ಕ್ರಿಕೆಟ್ ನಲ್ಲಿ ಹೊಸ ರೂಲ್ಸ್ ಜಾರಿಗೆ ತಂದ ಐಸಿಸಿ – ಬೌಲರ್ಸ್ ಯಾಮಾರಿದ್ರೆ ಬೀಳುತ್ತೆ 5 ರನ್ ಗಳ ದಂಡ!

ಕ್ರಿಕೆಟ್ ನಲ್ಲಿ ಹೊಸ ರೂಲ್ಸ್ ಜಾರಿಗೆ ತಂದ ಐಸಿಸಿ – ಬೌಲರ್ಸ್ ಯಾಮಾರಿದ್ರೆ ಬೀಳುತ್ತೆ 5 ರನ್ ಗಳ ದಂಡ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ODI ಮತ್ತು T20 ಮಾದರಿಗಳಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ಒಂದು ವೇಳೆ ನಿಯಮ ಮೀರಿದ್ರೆ ಐದು ರನ್‌ಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಅಹಮದಾಬಾದ್‌ನಲ್ಲಿ ಕೊನೆಗೊಂಡ ಐಸಿಸಿ ಮಂಡಳಿ ಸಭೆಯಲ್ಲಿ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಆಟದ ವೇಗವನ್ನು ಹೆಚ್ಚಿಸಲು ಐಸಿಸಿ ಹೊಸ ನಿಯಮವನ್ನು ತರಲಾಗಿದ್ದು, ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲಾಗುತ್ತಿದೆ. ಈ ನಿಯಮವನ್ನು ಪ್ರಾಯೋಗಿಕವಾಗಿ ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಜಾರಿಗೊಳಿಸಲಾಗುವುದು. ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಈ ನಿಯಮಗಳನ್ನು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ. ಈ ನಿಯಮವನ್ನು ಪ್ರಾಯೋಗಿಕವಾಗಿ ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಜಾರಿಗೊಳಿಸಲಾಗುವುದು.

ಇದನ್ನೂ ಓದಿ : ಐಸಿಸಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋತರೂ ಹಣದ ಹೊಳೆ – ಎಷ್ಟು ಕೋಟಿಯ ಬ್ಯುಸಿನೆಸ್ ಗೊತ್ತಾ?

ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಪುರುಷರ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲು CEC ಸಮ್ಮತಿಸಿದೆ. ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಈ ನಿಯಮವನ್ನು ಬಳಸಲಾಗುತ್ತದೆ. ನಿಯಮಗಳ ಪ್ರಕಾರ, ಬೌಲಿಂಗ್ ತಂಡವು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಅನ್ನು ಬೌಲ್ ಮಾಡಲು ಸಿದ್ಧವಾಗಿರಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಹಾಗೂ ಈ ರೀತಯ ಘಟನೆ ಇನ್ನಿಂಗ್ಸ್‌ನಲ್ಲಿ ಮೂರನೇ ಬಾರಿಗೆ ಸಂಭವಿಸಿದರೆ ಬೌಲಿಂಗ್ ತಂಡಕ್ಕೆ 5 ರನ್‌ಗಳ ದಂಡವನ್ನು ವಿಧಿಸಲಾಗುತ್ತದೆ.

ಏಕದಿನ ಪಂದ್ಯಗಳಲ್ಲಿ, ಬೌಲಿಂಗ್ ತಂಡಕ್ಕೆ 50 ಓವರ್‌ಗಳನ್ನು ಬೌಲ್ ಮಾಡಲು 3.5 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ ಟಿ20ಯಲ್ಲಿ ತಂಡಕ್ಕೆ 20 ಓವರ್‌ಗಳನ್ನು ಬೌಲ್ ಮಾಡಲು ಒಂದು ಗಂಟೆ 25 ನಿಮಿಷಗಳು ಸಿಗುತ್ತವೆ.  ಯಾವುದೇ ತಂಡವು ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ, ನಿಧಾನಗತಿಯ ಓವರ್‌ರೇಟ್‌ನ ನಿಯಮದಿಂದಾಗಿ, ತಂಡವು ಉಳಿದ ಓವರ್‌ಗಳಲ್ಲಿ 30 ಯಾರ್ಡ್ ವೃತ್ತದೊಳಗೆ ಮತ್ತೊಬ್ಬ ಆಟಗಾರನನ್ನು ಇರಿಸಬೇಕಾಗುತ್ತದೆ. ಹಾಗೆಯೇ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ ದಂಡ ವಿಧಿಸುವ ಅವಕಾಶವೂ ಇದೆ. ಈಗ ಸ್ಟಾಪ್ ಕ್ಲಾಕ್ ನಿಯಮದಿಂದ ಬ್ಯಾಟಿಂಗ್ ತಂಡಕ್ಕೆ ಲಾಭವಾಗಲಿದೆ. ಯಾವುದೇ ತಂಡವು ಹಿಂದಿನ ಓವರ್ ಮುಗಿದ ನಂತರ ಮುಂದಿನ ಓವರ್ ಅನ್ನು ಬೌಲ್ ಮಾಡಲು ಎರಡು ಬಾರಿ 60 ಸೆಕೆಂಡುಗಳಿಗಿಂತ ಹೆಚ್ಚು ತೆಗೆದುಕೊಂಡರೆ, ಬ್ಯಾಟಿಂಗ್ ತಂಡಕ್ಕೆ 5 ರನ್​ಗಳನ್ನು ನೀಡಲಾಗುತ್ತದೆ.

Shantha Kumari