ಮಹಿಳೆ ಅಕೌಂಟ್ ನಿಂದ ₹11 ಲಕ್ಷ ಕದ್ದ ‘ಸೈಬರ್ ಪೊಲೀಸರು’ – ತಿಂಗಳಲ್ಲೇ 10ಕ್ಕೂ ಹೆಚ್ಚು ಜನ್ರಿಗೆ ಮೋಸ!

ಮಹಿಳೆ ಅಕೌಂಟ್ ನಿಂದ ₹11 ಲಕ್ಷ ಕದ್ದ ‘ಸೈಬರ್ ಪೊಲೀಸರು’ – ತಿಂಗಳಲ್ಲೇ 10ಕ್ಕೂ ಹೆಚ್ಚು ಜನ್ರಿಗೆ ಮೋಸ!

ಪೊಲೀಸರು ಚಾಪೆ ಕೆಳಗೆ ತೂರಿದ್ರೆ ಖದೀಮರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನವನ್ನೇ ಬಳಸಿಕೊಂಡು ಜನರನ್ನ ಯಾಮಾರಿಸ್ತಿದ್ದಾರೆ. ಅದ್ರಲ್ಲೂ ಈಗ ಜನ್ರನ್ನ ವಂಚಿಸೋಕೆ ಹೊಸ ದಾರಿ ಕಂಡುಕೊಂಡಿದ್ದಾರೆ. ಅದೂ ಕೂಡ ಪೊಲೀಸರ ಹೆಸರಲ್ಲೇ ಸುಲಿಗೆಗೆ ಇಳಿದಿದ್ದಾರೆ.

ನಾವು ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿ ದುಷ್ಕರ್ಮಿಗಳು 11 ಲಕ್ಷ ಲಪಟಾಯಿಸಿದ್ದಾರೆ. ಬೆಂಗಳೂರಿನ ಕಗ್ಗದಾಸಪುರದ 42 ವರ್ಷದ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದಾರೆ. ಮಹಿಳೆಗೆ ಫೆಬ್ರವರಿ 14ರಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಕೊರಿಯರ್ ಸಂಸ್ಥೆಯ ಪ್ರತಿನಿಧಿ. ನಿಮ್ಮ ಹೆಸರಿನಲ್ಲಿ ಮುಂಬೈನಲ್ಲಿರುವ ನಮ್ಮ ಕೊರಿಯರ್ ಸಂಸ್ಥೆಗೆ ಪಾರ್ಸೆಲ್ ಬಂದಿದೆ ಎಂದು ಹೇಳಿದ್ದಾನೆ. ಅದೇ ದಿನ ನಾವು ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಬೇರೆ ಬೇರೆ ವ್ಯಕ್ತಿಗಳು ಪದೇಪದೆ ಕರೆ ಮಾಡಿದ್ದಾರೆ.

ಇದನ್ನೂ ಓದಿ : ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ

ಮಹಿಳೆಗೆ ಪದೇಪದೆ ಕರೆ ಮಾಡಿ ನಿಮ್ಮ ಆಧಾರ್ ಕಾರ್ಡ್  ವಿವರ ಬಳಸಿ ನಕಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಲಾಗಿದೆ. ಇದು ಅಪರಾಧ ಹಾಗೂ ನಾವು ನಿಮ್ಮನ್ನ ಬಂಧಿಸಬೇಕಾಗುತ್ತದೆ ಎಂದಿದ್ದಾರೆ. ಈ ವೇಳೆ ಮಹಿಳೆ ಬ್ಯಾಂಕ್ ಅಕೌಂಟ್ ಓಪನ್ ಮಾಡಲು ನಾನು ಯಾರಿಗೂ ನನ್ನ ಆಧಾರ್ ಕಾರ್ಡ್ ಕೊಟ್ಟಿಲ್ಲ ಅಂದಿದ್ದಾರೆ. ಆದ್ರೆ ಪಾಪಿಗಳು ಈ ಬಗ್ಗೆ ನಾವು ತನಿಖೆ ಮಾಡಬೇಕು ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಡಿ ಎಂದು ಬೆದರಿಸಿದ್ದಾರೆ. ಇದರಿಂದ ಹೆದರಿದ ಮಹಿಳೆ ಸೈಬರ್ ಪೊಲೀಸರು ಅಂದುಕೊಂಡು ತನ್ನ 2 ಬ್ಯಾಂಕ್ ಅಕೌಂಟ್​ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಕೌಂಟ್ ಡೀಟೇಲ್ಸ್ ನೀಡಿದ ಕೆಲವೇ ಗಂಟೆಗಳಲ್ಲಿ ಒಂದು ಅಕೌಂಟ್​ನಲ್ಲಿದ್ದ 10 ಲಕ್ಷ ರೂಪಾಯಿ ಹಾಗೂ ಮತ್ತೊಂದು ಅಕೌಂಟ್​ನಲ್ಲಿದ್ದ 98 ಸಾವಿರ ರೂಪಾಯಿ ಮಾಯವಾಗಿದೆ. ತಾನು ಮೋಸ ಹೋಗಿರುವುದು ಗೊತ್ತಾಗ್ತಿದದ್ಂತೆ ಮಹಿಳೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಖತರ್ನಾಕ್ ಗ್ಯಾಂಗ್​ಗಾಗಿ ತಲಾಶ್ ನಡೆಸ್ತಿರೋ ಪೊಲೀಸರು ತಿಂಗಳಲ್ಲೇ 10ಕ್ಕೂ ಹೆಚ್ಚು ಇಂಥಹ ಪ್ರಕರಣ ದಾಖಲಾಗಿರೋದಾಗಿ ತಿಳಿಸಿದ್ದಾರೆ.

 

suddiyaana