ಬಿಡುಗಡೆಗೆ ಸಜ್ಜಾಗಿದ್ದ ಇಮ್ರಾನ್‌ ಖಾನ್‌ಗೆ ಬಿಗ್‌ ಶಾಕ್‌! – ಮತ್ತೊಂದು ಕೇಸ್‌ನಲ್ಲಿ ಜೈಲಿನಲ್ಲೇ ಬಂಧಿಯಾದ ಪಾಕ್ ಮಾಜಿ ಪ್ರಧಾನಿ‌

ಬಿಡುಗಡೆಗೆ ಸಜ್ಜಾಗಿದ್ದ ಇಮ್ರಾನ್‌ ಖಾನ್‌ಗೆ ಬಿಗ್‌ ಶಾಕ್‌! – ಮತ್ತೊಂದು ಕೇಸ್‌ನಲ್ಲಿ ಜೈಲಿನಲ್ಲೇ ಬಂಧಿಯಾದ ಪಾಕ್ ಮಾಜಿ ಪ್ರಧಾನಿ‌

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ತೋಷಖಾನಾ (ಉಡುಗೊರೆ) ಭ್ರಷ್ಟಾಚಾರ ಪ್ರಕರಣದಲ್ಲಿ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಅಮಾನತು ಮಾಡಿ ತಕ್ಷಣವೇ ಇಮ್ರಾನ್‌ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಆದರೆ ಬಿಡುಗಡೆ ಸಜ್ಜಾಗಿದ್ದ ಇಮ್ರಾನ್‌ರನ್ನು ಮತ್ತೊಂದು ಕೇಸ್‌ನಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ಇಮ್ರಾನ್ ಖಾನ್​ಗೆ ಬಿಗ್ ರಿಲೀಫ್ – ಇಸ್ಲಾಮಾಬಾದ್ ಹೈಕೋರ್ಟ್ ನಿಂದ ಜಾಮೀನು

2018-2022ರ ಅಧಿಕಾರ ಅವಧಿಯಲ್ಲಿ ಇಮ್ರಾನ್ ಖಾನ್ ಅವರು ಮತ್ತು ಅವರ ಕುಟುಂಬಸ್ಥ್ಥರು ವಿದೇಶಗಳಿಂದ ಸಿಕ್ಕ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಸಾಭೀತಾದ ಹಿನ್ನೆಲೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಈ ಶಿಕ್ಷೆಯನ್ನು ಪ್ರಶ್ನಿಸಿ ಇಮ್ರಾನ್‌ ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ನೀಡಿದ ಹೈಕೋರ್ಟ್‌, ವಿಚಾರಣೆ ವೇಳೆ ಅಧೀನ ನ್ಯಾಯಾಲಯ ಲೋಪ ಎಸಗಿದೆ ಎಂದು ಹೇಳಿತು. ಜೊತೆಗೆ ಶಿಕ್ಷೆ ಅಮಾನತು ಮಾಡಿ, ಇಮ್ರಾನ್‌ ಬಿಡುಗಡೆಗೆ ಆದೇಶಿಸಿತು. ಹೈಕೋರ್ಟ್‌ ಆದೇಶದಿಂದ 5 ವರ್ಷಗಳ ಕಾಲ ರಾಜಕೀಯದಲ್ಲಿ ಭಾಗವಹಿಸದಂತೆ ಮತ್ತು ಚುನಾವಣೆಗೆ ಸ್ಪರ್ಧಿಬಾರದು ಎಂದು ಕೋರ್ಟ್‌ ಆದೇಶ ನೀಡಿತ್ತು. ಕೋರ್ಟ್‌ ಆದೇಶದಿಂದಾಗಿ ಇಮ್ರಾನ್‌ ಖಾನ್‌ಗೆ ಕೊಂಚ ರಿಲೀಫ್‌ ಸಿಕ್ಕಿತ್ತು. ಆದರೆ ಈ ತೀರ್ಪಿನ ಬೆನ್ನಲ್ಲೇ ತಮ್ಮ ಅಧಿಕಾರಾವಧಿಯಲ್ಲಿ ವಿದೇಶಗಳಿಂದ ಪಡೆದ ಠೇವಣಿಯನ್ನು ಮುಚ್ಚಿಟ್ಟು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದ ಆರೋಪದಡಿ ಅವರನ್ನು ಮತ್ತೆ ಬಂಧಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು ಆ.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana