ಮೇಕೆಗಳನ್ನು ಮಳೆಯಿಂದ ರಕ್ಷಿಸಲು ರೈನ್ ಕೋಟ್ ಸಿದ್ದಪಡಿಸಿದ ರೈತ

ಮೇಕೆಗಳನ್ನು ಮಳೆಯಿಂದ ರಕ್ಷಿಸಲು ರೈನ್ ಕೋಟ್ ಸಿದ್ದಪಡಿಸಿದ ರೈತ

ಚೆನ್ನೈ: ಇಂದಿನ ದಿನಗಳಲ್ಲಿ ಅಕಾಲಿಕ ಮಳೆ ಹೆಚ್ಚಾಗಿದೆ. ಅಚಾನಕ್ ಆಗಿ ಎಂಟ್ರಿ ಕೊಡುವ ಮಳೆಯಿಂದಾಗಿ ಎಲ್ಲರೂ ಮಳೆಯಲ್ಲಿ ನೆನೆಯುತ್ತಾ ತೆರಳುತ್ತಾರೆ. ಪ್ರಾಣಿಗಳು ಕೂಡ ಮಳೆಯಲ್ಲಿ ನೆನೆಯುತ್ತಾ ಮೇಯುತ್ತವೆ. ಅದಕ್ಕೆಂದೇ ಇಲ್ಲೊಬ್ಬ ರೈತ ತಮ್ಮ ಮೇಕೆಗಳು ಮಳೆಯಲ್ಲಿ ನೆನೆಯಬಾರದು ಎಂದು ತಾತ್ಕಾಲಿಕ ರೈನ್ ಕೋಟ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತೀ ಉದ್ದದ ಮೂಗು ಹೊಂದಿರುವ ವ್ಯಕ್ತಿ ಇವರೇ – ಫೋಟೋ ವೈರಲ್

ತಮಿಳುನಾಡಿನ ತಾಂಜಾವೂರಿನ ಕುಲಮಂಗಲಂ ಗ್ರಾಮದ ಗಣೇಶನ್ (70) ಎಂಬವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳಿಗಳನ್ನು ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಅವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಗಣೇಶನ್ ಅವುಗಳಿಗೆ ರೈನ್‍ಕೋಟ್‍ನ್ನು ತಯಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ತಂದ ಚೀಲವನ್ನು ಅವರು ತಮ್ಮ ಮೇಕೆಗಳಿಗೆ ರೈನ್ ಕೋಟ್‍ಗಳನ್ನಾಗಿ ಪರಿವರ್ತಿಸಿದ್ದಾರೆ. ಈ ಕಾರ್ಯವನ್ನುಕಂಡ ಅಲ್ಲಿನ ಗ್ರಾಮಸ್ಥರು ಆಶ್ಚರ್ಯಕ್ಕೊಳಗಾದರೂ, ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯನ್ನು ಶ್ಲಾಘಿಸಿದ್ದಾರೆ.

suddiyaana