ಇಲ್ಲಿ ತಂದೆ ಜೊತೆಯೇ ಮಗಳ ಮದುವೆ! – ವಿಚಿತ್ರ ಪದ್ದತಿ ಎಲ್ಲಿದೆ ಗೊತ್ತಾ?

ಇಲ್ಲಿ ತಂದೆ ಜೊತೆಯೇ ಮಗಳ ಮದುವೆ! – ವಿಚಿತ್ರ ಪದ್ದತಿ ಎಲ್ಲಿದೆ ಗೊತ್ತಾ?

ಪ್ರಪಂಚದಲ್ಲಿ ದೇಶಗಳ ಸಂಖ್ಯೆಗಿಂತ ಸಂಪ್ರದಾಯಗಳ ಸಂಖ್ಯೆ ಹೆಚ್ಚಿವೆ. ಪ್ರತಿಯೊಂದು ದೇಶದಲ್ಲಿಯೂ ತಮ್ಮದೇ ಆದ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಹೊಂದಿರುವ ಅನೇಕ ಬುಡಕಟ್ಟುಗಳು ಸಮುದಾಯಗಳು ಇವೆ. ಮದುವೆ ವಿಚಾರದಲ್ಲೂ ಹಾಗೇ.. ಜಗತ್ತಿನ ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳು ಇರುತ್ತವೆ. ಆದ್ರೆ ಈ ಜನಾಂಗದ ಪದ್ಧತಿ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಈ ಜನಾಂಗದಲ್ಲಿ ಮಲತಂದೆಯೇ ಮಗಳನ್ನ ಮದುವೆ ಆಗ್ತಾರೆ.

ಇದನ್ನೂ ಓದಿ: 11 ಗುರುವಾರ ಹೀಗೆ ಉಪವಾಸ ಮಾಡಿದರೆ ಶುಭ ಫಲ ಖಂಡಿತ – ಪೂಜೆ ಹೀಗಿರಬೇಕು ಗೊತ್ತಾ?

ಮದುವೆ ಅಂದಾಗ ಸಂಬಂಧಿಕರಲ್ಲೋ ಅಥವಾ ಹೊಸ ಸಂಬಂಧದಲ್ಲೋ ವಧು ವರರನ್ನು ಹುಡುಕಿ ಮದುವೆ ಮಾಡ್ತಾರೆ. ಆದ್ರೆ ಇಲ್ಲಿ ಮಲತಂದೆಯೇ ಮಗಳನ್ನ ವಿವಾಹವಾಗುವ ವಿಚಿತ್ರ ಪದ್ಧತಿ ಇದೆ. ಬಾಂಗ್ಲಾದೇಶದ ಬುಡಕಟ್ಟು ಸಮುದಾಯದಲ್ಲಿ ಇಂಥಾ ಆಚರಣೆ ಇದೆ. ಭಾಷೆ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಇವ್ರು ಇತರೆ ರಾಷ್ಟ್ರಗಳಿಗಿಂತ ವಿಭಿನ್ನವಾಗಿದ್ದಾರೆ. ಈ ಜನಾಂಗದ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾದರೆ, ಇನ್ನೊಂದು ಜಾತಿಯ ಪುರುಷನನ್ನು ಮರುಮದುವೆ ಮಾಡಿಕೊಳ್ಳಬಹುದು. ಆದರೆ ಮಹಿಳೆಗೆ ಈಗಾಗಲೇ ಮಗಳಿದ್ದರೆ ಅವಳು ಪ್ರೌಢಾವಸ್ಥೆಗೆ ಬಂದ ಬಳಿಕ ಮಲತಂದೆಯೇ ಅವಳನ್ನೂ ಮದುವೆಯಾಗುತ್ತಾನೆ. ಈ ಒಪ್ಪಂದಕ್ಕೆ ಒಪ್ಪಿದರೆ ಮಾತ್ರವೇ ಹೆಣ್ಣು ಮಕ್ಕಳಿರುವ ವಿಧವೆಯರನ್ನು ಪುರುಷರು ವಿವಾಹವಾಗುತ್ತಾರೆ.

ತಾಯಿ ತನ್ನನಿಂದ ಮಕ್ಕಳನ್ನು ಹೆತ್ತರೆ, ಇತ್ತ ಮಗಳು ಕೂಡ ತಂದೆಯಿಂದಲೇ ಮಕ್ಕಳನ್ನು ಪಡೆಯುತ್ತಾಳೆ. ಯುವತಿಗೆ ತಂದೆಯಾದವನು ಪತ್ನಿ ಮತ್ತು ಆಕೆಯ ಮಗಳಿಗೆ ಹುಟ್ಟುವ ಮಕ್ಕಳಿಗೂ ತಂದೆಯಾಗಿರುತ್ತಾನೆ. ಹುಟ್ಟುವ ಮಕ್ಕಳಿಗೆ ತಂದೆಯೂ ಅವನೇ ಅಜ್ಜನೂ ಅವನೇ ಅವನೇ ಎನ್ನುವುದು ವಿಪರ್ಯಾಸ. ದುರಂತ ಎಂದರೆ ಈ ವಿಚಿತ್ರ ಪದ್ಧತಿಯನ್ನು ಮಂಡಿ ಜನಾಂಗ ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆಯಂತೆ. ಚಿಕ್ಕ ವಯಸ್ಸಲ್ಲಿ ಸಾಕು ತಂದೆಯಾಗಿ ಕಾಣುತ್ತಿದ್ದ ವ್ಯಕ್ತಿಯನ್ನು ನಂತರ ಯುವತಿಯರು ತಮ್ಮ ಪತಿಯಾಗಿ ಸ್ವೀಕರಿಸಬೇಕು. ನಮಗೆ ಇದು ವಿಚಿತ್ರವಾಗಿ ಕಂಡರೂ ಅಲ್ಲಿನ ಜನರಿಗೆ ಸಂಪ್ರದಾಯವಾಗಿದೆ.

Shwetha M