ಗೃಹಲಕ್ಷ್ಮೀ ಯೋಜನೆ ಜಾರಿ ಮತ್ತೆ ಮುಂದೂಡಿಕೆ! – ಉದ್ಘಾಟನಾ ಸ್ಥಳವನ್ನೂ ಬದಲಾವಣೆ ಮಾಡಿದ ಸರ್ಕಾರ  

ಗೃಹಲಕ್ಷ್ಮೀ ಯೋಜನೆ ಜಾರಿ ಮತ್ತೆ ಮುಂದೂಡಿಕೆ! – ಉದ್ಘಾಟನಾ ಸ್ಥಳವನ್ನೂ ಬದಲಾವಣೆ ಮಾಡಿದ ಸರ್ಕಾರ  

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆಯ ಚಾಲನೆ ದಿನಾಂಕ ಮುಂದೂಡಿಕೆಯಾಗುತ್ತಲೇ ಇದೆ. ಆಗಸ್ಟ್‌ 16 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಮತ್ತೆ ದಿನಾಂಕ ಹಾಗೂ ಸ್ಥಳವನ್ನು ಮುಂದೂಡಿದೆ.

ಇದನ್ನೂ ಓದಿ: ಪಕ್ಷ ಸಂಘಟನೆಗಷ್ಟೇ ನೆನಪಾಗುತ್ತಾರಾ ಬಿಎಸ್ ವೈ? – ‘ಆಪರೇಷನ್ ಹಸ್ತ’ ಶಮನಕ್ಕೆ ‘ರಾಜಾಹುಲಿ’ಯನ್ನ ಅಖಾಡಕ್ಕಿಳಿಸಿದ ಬಿಜೆಪಿ 

ಕಾಂಗ್ರೆಸ್‌ ಸರ್ಕಾರವನ್ನು ರಚಿಸಿ ಎರಡೇ ತಿಂಗಳಲ್ಲಿ ಮೂರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ನಾಲ್ಕನೇ ಗ್ಯಾರಂಟಿಯಾಗಿದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಯನ್ನು ಎರಡು ಬಾರಿ ಮುಂದೂಡಿಕೆ ಮಾಡಿದೆ. ಆಗಸ್ಟ್‌ 16 ರಂದು ಚಾಲನೆ ಸಿಗಬೇಕಿದ್ದ ಯೋಜನೆಯನ್ನು ಮತ್ತೆ ಮುಂದೂಡಿಕೆ ಮಾಡಿದ್ದು, ಆಗಸ್ಟ್‌ 30ಕ್ಕೆ ದಿನಾಂಕ ನಿಗದಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ತವರು ಜಿಲ್ಲೆಯಲ್ಲಿ ಉದ್ಘಾಟನೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಈಗ ಯೋಜನೆಯ ಉದ್ಘಾಟನಾ ದಿನಾಂಕವನ್ನು ಆ.30ಕ್ಕೆ ಮುಂದೂಡಿಕೆ ಮಾಡಿರುವುದರ ಜೊತೆಗೆ, ಉದ್ಘಾಟನಾ ಸ್ಥಳವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ನಿರ್ಧಾರ ಮಾಡಲಾಗಿದೆ.

suddiyaana