ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ! – ದೇಶದಲ್ಲೇ ಮೊದಲ ಪ್ರಕರಣ

ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ! – ದೇಶದಲ್ಲೇ ಮೊದಲ ಪ್ರಕರಣ

ಕೋಝಿಕ್ಕೋಡ್: ಕೆಲದಿನಗಳ ಹಿಂದಷ್ಟೇ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದ ತೃತೀಯಲಿಂಗಿ ಮಗುವಿಗೆ ಜನ್ಮ ನೀಡಿದ್ದಾರೆ. ಕೇರಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ದೇಶದಲ್ಲೇ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ.

ಜೀಯಾ ಪಾವಲ್ ಹಾಗೂ ಜಹ್ಹಾದ್ ಇಬ್ಬರೂ ಕೆಲದಿನಗಳ ಹಿಂದೆ ಮಗುವಿನ ನಿರೀಕ್ಷೆಯಲ್ಲಿದ್ದೆವು ಎಂದು ಘೋಷಿಸಿಕೊಂಡಿದ್ದರು. ಆದರೆ ಇವರಿಬ್ಬರೂ ತೃತೀಯಲಿಂಗಿಗಳಾಗಿದ್ದರಿಂದ ಹೆಚ್ಚು ಸುದ್ದಿಯಾಗಿತ್ತು. ಬುಧವಾರ ಬೆಳಗ್ಗೆ 9.30 ರ ಸುಮಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗು ಜನಿಸಿದೆ. ಮಗು ಮತ್ತು ಮಗುವಿಗೆ ಜನ್ಮ ನೀಡಿದ ಜಹ್ಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪಾವಲ್ ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಕ್ಕೆ ತೆರಳುವವರಿಗೆ ಗುಡ್ ನ್ಯೂಸ್ – ಇನ್ಮುಂದೆ ಕರೆನ್ಸಿ ಚಿಂತೆ ಇರಲ್ಲ!

ಪಾವಲ್ ನವಜಾತ ಶಿಶುವಿನ ಲಿಂಗದ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮಗುವಿನ ಲಿಂಗದ ಗುರುತನ್ನು ಸಾರ್ವಜನಿಕಗೊಳಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಜಿಯಾ ಪಾವಲ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಜಹ್ಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು. ‘ನಾವು ನನ್ನ ತಾಯಿಯಾಗುವ ಕನಸು ಮತ್ತು ತಂದೆಯಾಗುವ ಅವರ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ವಯಸ್ಸಿನ ಭ್ರೂಣವು ಈಗ ಜಹ್ಹಾದ್‌ನ ಹೊಟ್ಟೆಯಲ್ಲಿದೆ… ನಮಗೆ ತಿಳಿದುಬಂದ ಪ್ರಕಾರ, ಇದು ಭಾರತದಲ್ಲಿ ಮೊದಲ ಟ್ರಾನ್ಸ್ ಜೆಂಡರ್ ಗರ್ಭಧಾರಣೆ…” ಎಂದು ಪಾವಲ್ ಪೋಸ್ಟ್‌ ಮಾಡಿದ್ದರು. ಪಾವಲ್ ಮತ್ತು ಜಹ್ಹಾದ್ ಕಳೆದ ಮೂರು ವರ್ಷಗಳಿಂದ ಜೊತೆಯಲ್ಲಿದ್ದಾರೆ.

 

View this post on Instagram

 

A post shared by Ziya Paval (@paval19)

suddiyaana