ಸಂಜೆಯಾಗುತ್ತಿದ್ದಂತೆ ಭಯಾನಕವಾಗುತ್ತೆ ಈ ಧಾರ್ಮಿಕ ಸ್ಥಳ.. – ರಾತ್ರಿ ವೇಳೆ ಕೇಳುತ್ತೆ ಜನರ ಕಿರುಚಾಟ!

ಸಂಜೆಯಾಗುತ್ತಿದ್ದಂತೆ ಭಯಾನಕವಾಗುತ್ತೆ ಈ ಧಾರ್ಮಿಕ ಸ್ಥಳ.. – ರಾತ್ರಿ ವೇಳೆ ಕೇಳುತ್ತೆ ಜನರ ಕಿರುಚಾಟ!

ಕೆಲವು ದೇವಸ್ಥಾನಗಳು ತಮ್ಮ ವಿಚಿತ್ರ ಆಚರಣೆಗಳಿಂದ ಅಥವಾ ಅವುಗಳಿಗಿರುವ ವಿಚಿತ್ರ ಹಿನ್ನೆಲೆಗಳಿಂದ, ತಮ್ಮ ವಿಚಿತ್ರವಾದ ರಚನೆಗಳಿಂದ ಪ್ರಖ್ಯಾತಿಗಳಿಸಿರುತ್ತವೆ. ಕೇವಲ ಆಸ್ಥಿಕರಲ್ಲದೆ ನಾಸ್ತಿಕರನ್ನೂ ಸಹ ತಮ್ಮ ವಿಶೇಷತೆಗಳಿಂದ ಆಕರ್ಷಿಸುತ್ತವೆ. ಇನ್ನೂ ಕೆಲವು ಧಾರ್ಮಿಕ ಸ್ಥಳಗಳಲ್ಲಿ ನಿಗೂಢತೆ ಅಡಗಿದ್ದರೆ, ಮತ್ತೆ ಕೆಲವೆಡೆ ಭಯಾನಕತೆ ಅಡಗಿದೆ. ಇಲ್ಲೊಂದು ಧಾರ್ಮಿಕ ಸ್ಥಳವಿದೆ. ಈ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆ ಭಯಾನಕ ಸ್ಥಳವಾಗಿ ಬಿಡುತ್ತದೆ.

ಇದನ್ನೂ ಓದಿ: 80% ಮೈ ಮುಚ್ಚಿಕೊಂಡ್ರೆ ಮಾತ್ರ ದೇವಾಲಯಗಳಿಗೆ ಪ್ರವೇಶ! – ಇಲ್ಲಿ ಮಹಿಳೆಯರಿಗೆ ಹೊಸ ರೂಲ್ಸ್‌..

ಭಾರತದ ನೆರೆಯ ದೇಶ ನೇಪಾಳದಲ್ಲೊಂದು ಭಯಾನಕ ಮತ್ತು ನಿಗೂಢ ಪ್ರದೇಶಗಳಿಗೆ. ಈ ಪ್ರದೇಶಗಳಿಗೆ ರಾತ್ರಿ ವೇಳೆ ಜನರು ಹೋಗಲು ಭಯ ಪಡುತ್ತಾರೆ. ಆ ಪ್ರದೇಶ  ಯಾವುದೆಂದರೆ ಪಶುಪತಿನಾಥ ದೇವಾಲಯದ ಬಳಿ ಇರುವ ಆರ್ಯ ಘಾಟ್. ಪಶುಪತಿನಾಥ ದೇವಾಲಯ ನೇಪಾಳ ಮತ್ತು ಭಾರತದ ಜನರ ಪ್ರಮುಖ ಯಾತ್ರಾ ಸ್ಥಳ ಎನ್ನಬಹುದು. ಈ ದೇವಾಲಯದ ಬಳಿ ಇರುವ ಘಾಟ್‌ ಆರ್ಯ ಘಾಟ್ ನ ನಿಗೂಢ ಕಥೆ ತುಂಬಾನೆ ಆಸಕ್ತಿದಾಯಕವಾಗಿದೆ. ಈ ಘಾಟ್ ನಲ್ಲಿ ಪ್ರತಿದಿನ ಒಂದು ಡಜನ್ ಗೂ ಹೆಚ್ಚು ಜನರು ತಮ್ಮ ಕುಟುಂಬ ಸದಸ್ಯರನ್ನು ಅಂತ್ಯಕ್ರಿಯೆ ಮಾಡಲು ಬರುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಹೆಚ್ಚಿನ ಶವ ಸಂಸ್ಕಾರ ನಡೆಯುವುದರಿಂದ ದೆವ್ವದ ಉಪಟಳ ಕೂಡ ಇಲ್ಲಿ ಹೆಚ್ಚಾಗಿ ಕಂಡು ಬರುತ್ತೆ.

ಮಧ್ಯರಾತ್ರಿಯಲ್ಲಿ ಇಲ್ಲಿ ಜನರ ಧ್ವನಿ ಮತ್ತು ಕಿರುಚಾಟಗಳು ಕೇಳುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಸೂರ್ಯ ಮುಳುಗಿದ ಕೂಡಲೇ ಈ ಘಾಟ್ ಭಯಾನಕ ಸಮಾಧಿಯಾಗಿ ರೂಪಾಂತರಗೊಳ್ಳುತ್ತದೆ ಮತ್ತು ಎಲ್ಲೆಡೆ ಮೌನವಿರುತ್ತದೆ. ಜನ ಅತ್ತ ಸುಳಿಯಲು ಸಹ ಭಯ ಪಡ್ತಾರೆ. ಆರ್ಯಘಾಟ್ ಬಗ್ಗೆ ಮತ್ತೊಂದು ಕಥೆಯೆಂದರೆ ಬಿಳಿ ಬಟ್ಟೆ ಧರಿಸಿದ ಕೆಲವರು ಮಧ್ಯರಾತ್ರಿಯಲ್ಲಿ ಘಾಟ್ ಸುತ್ತಲೂ ತಿರುಗಾಡುತ್ತಿರೋದನ್ನು ಸಹ ಕೆಲವರು ನೋಡಿದ್ದಾರಂತೆ.

ದೇವಿ ಘಾಟ್, ಚಿತ್ವಾನ್ ನೇಪಾಳದ ಎರಡನೇ ಅತ್ಯಂತ ನಿಗೂಢ ಸ್ಥಳವೆಂದರೆ ಚಿತ್ವಾನ್ ನಲ್ಲಿರುವ ದೇವಿ ಘಾಟ್. ಪಶುಪತಿನಾಥ ದೇವಾಲಯದಂತೆ, ದೇವಿ ಘಾಟ್ ಅನ್ನು ಹಿಂದೂ ಸಂಸ್ಕೃತಿ ಮತ್ತು ಧರ್ಮದ ಪ್ರಸಿದ್ಧ ಕೇಂದ್ರವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ದೇವಿಘಾಟ್ ನ ನಿಗೂಢ ಕಥೆಯನ್ನು ತುಂಬಾ ಭಯಾನಕವೆಂದು ಪರಿಗಣಿಸಲಾಗಿದೆ. 2009 ರಲ್ಲಿ, ವ್ಯಕ್ತಿಯ ತಲೆಬುರುಡೆ ಈ ಜಾಗದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತದೆ. ಈ ಘಟನೆಯ ನಂತರ, ಈ ಸ್ಥಳವನ್ನು ದೆವ್ವದ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ದೇವಿ ಘಾಟ್ ಬಗ್ಗೆ ಮತ್ತಷ್ಟು ಭಯಾನಕ ಕಥೆಗಳೂ ಕೇಳಿ ಬರುತ್ತೆ. ಅಂದ್ರೆ ಕೆಲವು ಮಹಿಳೆಯರು ಮಧ್ಯರಾತ್ರಿಯಲ್ಲಿ ಇಲ್ಲಿ ತಾವಾಗಿಯೇ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ ಎಂದು ಜನರು ನಂಬುತ್ತಾರೆ. ಮಹಿಳೆಯರು ನೃತ್ಯ ಮಾಡುವಾಗ, ಸುತ್ತಲೂ ಬೆಂಕಿಯೂ ಹತ್ತಿಕೊಳ್ಳುತ್ತಂತೆ. ಈ ಚಟುವಟಿಕೆಗಳಿಂದಾಗಿ, ಈ ಜಾಗವು ಸೂರ್ಯ ಮುಳುಗಿದ ಕೂಡಲೇ ಭಯಾನಕ ತಾಣವಾಗಿ ಬದಲಾಗುತ್ತದೆ.

suddiyaana