ಆಹಾರವನ್ನೇ ನೀಡದೆ 1,000ಕ್ಕೂ ಹೆಚ್ಚು ಶ್ವಾನಗಳನ್ನ ಕೊಂದ ನೀಚ – ಮನೆಯ ತುಂಬಾ ಅಸ್ಥಿಪಂಜರಗಳು..!

ಆಹಾರವನ್ನೇ ನೀಡದೆ 1,000ಕ್ಕೂ ಹೆಚ್ಚು ಶ್ವಾನಗಳನ್ನ ಕೊಂದ ನೀಚ – ಮನೆಯ ತುಂಬಾ ಅಸ್ಥಿಪಂಜರಗಳು..!

ಈಗಂತೂ ಮನೆ ಮಕ್ಕಳಿಗಿಂತ ಹೆಚ್ಚಾಗಿ ನಾಯಿ, ಬೆಕ್ಕುಗಳನ್ನ ಜನ ಪ್ರೀತಿ ಮಾಡ್ತಾರೆ. ಆದ್ರೆ ಇಲ್ಲಿ ನಡೆದಿರೋ ಘಟನೆ ಬಗ್ಗೆ ತಿಳಿದ್ರೆ ನೀವೇ ಶಾಕ್ ಆಗ್ತೀರಾ. ಅಯ್ಯೋ ಇಂಥಾ ಪಾಪಿಗಳೂ ಇದ್ದಾರಾ ಅಂತಾ ಹಿಡಿಶಾಪ ಹಾಕ್ತೀರಾ. ಯಾಕಂದ್ರೆ ಕ್ರೂರಿಯೊಬ್ಬ ಆಹಾರವನ್ನೇ ನೀಡದೆ 1,000ಕ್ಕೂ ಹೆಚ್ಚು ಶ್ವಾನಗಳನ್ನ ಕೊಂದಿದ್ದಾನೆ.

ಅನಾಥ ನಾಯಿಗಳನ್ನು ಸಾಕುವುದಾಗಿ ಅವುಗಳ ಮಾಲೀಕರಿಂದ ಹಣ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಅವುಗಳಿಗೆ ಆಹಾರ ನೀಡದೇ ಅಮಾನುಷವಾಗಿ ಅವುಗಳ ಸಾವಿಗೆ ಕಾರಣವಾಗಿದ್ದಾನೆ. ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಇಂಥಾದ್ದೊಂದು ದಾರುಣ ಘಟನೆ ನಡೆದಿದೆ. ಸಂತಾನೋತ್ಪತ್ತಿಗೆ ಬಳಸುವ ನಾಯಿಗಳನ್ನು ವಯಸ್ಸು ಮೀರಿದ ಬಳಿಕ ಪ್ರಯೋಜನ ಇಲ್ಲ ಎಂದು ಕೆಲ ಮಾಲೀಕರು ಈತನಿಗೆ ನೀಡುತ್ತಿದ್ದರು. ಆತ ತನ್ನ ಮನೆಯಲ್ಲಿ ವಿಶಾಲ ಜಾಗದಲ್ಲಿ ಅವುಗಳನ್ನು ಸಾಕುವುದಾಗಿ ಹೇಳಿ ಮಾಲೀಕರಿಂದ ಹಣ ಪಡೆಯುತ್ತಿದ್ದ. ಆದರೆ ಇತ್ತೀಚೆಗೆ ಮನೆ ಮೇಲೆ ದಾಳಿ ನಡೆಸಿದ ವೇಳೆ ಅಲ್ಲಿ 1000ಕ್ಕೂ ಹೆಚ್ಚು ನಾಯಿಗಳ ಅಸ್ಥಿಪಂಜರ ಪತ್ತೆಯಾಗಿದೆ. ಈ ವೇಳೆ ಆತ ನಾಯಿಗಳಿಗೆ ಆಹಾರ ನೀಡದೇ ಅವುಗಳ ಸಾವಿಗೆ ಕಾರಣವಾದ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಲಾಗಿದೆ.

ಇದನ್ನೂ ಓದಿ : ಪಾರಿವಾಳದ ಕಾಲಲ್ಲಿ ಕ್ಯಾಮರಾ, ಮೈಕ್ರೋಚಿಪ್! – ಗೂಢಚರ್ಯೆ ನಡೆಯುತ್ತಿದ್ಯಾ?

ಜಿಯೊಂಗ್ಗಿ ಪ್ರಾಂತ್ಯದ ಯಾಂಗ್‌ಪಿಯೊಂಗ್‌ನಲ್ಲಿ ವ್ಯಕ್ತಿಯೊಬ್ಬ ತಮ್ಮ ನಾಯಿಯನ್ನು (Dog) ಹುಡುಕುತ್ತಿರುವಾಗ ಆಕಸ್ಮಿಕವಾಗಿ ಆತನ ಮನೆಗೆ ಹೋಗಿದ್ದ ವೇಳೆ ಈ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. 60 ವರ್ಷದ ಆರೋಪಿ  ಅನಾಥ ನಾಯಿಗಳನ್ನು ಸಾಕುವುದಾಗಿ ಹೇಳಿ ಅವುಗಳನ್ನು ಹಸಿವಿನಿಂದ (Starve) ಸಾಯುವಂತೆ (Death) ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಲಾಭದಾಯಕವಲ್ಲದ ನಂತರ ಅವುಗಳನ್ನು ವಿಲೇವಾರಿ ಮಾಡಲು ನಾಯಿ ಸಾಕಣೆದಾರರಿಂದ ಹಣ (Money) ಪಡೆದಿದ್ದಾನೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು (Animal Rights Group) ಆರೋಪಿಸಿದ್ದಾರೆ.

ಆರೋಪಿಗೆ ನಾಯಿ ಸಾಕಣೆದಾರರು ಪ್ರತಿ ನಾಯಿಗೆ 10,000 ವಾನ್ (7.70 ಅಮೆರಿಕ ಡಾಲರ್‌) ಪಾವತಿಸಿದ್ದಾರೆ ಎಂದು ಕೇರ್‌ (Care) ಎಂಬ ಪ್ರಾಣಿ ಹಕ್ಕುಗಳ ಗುಂಪಿನ ಸದಸ್ಯರೊಬ್ಬರು ಹೇಳಿದ್ದಾರೆ. 2020 ರಿಂದ ಈ ನಾಯಿಗಳನ್ನು ಲಾಕ್ ಮಾಡಿ ಹಸಿವಿನಿಂದ ಸಾಯಿಸಿದ್ದಾರೆ ತಿಳಿಸಿದ್ದಾರೆ.

ಪಂಜರಗಳು, ಗೋಣಿಚೀಲಗಳು ಮತ್ತು ರಬ್ಬರ್ ಬಾಕ್ಸ್‌ಗಳಲ್ಲಿ ಸತ್ತ ನಾಯಿಗಳ ಅಸ್ಥಿಪಂಜರಗಳು ಪತ್ತೆಯಾಗಿವೆ.  ಕೇರ್‌ ಎಂಬ ಪ್ರಾಣಿ ಹಕ್ಕುಗಳ ಗುಂಪಿನ ಸದಸ್ಯರು ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದು, ಬದುಕಿರುವ ನಾಯಿಗಳು ಸಹ ಚರ್ಮ ರೋಗಗಳು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿವೆ. ರಕ್ಷಿಸಲ್ಪಟ್ಟ ನಾಲ್ಕು ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವುಗಳಲ್ಲಿ ಎರಡು ನಾಯಿಗಳ ಸ್ಥಿತಿ ಚಿಂತಾಜನಕವಾಗಿವೆ ಎಂದಿದ್ದಾರೆ.

suddiyaana