ಟೀಮ್​​ನ ಮೇನ್ ವೆಪನ್ಸ್. ಸಿಎಸ್​​ಕೆನಲ್ಲೂ ತುಂಬಾ ಹೈ ಸ್ಟ್ಯಾಂಡರ್ಡ್ ಆಲ್ರೌಂಡರ್ಸ್ ಇದ್ದಾರೆ. ಹೀಗಾಗಿ ನೋ ಡೌಟ್ ಚೆನ್ನೈ ಸೂಪರ್​ ಕಿಂಗ್ಸ್  ಆಲ್ಸೋ ವನ್​ ಆಫ್​ ದಿ ಬೆಸ್ಟ್ ಆಲ್ರೌಂಡರ್ಸ್ ಯುನಿಟ್.

MI ಆಲ್​​ರೌಂಡರ್ಸ್  

ಹಾರ್ದಿಕ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಮೊಹಮ್ಮದ್ ನಬಿ, ಶಂಸ್ ಮುಲಾನಿ, ಶಿವಾಲಿಕ್ ಶರ್ಮಾ, ಅನ್ಷುಲ್ ಕಂಬೋಜ್, ನಮನ್ ಧೀರ್

ಹೀಗೆ ಮುಂಬೈ ಇಂಡಿಯನ್ಸ್​ನಲ್ಲಿ ಒಟ್ಟು ಏಳು ಮಂದಿ ಆಲ್ರೌಂಡರ್ಸ್​ಗಳಿದ್ದಾರೆ. ಈ ಪೈಕಿ ಹಾರ್ದಿಕ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಇವರಿಬ್ಬರೇ ಎಫೆಕ್ಟಿವ್ ಆಲ್ರೌಂಡರ್ಸ್​ಗಳಾಗಿ ಕಾಣಿಸಿಕೊಳ್ಳೋದು.

ಇನ್ನು ರಾಜಸ್ಥಾನ್​ ರಾಯಲ್ಸ್​ನಲ್ಲಿ ಅಷ್ಟೊಂದು ಆಲ್ರೌಂಡರ್ಸ್​ಗಳೇನು ಇಲ್ಲ. ಇವರ ಆಲ್ರೌಂಡರ್ಸ್ ಲಿಸ್ಟ್ ತುಂಬಾ ಸಣ್ಣದಿದೆ. ರಿಯಾನ್ ಪರಾಗ್ & ಆರ್.ಅಶ್ವಿನ್ ​. ಇವರಿಬ್ಬರನ್ನ ಬಿಟ್ರೆ ಇನ್ಯಾರೂ ಕೂಡ ಇಲ್ಲ. ಈವನ್ ರಿಯಾನ್ ಪರಾಗ್ & ಆರ್.ಅಶ್ವಿನ್​ರನ್ನ ಆಲ್ರೌಂಡರ್ಸ್ ಅಂತಾ ಹೆಚ್ಚು ಕನ್ಸಿಡರ್ ಮಾಡಿ ಅವರ ಮೇಲೆ ಡಿಪೆಂಡ್ ಆಗೋಕೆ ಆಗಲ್ಲ. ಇರೋದ್ರಲ್ಲಿ ಇವರಿಬ್ಬರನ್ನಷ್ಟೇ ಲಿಸ್ಟ್ ಮಾಡಿಕೊಳ್ಳಬಹುದು. ಸೋ ಅಲ್ರೌಂಡರ್ಸ್​ಗಳ ವಿಚಾರಕ್ಕೆ ಬರೋದಾದ್ರೆ ರಾಜಸ್ಥಾನ್ ರಾಯಲ್ಸ್ ಅತ್ಯಂತ ವೀಕ್ ಟೀಮ್ ಅಂತಾನೆ ಹೇಳಬಹುದು. ನೆನಪಿರಲಿ ಆಲ್ರೌಂಡರ್ಸ್​ಗಳ ವಿಚಾರದಲ್ಲಷ್ಟೇ.

ದೆಹಲಿ ಕ್ಯಾಪಿಟಲ್ಸ್.. ಇವ್ರಲ್ಲೂ ಅಷ್ಟೇ ಒಂದು ನಾಲ್ಕು ಮಂದಿ ಆಲ್ರೌಂಡರ್ಸ್​ಗಳು ಸಿಗ್ತಾರಷ್ಟೆ.

 DC ಆಲ್​​ರೌಂಡರ್ಸ್

ಅಕ್ಸರ್ ಪಟೇಲ್, ಲಲಿತ್ ಯಾದವ್, ಮಿಚೆಲ್ ಮಾರ್ಶ್, ಸುಮಿತ್ ಕುಮಾರ್

ಈ ಪೈಕಿ ಅಕ್ಸರ್ ಪಟೇಲ್ ಮತ್ತು ಮಿಚೆಲ್ ಮಾರ್ಶ್​ ಇವರಿಬ್ಬರೂ ಅಲ್ರೌಂಡರ್ಸ್​ ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​-11ನಲ್ಲಿ ಕಾಣಿಸಿಕೊಳ್ಳಬಹುದು.

ಪಂಜಾಬ್ ಆಲ್​​ರೌಂಡರ್ಸ್

ರಿಷಿ ಧವನ್, ಸ್ಯಾಮ್ ಕರನ್, ಸಿಕಂದರ್ ರಾಜಾ, ಶಿವಮ್ ಸಿಂಗ್, ಕ್ರಿಸ್ ವೋಕ್ಸ್, ಹರ್ಷಲ್ ಪಟೇಲ್, ವಿಶ್ವನಾಥ್ ಸಿಂಗ್, ಲಿವಿಂಗ್ ಸ್ಟೋನ್

ಹೀಗೆ ಒಟ್ಟು ಎಂಟು ಮಂದಿ ಆಲ್ರೌಂಡರ್ಸ್ ಕಿಂಗ್ಸ್-11 ಪಂಜಾಬ್​​ನಲ್ಲಿದ್ದಾರೆ. ಇನ್ನು ಗುಜರಾತ್​ ಟೈಟಾನ್ಸ್​ ಟೀಮ್​​ನ ಆಲ್ರೌಂಡರ್ಸ್​ಗಳನ್ನ ನೋಡೋದಾದ್ರೆ.

GT ಆಲ್​​ರೌಂಡರ್ಸ್

ರಾಹುಲ್ ತೆವಾಟಿಯಾ, ಜಯಂತ್ ಯಾದವ್, ವಿಜಯ್ ಶಂಕರ್, ಒಮರ್​ಜಾಯಿ, ರಶೀದ್ ಖಾನ್

 

ಒಟ್ಟು ಐದು ಮಂದಿ ಆಲ್ರೌಂಡರ್ಸ್ ಗುಜರಾತ್ ಟೈಟಾನ್ಸ್​ ಟೀಮ್​ನಲ್ಲಿದ್ದಾರೆ. ಇನ್ನು ಕೆಎಲ್​ ರಾಹುಲ್ ಕ್ಯಾಪ್ಟನ್ ಆಗಿರೋ ಲಕ್ನೋ ಸೂಪರ್​ ಜಯಾಂಟ್ಸ್​​ನಲ್ಲಿ ಏಳು ಮಂದಿ ಆಲ್ರೌಂಡರ್ಸ್ ಇದ್ದಾರೆ.

ಲಕ್ನೋ ಆಲ್​​ರೌಂಡರ್ಸ್

ಕೃಷ್ಣಪ್ಪ ಗೌತಮ್, ಕ್ರುನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಪ್ರೇರಕ್ ಮಾನ್​ಕಾಡ್, ಅರ್ಶಿನ್ ಕುಲಕರ್ಣಿ, ಡೇವಿಡ್ ವಿಲ್ಲಿ, ಕೈಲ್ ಮಿಯರ್ಸ್

RCB ಆಲ್​​ರೌಂಡರ್ಸ್

ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ ವೆಲ್, ಮಹಿಪಾಲ್ ಲೋಮ್​ ರೋರ್, ಮನೋಜ್ ಬಂಡಾಜೆ, ಟಾಮ್ ಕರನ್, ಸ್ವಪ್ನಿಲ್ ಸಿಂಗ್.

ಈ ಪೈಕಿ ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಫುಲ್ ಫಿಟ್ ಆದ್ರೆ ಟಾಮ್ ಕರನ್. ಈ ಮೂವರು ಆಲ್ರೌಂಡರ್ಸ್​ ಪ್ಲೇಯಿಂಗ್-11ನಲ್ಲಿ ಇರಬಹುದು.

ಓವರ್​ಆಲ್ ಆಗಿ ಟಾಪ್ ಕ್ವಾಲಿಟಿ ಆಲ್ರೌಂಡರ್ಸ್​ಗಳಿರೋ ಟೀಮ್​ಗಳನ್ನ ನೋಡೋದಾದ್ರೆ. ಸಿಎಸ್​​ಕೆ, ಹೈದರಾಬಾದ್, ಪಂಜಾಬ್, ಆರ್​ಸಿಬಿ ಮತ್ತು ಲಕ್ನೋ ಸೂಪರ್ ಜಯಾಂಟ್ಸ್ ಟಾಪ್​​ 5ನಲ್ಲಿವೆ.

Sulekha