ಲೀಟರ್ ಹಾಲಿಗೆ ₹200, ಕೆಜಿ ಕೋಳಿ ಮಾಂಸಕ್ಕೆ ₹1,100 – ಪಾಪಿ ಪಾಕಿಸ್ತಾನದ ಸ್ಥಿತಿ ಅಧೋಗತಿ..!

ಲೀಟರ್ ಹಾಲಿಗೆ ₹200, ಕೆಜಿ ಕೋಳಿ ಮಾಂಸಕ್ಕೆ ₹1,100 – ಪಾಪಿ ಪಾಕಿಸ್ತಾನದ ಸ್ಥಿತಿ ಅಧೋಗತಿ..!

ತುತ್ತು ಅನ್ನಕ್ಕೂ ನೆರೆ ರಾಷ್ಟ್ರಗಳತ್ತ ಕೈ ಚಾಚುತ್ತಿರೋ ಪಾಕಿಸ್ತಾನದ ಸ್ಥಿತಿ ಈಗಂತೂ ಮತ್ತಷ್ಟು ಶೋಚನೀಯವಾಗಿದೆ. ಅಲ್ಲಿನ ಜನ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರೋ ಹೊತ್ತಲ್ಲೇ ಬೆಲೆ ಏರಿಕೆ ಅನ್ನೋದು ಮಾಯಾಮೃಗದಂತೆ ಓಡ್ತಿದೆ. ಲೀಟರ್ ಹಾಲಿನ ಬೆಲೆ ₹200 ರ ಗಡಿ ದಾಟಿದ್ರೆ, ಕೋಳಿ ಮಾಂಸಕ್ಕೂ ಸಾವಿರ ರೂಪಾಯಿ ಕೊಡಬೇಕಾಗಿದೆ.

ಇದನ್ನೂ ಓದಿ : ಎಸ್​ಪಿ ನಾಯಕ ಮತ್ತು ಪುತ್ರನಿಗೆ 2 ವರ್ಷ ಜೈಲು – 15 ವರ್ಷಗಳ ಹಿಂದಿನ ಕೇಸ್ ​ಗೆ ಟ್ವಿಸ್ಟ್..!

ಪಾಕಿಸ್ತಾನದಲ್ಲಿ ಹಣದುಬ್ಬರದಿಂದಾಗಿ ಅಕ್ಷರಶಃ ದಿವಾಳಿಯಾಗ್ತಿದೆ. ರಾಜಕೀಯ ಅನಿಶ್ಚಿತತೆ, ಚೀನಾದ ಸಾಲದ ಪಾಶ, ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದ ಪಾಕಿಸ್ತಾನ ಸಾಲದ ಸುಳಿಗೆ ಸಿಲುಕಿದ್ದು, ಪ್ರಧಾನಿ ಶೆಹಬಾಜ್‌ ಷರೀಫ್‌ ನೇತೃತ್ವದ ಪಾಕಿಸ್ತಾನ ಸರ್ಕಾರ ವಿಲವಿಲ ಒದ್ದಾಡುತ್ತಿದೆ. ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಾಲಿನ ದರ 200 ರೂಪಾಯಿ ಗಡಿ ದಾಟಿದ್ದು, ಹಾಲು ಮಾರಾಟಗಾರರು ಒಂದು ಲೀಟರ್ ಹಾಲಿನ ದರವನ್ನು 190 ರಿಂದ 210 ರೂಪಾಯಿಗೆ ಏರಿಕೆ ಮಾಡಿದ್ದಾರೆ ಎಂದು ಅಂತರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.

ಅಕ್ಕಿ, ಬೇಳೆ, ಹಾಲನ್ನೇ ಖರೀದಿ ಮಾಡಲಾಗದ ಜನ್ರಿಗೆ ಕೋಳಿ ಮಾಂಸ ಕೊಳ್ಳೋದು ಕನಸಿನ ಮಾತಾಗಿದೆ. ಯಾಕಂದ್ರೆ ಒಂದು ಕೆಜಿ ಕೋಳಿ ಮಾಂಸಕ್ಕೆ 700-800 ರೂಪಾಯಿ ತನಕ ಏರಿಕೆ ಆಗಿದೆ. ಕೆಲ ದಿನಗಳ ಹಿಂದೆ ಈ ದರ 620 ರೂಪಾಯಿ ಇತ್ತು. ಇದೀಗ ಮತ್ತೆ ಒಂದೇ ವಾರದ ಅವಧಿಯಲ್ಲಿ 120 ರೂಪಾಯಿಗಿಂತಲೂ ಏರಿಕೆ ಕಂಡಿದೆ. ಇನ್ನು ಬೋನ್‌ಲೆಸ್ ಚಿಕನ್ ಮಾಂಸದ ದರ 900 ರಿಂದ 1,100 ರೂಪಾಯಿ ತನಕ ಇದೆ.

 

 

suddiyaana