ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಚಪ್ಪಲಿ ಧರಿಸಿದ್ರೆ ಒಳ್ಳೆಯದು ಗೊತ್ತಾ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ನವಗ್ರಹಗಳಿಗೆ ಸಂಬಂಧಿಸಿವೆ. ಅದೇ ರೀತಿ, ಜಾತಕದ ಎಂಟನೇ ಮನೆಯು ಪಾದಗಳಿಗೆ ಸಂಬಂಧಿಸಿದ್ದು, ಇದರ ಪ್ರಕಾರ, ನಾವು ಧರಿಸುವ ಶೂ ಮತ್ತು ಚಪ್ಪಲಿಗಳು ಚಪ್ಪಲಿಗಳು ಸಹ ನಮ್ಮ ಸಂತೋಷ ಅಥವಾ ದುಃಖಕ್ಕೆ ಕಾರಣವಾಗಬಹುದು. ಹಾಗಿದ್ರೆ ಯಾವ ಬಣ್ಣದ ಚಪ್ಪಲಿ ಭರಿಸಿದ್ರೆ ಏನು ಲಾಭ ಅನ್ನೋದ್ದನ್ನ ನೋಡೋಣ ಬನ್ನಿ..
ವಾಸ್ತು ಶಾಸ್ತ್ರವು ಕೆಲವು ಬಣ್ಣಗಳನ್ನು ಪಾದರಕ್ಷೆಗಳಿಗೆ ಹೆಚ್ಚು ಸೂಕ್ತವೆಂದು ಪರಿಗಣಿಸುತ್ತದೆ. ಕಪ್ಪು ಬಣ್ಣವು ಶನಿಯ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕ ಸ್ಥಿರತೆಯನ್ನು ನೀಡುತ್ತದೆ. ಕಂದು ಬಣ್ಣವು ಸ್ಥಿರತೆ ಮತ್ತು ಸುರಕ್ಷತೆಯನ್ನು ಬಲಪಡಿಸುತ್ತದೆ. ಬಿಳಿ ಬಣ್ಣವು ಮನಸ್ಸಿಗೆ ಶುದ್ಧತೆ ಮತ್ತು ಶಾಂತಿಯನ್ನು ನೀಡುತ್ತದೆ. ಈ ಬಣ್ಣಗಳು ಜೀವನದಲ್ಲಿ ಸಕಾರಾತ್ಮಕ ಅಲೆಗಳನ್ನು ಸೃಷ್ಟಿಸುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ನೀವು ಪ್ರತಿದಿನ ಶೂ ಧರಿಸುತ್ತೀರಾ? – ಎಚ್ಚರ.. ಒಂದು ತಪ್ಪು.. ನಿಮ್ಮ ಆರೋಗ್ಯಕ್ಕೆ ಕುತ್ತು!
ಹಸಿರು ಬಣ್ಣದ ಪಾದರಕ್ಷೆಗಳು ಬುಧನ ಪ್ರಾಬಲ್ಯವನ್ನು ದುರ್ಬಲಗೊಳಿಸುತ್ತವೆ ಎಂದು ಜ್ಯೋತಿಷ್ಯವು ಹೇಳುತ್ತದೆ. ಇದರಿಂದ ಮಾತು ಬಾರದಿರುವುದು, ಮಾನಸಿಕ ಕುಂಠಿತತೆ ಮತ್ತು ವ್ಯವಹಾರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಕೆಂಪು ಪಾದರಕ್ಷೆಗಳು ಮಂಗಳ ಗ್ರಹದ ಮಹಿಮೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಜಗಳಗಳು ಮತ್ತು ಹಠಾತ್ ಸಮಸ್ಯೆಗಳು ಸೃಷ್ಠಿಯಾಗುತ್ತದೆ. ಗುರುವಿನ ಸಂಕೇತವಾದ ಹಳದಿ ಬಣ್ಣವನ್ನು ಪಾದಗಳ ಮೇಲೆ ಧರಿಸುವುದರಿಂದ ಆರ್ಥಿಕ ನಷ್ಟ ಮತ್ತು ಕುಟುಂಬ ಕಲಹ ಉಂಟಾಗುತ್ತದೆ ಎಂಬ ಸಾಂಪ್ರದಾಯಿಕ ವ್ಯಾಖ್ಯಾನವೂ ಇದೆ.
ಪೂಜಾ ಸ್ಥಳಗಳಲ್ಲಿ ಶುದ್ಧತೆಯನ್ನು ಕಾಪಾಡಲು ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ತೆಗೆಯುವ ಸಂಪ್ರದಾಯವಿದೆ. ದೇವಾಲಯಗಳ ನೆಲದ ಮೇಲೆ ಬಲವಾದ ದೈವಿಕ ಅಲೆಗಳು ಚಲಿಸುತ್ತವೆ ಎಂಬ ಪ್ರತೀತಿಯಿದೆ. ಹೀಗಾಗಿ ನೀವು ನಿಮ್ಮ ಪಾದರಕ್ಷೆಗಳನ್ನು ತೆಗೆದರೆ, ಈ ಅಲೆಗಳು ಸ್ವಾಭಾವಿಕವಾಗಿ ನಿಮ್ಮ ದೇಹವನ್ನು ಪ್ರವೇಶಿಸುತ್ತವೆ. ಬರಿಗಾಲಿನಲ್ಲಿ ನಡೆಯುವುದರಿಂದ ದೇವರ ಕಡೆಗೆ ಭಕ್ತಿ ಮತ್ತು ನಮ್ರತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ನೋಡಿರಿ

