ಆಕಾಶದಲ್ಲಿ ಕಾಣಿಸಲಿದೆ ಅಪರೂಪದ ಖಗೋಳ ವಿಸ್ಮಯ – ಆಗಸ್ಟ್ ನಲ್ಲಿ ಗೋಚರಿಸಲಿದೆ ಬ್ಲೂ ಮೂನ್, ಸೂಪರ್ ಮೂನ್
ವಾಷಿಂಗ್ಟನ್: ಖಗೋಳದಲ್ಲಿ ನಡೆಯುವ ವಿಸ್ಮಯಗಳು ವಿಜ್ಞಾನಲೋಕಕ್ಕೂ ಸವಾಲು ಹುಟ್ಟಿಸುತ್ತವೆ. ಸದ್ಯ ಇಂಥದ್ದೇ ಚಕಿತವೊಂದು ಈಗ ಸೌರಮಂಡಲದಲ್ಲಿ ಗೋಚರಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ಆಕಾಶದಲ್ಲಿ ಬ್ಲೂ ಮೂನ್ ಮತ್ತು ಎರಡು ಸೂಪರ್‌ಮೂನ್‌ಗಳನ್ನು ಗೋಚರಿಸಲಿದೆ.
ಹುಣ್ಣಿಮೆಯ ದಿನದಂದು ಚಂದ್ರನು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುವುದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಭೂಮಿ ಸುತ್ತ ದೀರ್ಘವೃತ್ತದ ಹಾದಿಯಲ್ಲಿ ಹುಣ್ಣಿಮೆಯ ಕಕ್ಷೆಯು ಭೂಮಿಗೆ ಹತ್ತಿರವಾದಾಗ ಸೂಪರ್‌ಮೂನ್ ಗೋಚರಿಸುತ್ತದೆ. ಅಂದರೆ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಇದು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಈ ವೇಳೆ ಚಂದ್ರ ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ.
ಇದನ್ನೂ ಓದಿ: ಮರೆಯಾಗುತ್ತಿದೆ ಶನಿಗ್ರಹದ ವಿಶಿಷ್ಟ ‘ಉಂಗುರ’!
ಹುಣ್ಣಿಮೆಯಂದು ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ತುಂಬಾ ಕಡಿಮೆ ಆಗಿರುತ್ತದೆ. ಚಂದ್ರ ಭೂಮಿಯ ಸಮೀಪ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಸುಮಾರು 4,05,500 ಕಿ.ಮೀ. ಚಂದ್ರನು ಭೂಮಿಯ ಪರಿಧಿಯ ಶೇ 90ರಷ್ಟು ಹತ್ತಿರ ಬರುತ್ತದೆ. ಈ ಖಗೋಳ ವಿಸ್ಮಯವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.
ಚಂದ್ರಸುಮಾರು 4,05,500 ಕಿಮೀ ದೂರದಲ್ಲಿದ್ದರೆ ಅಪೋಜಿ ಎಂದು ಕರೆಯಲಾಗುತ್ತದೆ. ಸಮೀಪವಿದ್ದರೆ ಅದನ್ನು ಪೆರಿಜಿ ಎಂದು ಕರೆಲಾಗುತ್ತದೆ. ಹೀಗಾದಾಗ ದೂರವು ಸರಿಸುಮಾರು 3,63,300 ಕಿಮೀಗೆ ಕಡಿಮೆಯಾಗುತ್ತದೆ. ಈ ವರ್ಷದ ಸೂಪರ್‌ಮೂನ್ ಚಕ್ರವು ವಿಶಿಷ್ಟವಾಗಿದೆ. ಏಕೆಂದರೆ ಇದು ನಾಲ್ಕು ಸತತ ಸೂಪರ್‌ಮೂನ್‌ಗಳನ್ನು ಒಳಗೊಂಡಿದೆ. ಮೊದಲನೆಯದು ಜುಲೈ 3 ರಂದು ಮತ್ತು ಕೊನೆಯದು ಸೆಪ್ಟೆಂಬರ್ 29 ರಂದು ಕಾಣಿಸಿಕೊಳ್ಳುತ್ತದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.