ಖಾಲಿ ಕೆರೆಯಲ್ಲಿ ನೀರಿಗಾಗಿ ಕಾಡಾನೆಯಿಂದ ಹುಡುಕಾಟ – ಕಾಡು ಪ್ರಾಣಿಗಳಿಗೂ ತಟ್ಟಿದ ರಣ ಬಿಸಿಲಿನ ಎಫೆಕ್ಟ್
ರಾಜ್ಯದ ಕೆಲವು ಕಡೆಗಳಲ್ಲಿ ಇನ್ನೂ ವರುಣ ದೇವ ಕೃಪೆ ತೋರಿಸುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗುತ್ತಿದೆ. ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳಿಗೂ ಕೂಡ ಬರಗಾಲದ ಎಫೆಕ್ಟ್ ತಟ್ಟುತ್ತಿದೆ. ಇದೀಗ ಇಲ್ಲೊಂದು ಕಾಡಾನೆ ನೀರಿಗಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಿದೆ. ಇದೀಗ ಮನಕಲಕುವ ದೃಶ್ಯವೊಂದು ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವಿಮಾನ ಹತ್ತದೆ ವಿದೇಶದಲ್ಲೇ ಉಳಿದುಕೊಂಡ ಪ್ರಜ್ವಲ್ ರೇವಣ್ಣ! – ಎಸ್ಐಟಿ ಅಧಿಕಾರಿಗಳ ನಡೆ ಏನು.?
ಈಗ ನಗರಗಳಲ್ಲಿ ಮಾತ್ರವಲ್ಲ.. ಅರಣ್ಯಗಳಲ್ಲೂ ಕೂಡ ನೀರಿಲ್ಲ. ಇದ್ರಿಂದಾಗಿ ಪ್ರಾಣಿಗಳು ತೊಂದರೆ ಅನುಭವಿಸುವಂತೆ ಆಗಿದೆ. ಅರಣ್ಯದಲ್ಲಿ ನೀರಿಲ್ಲದ ಪರಿಣಾಮ ಕಾಡಾನೆಯೊಂದು ತನ್ನ ದಾಹ ನೀಗಿಸಿಕೊಳ್ಳಲು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿಯ ಕಿರಪಾತಿಗೆ ಕೆರೆಗೆ ಬಂದಿದೆ. ನೀರಿನ ದಾಹ ತಾಳಲಾರದ ಆನೆಯೂ ಕಳೆದ ಮೂರು ದಿನಗಳಿಂದ ಇಲ್ಲಿಗೆ ಲಗ್ಗೆ ಇಡುತ್ತಿದ್ದು, ನೀರು ಸಿಗದೆ ವಾಪಾಸ್ಸಾಗಿದೆ ಇದರ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಈ ಭಾಗದಲ್ಲಿ ರಾತ್ರಿ ವೇಳೆ ಮಾತ್ರ ಕಾಡಾನೆಗಳು ಕಾಣ ಸಿಗುತ್ತಿದ್ದವು. ಆದರೆ, ಈಗ ಹಗಲಿನಲ್ಲೇ ಹಸು, ಎಮ್ಮೆ ಕುರಿಗಳಂತೆ ಕಾಡಾನೆ ದಾಹ ಇಂಗಿಸಿಕೊಳ್ಳಲು ಇಲ್ಲಿಗೆ ಬರುತ್ತಿವೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅರಣ್ಯ ಇಲಾಖೆ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.