ಆನೆ ಬಂತೊಂದಾನೆ.. ಎಲೆಕ್ಷ್ರಿಕ್ ಆನೆ – ದೇವರಿಗೆ ರೋಬೋಟ್ ಆನೆಯಿಂದ ಪೂಜೆ!

ಆನೆ ಬಂತೊಂದಾನೆ.. ಎಲೆಕ್ಷ್ರಿಕ್ ಆನೆ – ದೇವರಿಗೆ ರೋಬೋಟ್ ಆನೆಯಿಂದ ಪೂಜೆ!

ತ್ರಿಶೂರ್: ಅನೇಕ ದೇವಾಲಯಗಳಲ್ಲಿ ಆನೆಗಳನ್ನು ಸಾಕುತ್ತಾರೆ. ದೇವಸ್ಥಾನಗಳಲ್ಲಿ ಸಾಕಿದ ಆನೆಗಳನ್ನು ಪೂಜಾ ಕಾರ್ಯಕ್ಕೆ, ಮೆರವಣಿಗೆಗೆ ಕರೆದುಕೊಂಡು ಬರುತ್ತಾರೆ. ಅಲ್ಲದೇ ಅನೇಕ ದೇವಾಲಯಗಳಲ್ಲಿ ಆನೆಗಳು ದೇವರಿಗೆ ಕೈ ಮುಗಿಯುವುದು, ಡ್ಯಾನ್ಸ್ ಮಾಡಲು ತರಬೇತಿ ನೀಡುವುದನ್ನು ಕೇಳಿರುತ್ತೇವೆ. ಈ ಆನೆಗಳು ಪೂಜೆ ವೇಳೆ ದೇವರಿಗೆ ನಮಸ್ಕಾರ ಮಾಡುವುದನ್ನು ನೋಡಿರುತ್ತೇವೆ. ಆದರೆ ಕೇರಳದ ದೇವಾಲಯವೊಂದರಲ್ಲಿ ದೇವರಿಗೆ ಪೂಜೆ ಸಲ್ಲಿಸಲು ಎಲೆಕ್ಟ್ರಿಕ್ ಆನೆಯೊಂದನ್ನು ನಿಯೋಜಿಸಲಾಗಿದ್ಯಂತೆ!

ಹೌದು, ಇದೇ ಮೊದಲ ಬಾರಿಗೆ ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಅರ್ಚಕರ ಬದಲು ಎಲೆಕ್ಷ್ರಿಕ್ ಆನೆಯನ್ನು ಬಳಸಲಾಗುತ್ತಿದೆಯಂತೆ. ಈ ಎಲೆಕ್ಟ್ರಿಕ್ ಆನೆಯನ್ನು ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಸಂಸ್ಥೆಯು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಒಂದು ನಿಮಿಷದಲ್ಲೇ ಒಂದು ಸಾವಿರ ಚಪ್ಪಾಳೆ – ಯುವಕನಿಂದ ಸೃಷ್ಟಿಯಾಯ್ತು ಹೊಸ ದಾಖಲೆ

ಈ ಆನೆ ನೋಡಲು ಜೀವಂತ ಆನೆಯಂತೆ ಕಾಣುತ್ತದೆ. ಇದಕ್ಕೆ ಇರಿಂಜದಪಿಲ್ಲಿ ರಾಮನ್ ಎಂಬ ಹೆಸರನ್ನು ಇಡಲಾಗಿದೆ. ಈ ಎಲೆಕ್ಟ್ರಿಕ್ ಆನೆಯು ಹತ್ತುವರೆ ಅಡಿ ಎತ್ತರ ಹಾಗೂ 800 ಕೆಜಿ ತೂಕವಿದೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್‌ ಮೂಲಕ ಕೆಲಸ ಮಾಡುತ್ತದೆ.

ಆನೆಗಳನ್ನು ಅಥವಾ ಇತರ ಯಾವುದೇ ಪ್ರಾಣಿಗಳನ್ನು ಆಚರಣೆಗಳು, ಉತ್ಸವಗಳು ಅಥವಾ ಯಾವುದೇ ಉದ್ದೇಶಕ್ಕಾಗಿ ಎಂದಿಗೂ ಇರಿಸಬೇಡಿ ಅಥವಾ ಬಾಡಿಗೆಗೆ ತೆಗೆದುಕೊಳ್ಳಬೇಡಿ ಎಂದು ದೇವಸ್ಥಾನ ಕರೆ ನೀಡಿತ್ತು. ಇದನ್ನು  ಅನುಸರಿಸಿದ ಪೇಟಾ ಸಂಸ್ಥೆ ರೋಬೋಟಿಕ್ ಆನೆಯನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದೆ.

ಭಾನುವಾರ, ಇರಿಂಜದಪ್ಪಿಲ್ಲಿ ರಾಮನ್ ಅವರ ‘ನಡಾಯಿರುತಲ್’ (ದೇವರಿಗೆ ಆನೆಗಳನ್ನು ಅರ್ಪಿಸುವ ಸಮಾರಂಭ) ನಡೆಸಲಾಯಿತು. ಪೇಟಾ ಸಂಸ್ಥೆಯು ಆನೆಗಳನ್ನು ಬಳಸುವ ಎಲ್ಲಾ ಸ್ಥಳಗಳು ಮತ್ತು ಕಾರ್ಯಕ್ರಮಗಳನ್ನು ಜೀವಂತ ಆನೆಗಳ ಬದಲಿಗೆ ಈ ಯಾಂತ್ರಿಕ ಆನೆಗಳನ್ನು ಬಳಸಲು ಕೋರಿದೆ.

suddiyaana