ಪಾಕಿಸ್ತಾನದಲ್ಲಿ ಸರಣಿ ಭೂಕಂಪ – ಕರಾಚಿಯ ಜಿಲ್ಲಾ ಕಾರಾಗೃಹದಲ್ಲಿದ್ದ 200ಕ್ಕೂ ಹೆಚ್ಚು ಕೈದಿಗಳು ಎಸ್ಕೇಪ್

ಪಾಕಿಸ್ತಾನದಲ್ಲಿ  ಸರಣಿ ಭೂಕಂಪ –  ಕರಾಚಿಯ ಜಿಲ್ಲಾ ಕಾರಾಗೃಹದಲ್ಲಿದ್ದ 200ಕ್ಕೂ ಹೆಚ್ಚು ಕೈದಿಗಳು ಎಸ್ಕೇಪ್

ಪಾಕಿಸ್ತಾನದಲ್ಲಿ ಸಂಭವಿಸಿದ ಸರಣಿ ಭೂಕಂಪ ಬೆನ್ನಲ್ಲೇ ಕರಾಚಿಯ ಜಿಲ್ಲಾ ಕಾರಾಗೃಹದಲ್ಲಿದ್ದ 200ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿರುವುದಾಗಿ ವರದಿಗಳು ತಿಳಿಸಿವೆ. ರಿಕ್ಟರ್‌ ಮಾಪಕದಲ್ಲಿ 3.2 ಮತ್ತು 3.6ರ ಕಡಿಮೆ ತೀವ್ರತೆಯ ಮೂರು ಸರಣಿ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರ ಬಿಂದು ಲಂಧಿ ಫಾಲ್ಟ್‌ ಪ್ರದೇಶ ಎಂದು ಗುರುತಿಸಲಾಗಿದೆ.

ಭೂಕಂಪದಿಂದಾಗಿ ಜೈಲಿನ ಗೋಡೆಗಳು ಬಿರುಕುಬಿಟ್ಟಿದ್ವು. ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋ ಹಾಗೇ .  ಈ ಪರಿಸ್ಥಿತಿಯನ್ನೇ ಲಾಭವಾಗಿ ಉಪಯೋಗಿಸಿಕೊಂಡ ಕೈದಿಗಳು  ಜೈಲಿನಿಂದ ಎಸ್ಕೇಪ್ ಆಗಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಕಾನೂನು ಸಚಿವರು, ಸರಣಿ ಭೂಕಂಪದಿಂದಾಗಿ ಕೈದಿಗಳು ಭೀತಿಗೊಳಗಾಗಿದ್ದರು. ಹೀಗಾಗಿ ಸ್ಥಳದಲ್ಲಿ ತಳ್ಳಾಟ, ನೂಕಾಟ ಶುರುವಾಗಿ, ತಪ್ಪಿಸಿಕೊಂಡಿದ್ದಾರೆಂದು ಹೇಳಿದ್ದಾರೆ.

ಭೂಕಂಪದಿಂದ ಗೋಡೆಗಳು ಭಾಗಶಃ ಕುಸಿದು ಬಿದ್ದ ಪರಿಣಾಮ ಕೈದಿಗಳು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಪರಾರಿ ವೇಳೆ ಕೈದಿಗಳು ಪೊಲೀಸರ ಬಳಿಯಿದ್ದ ಗನ್‌ಗಳನ್ನ ಕಸಿದುಕೊಂಡು ಪರಾರಿಯಾಗಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕೈದಿ ಸಾವನ್ನಪ್ಪಿ, ಮೂವರು ಪೊಲೀಸರೂ ಗಾಯಗೊಂಡಿದ್ದಾರೆಂದು ವರದಿಯಾಗಿದೆ.

 

Kishor KV

Leave a Reply

Your email address will not be published. Required fields are marked *