ನಿಲ್ಲುತ್ತಿಲ್ಲ ಚೀನಾ ಕುತಂತ್ರ – ಅತಿಕ್ರಮಣದ ಸಾಕ್ಷ್ಯ ನುಡಿಯುತ್ತಿವೆ ಉಪಗ್ರಹದ ಚಿತ್ರಗಳು

ನಿಲ್ಲುತ್ತಿಲ್ಲ ಚೀನಾ ಕುತಂತ್ರ – ಅತಿಕ್ರಮಣದ ಸಾಕ್ಷ್ಯ ನುಡಿಯುತ್ತಿವೆ ಉಪಗ್ರಹದ ಚಿತ್ರಗಳು

ಬೀಜಿಂಗ್: ಚೀನಾ ತನ್ನ ನರಿ ಬುದ್ದಿಯನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಜಾಗತಿಕ ವ್ಯಾಪಾರಕ್ಕೆ ಮಹತ್ವವಾಗಿರುವ ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮುಂದುವರೆಸುತ್ತಿದೆ. ಈ ಬಗ್ಗೆ ಉಪಗ್ರಹದ ಚಿತ್ರಗಳು ಸಾಕ್ಷ್ಯ ನುಡಿದಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ರದೇಶದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಕಾಮಗಾರಿಗಳನ್ನು ಚೀನಾ ನಡೆಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 120 ಕಿ.ಮೀ ಈಜಿ ಬಂದ ‘ರಾಯಲ್ ಬೆಂಗಾಲ್ ಟೈಗರ್‌’ – ವಿಡಿಯೋ ವೈರಲ್

ಹೊಸದಾಗಿ ಬಿಡುಗಡೆಯಾಗಿರುವ ಉಪಗ್ರಹ ಚಿತ್ರದಲ್ಲಿ, ದಕ್ಷಿಣ ಚೀನಾ ಸಮುದ್ರದ ಮಾನವ ನಿರ್ಮಿತ ದ್ವೀಪದಲ್ಲಿ ಚೀನಾ ಯುದ್ಧ ಹಡಗೊಂಡು ಭೂಸುಧಾರಣಾ ಯೋಜನೆಗಳಲ್ಲಿ ಬಳಸುವ ಹೈಡ್ರಾಲಿಕ್ ಅಗೆಯುವ ಯಂತ್ರವನ್ನು ಇಳಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ ಕಳೆದ ವರ್ಷ ಈ ಪ್ರದೇಶದಲ್ಲಿ ಮಾನವ ನಿರ್ಮಿತ ದ್ವೀಪ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣಾ ಚೀನಾ ಸಮುದ್ರದ ಹಕ್ಕುಸ್ವಾಮ್ಯದ ಕುರಿತು ಚೀನಾ ಹಾಗೂ ಫಿಲಿಫೀನ್ಸ್, ತೈವಾನ್ ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ, ಬ್ರೂನೈ ನಡುವೆ ಅನೇಕ ವರ್ಷಗಳಿಂದ ವಾಗ್ವಾದ ಹೆಚ್ಚುತ್ತಿದೆ. ಈ ಹಿಂದೆ ಚೀನಾ ಮಿಲಿಟರಿ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಂದರುಗಳು, ರನ್ ವೇಗಳನ್ನು ಹಾಗೂ ಇತರೆ ಸೌಕರ್ಯಗಳನ್ನು ನಿರ್ಮಿಸಲು ಬಂಡೆಗಳು, ದ್ವೀಪಗಳು ಮತ್ತು ಇತರೆ ಮಾನವ ನಿರ್ಮಿತ ಭೂಪ್ರದೇಶಗಳನ್ನು ನಿರ್ಮಿಸಿತ್ತು. ಅಲ್ಲದೇ ಕಳೆದ ಒಂದು ದಶಕದಲ್ಲಿ ಚೀನಾದ ನೌಕಾ ಪಡೆಯು ಜನವಸತಿ ಇಲ್ಲದ ಈ ದ್ವೀಪಗಳ ನಾಲ್ಕು ಸ್ಥಳಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana