ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿ ನೆರವು – ಭಾರತದ ಘೋಷಣೆಗೆ ತಾಲಿಬಾನಿಗಳು ಹೇಳಿದ್ದೇನು?

ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿ ನೆರವು – ಭಾರತದ ಘೋಷಣೆಗೆ ತಾಲಿಬಾನಿಗಳು ಹೇಳಿದ್ದೇನು?

ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಭಾರತ 20 ಸಾವಿರ ಮೆಟ್ರಿಕ್ ಟನ್ ಗೋಧಿ ಸರಬರಾಜು ಮಾಡುವುದಾಗಿ ಘೋಷಿಸಿದೆ. ಇರಾನ್‌ನ ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಒಳಗೊಂಡಿರುವ ಮಾನವೀಯ ನೆರವು ನೀಡುವುದಾಗಿ ತಿಳಿಸಿದೆ. ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ಕುರಿತಾದ ಭಾರತ-ಮಧ್ಯ ಏಷ್ಯಾ ಜಂಟಿ ಕಾರ್ಯಕಾರಿ ಗುಂಪಿನ ಮೊದಲ ಸಭೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯ್ತು. ಸಭೆಯಲ್ಲಿ ಅಧಿಕಾರಿಗಳು ಭಯೋತ್ಪಾದನೆ, ಉಗ್ರವಾದ, ಮೂಲಭೂತವಾದ ಮತ್ತು ಮಾದಕವಸ್ತು ಕಳ್ಳಸಾಗಣೆಯ ಪ್ರಾದೇಶಿಕ ಬೆದರಿಕೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ : ಮಿಲಿಯನ್ ಗಟ್ಟಲೆ ಕುಸಿಯಿತು ಜನನ ಪ್ರಮಾಣ – ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಜಪಾನ್?

ಡಿಸೆಂಬರ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವ ತಾಲಿಬಾನ್ ನಿರ್ಧಾರವನ್ನು ಭಾರತ ಸೇರಿದಂತೆ ಇತರ ಹಲವಾರು ದೇಶಗಳೊಂದಿಗೆ ಟೀಕಿಸಿದೆ. ಸಭೆಯಲ್ಲಿ ಅಧಿಕಾರಿಗಳು ಭಯೋತ್ಪಾದನೆ, ಉಗ್ರವಾದ, ಮೂಲಭೂತವಾದ ಮತ್ತು ಮಾದಕವಸ್ತು ಕಳ್ಳಸಾಗಣೆಯ ಪ್ರಾದೇಶಿಕ ಬೆದರಿಕೆಗಳ ಬಗ್ಗೆಯೂ ಚರ್ಚಿಸಿದರು. ಈ ಬೆದರಿಕೆಗಳನ್ನು ಎದುರಿಸಲು ಪ್ರಯತ್ನಗಳನ್ನು ಸಂಘಟಿಸುವ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು.

ಭಾರತದ ನೆರವನ್ನ ಸ್ವಾಗತಿಸಿರುವ ತಾಲಿಬಾನಿಗಳು, ಚಾಬಹಾರ್ ಬಂದರಿನ ಮೂಲಕ ಆಫ್ಘನ್ ಜನರಿಗೆ 20,000 ಮೆಟ್ರಿಕ್ ಟನ್ ಗೋಧಿಯನ್ನು ತಲುಪಿಸುವುದನ್ನು ನಾವು ಬಹಳವಾಗಿ ಪ್ರಶಂಸಿಸುತ್ತೇವೆ. ಇಂತಹ ಮಾನವೀಯ ಕ್ರಮಗಳು ಉಭಯ ದೇಶಗಳ ನಡುವೆ ವಿಶ್ವಾಸವನ್ನು ಹೆಚ್ಚಿಸುತ್ತವೆ, ಇದು ಪರಸ್ಪರ ಸಕಾರಾತ್ಮಕ ಸಂಬಂಧಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

suddiyaana