ಹಣೆಗೆ ಸಿಂಧೂರ ಇಡುವುದರಿಂದ ಏನೆಲ್ಲಾ ಪ್ರಯೋಜನ? – ತಿಲಕ ಧಾರ್ಮಿಕ ಸಂಕೇತವಷ್ಟೇ ಅಲ್ಲ, ಆರೋಗ್ಯವೂ ಅಡಗಿದೆ!

ಹಣೆಗೆ ಸಿಂಧೂರ ಇಡುವುದರಿಂದ ಏನೆಲ್ಲಾ ಪ್ರಯೋಜನ? – ತಿಲಕ ಧಾರ್ಮಿಕ ಸಂಕೇತವಷ್ಟೇ ಅಲ್ಲ, ಆರೋಗ್ಯವೂ ಅಡಗಿದೆ!

ನಮ್ಮ ಪೂರ್ವಜರು ಯಾವುದೇ ಆಚರಣೆ ಮಾಡಿದ್ರೂ ಅದ್ರಲ್ಲೊಂದು ಸೈಂಟಿಫಿಕ್ ರೀಸನ್ ಇರುತ್ತೆ. ಅದ್ರಲ್ಲಿ ಹಣೆಗೆ ಸಿಂಧೂರ ಇಡೋದು ಕೂಡ ಒಂದು. ಸಿಂಧೂರ ಕೇವಲ ಧಾರ್ಮಿಕ ಸಂಕೇತವಾಗಿರದೆ ವೈಜ್ಞಾನಿಕ ಮಹತ್ವವನ್ನೂ ಪಡೆದಿದೆ.

ಇದನ್ನೂ ಓದಿ : ಕಣ್ಣು ನೋವಿದ್ರೆ ನಿರ್ಲಕ್ಷ್ಯ ಬೇಡ! – ಕುರುಡರನ್ನಾಗಿಸುತ್ತೆ ಗ್ಲುಕೋಮಾ ಸಮಸ್ಯೆ!

ಸಿಂಧೂರವನ್ನಿಡುವ ಸ್ಥಳವು ಮೆದುಳಿನ ಪ್ರಮುಖ ಗ್ರಂಥಿಯಾಗಿದ್ದು, ಇದನ್ನು ಬ್ರಹ್ಮರಂಧ್ರವೆಂದು ಕರೆಯಲಾಗುತ್ತದೆ. ಮಹಿಳೆಯರು ಸಿಂಧೂರವನ್ನು ಹಚ್ಚುವುದರಿಂದ ಅವರ ಮಾನಸಿಕ ಒತ್ತಡವು ದೂರಾಗುತ್ತದೆ, ಅವರ ಮೆದುಳು ಸದಾಕಾಲ ಪ್ರಜ್ಞಾಪೂರ್ವಕವಾಗಿರುತ್ತದೆ. ನಿದ್ರಾಹೀನತೆ, ತಲೆನೋವು, ಮಾನಸಿಕ ಅಶಾಂತಿ ಮತ್ತು ಮುಖದ ಸುಕ್ಕು ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ತೊಂದರೆಯನ್ನು ಮತ್ತು ರಕ್ತದೊತ್ತಡ ಸಮಸ್ಯೆಯನ್ನು ಕೂಡ ದೂರಾಗಿಸುತ್ತದೆಯಂತೆ. ಅಲ್ಲದೆ ಅರಿಶಿನದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳೂ ಇವೆ. ಒತ್ತಡ ತಗ್ಗಿಸುವ, ಆತಂಕ ನಿವಾರಣೆ ಮತ್ತು ಖಿನ್ನತೆ ದೂರ ಮಾಡುವ ಗುಣಗಳು ಇವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಹಣೆಗೆ ಕುಂಕುಮ ಇಡೋದ್ರಿಂದ ದಂಪತಿ ನಡುವಿನ ಬಾಂಧವ್ಯ ಕೂಡ ಉತ್ತಮವಾಗುತ್ತದೆ. ಇನ್ನು ಶ್ರೀಗಂಧ ಇಡೋದ್ರಲ್ಲೂ ಕೂಡ ಲಾಭಗಳಿವೆ. ಇದು ಉರಿಯೂತ, ನಂಜುನಿರೋಧಕ ಹಾಗೂ ಬ್ಯಾಕ್ಟೀರಿಯಾಗಳನ್ನ ತಗ್ಗಿಸುವ ಗುಣ ಹೊಂದಿದೆ.

Shantha Kumari