ಮಹಿಳೆಯರ ಆರ್ಥಿಕ ಸದೃಢತೆಗಾಗಿ ‘ಗೃಹಣಿ ಶಕ್ತಿ ಯೋಜನೆ’ ಜಾರಿ

ಮಹಿಳೆಯರ ಆರ್ಥಿಕ ಸದೃಢತೆಗಾಗಿ ‘ಗೃಹಣಿ ಶಕ್ತಿ ಯೋಜನೆ’ ಜಾರಿ

ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ರಾಜ್ಯ ಸರ್ಕಾರ ಗೃಹಣಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿ ಮಹಿಳಾ ಕೃಷಿಕರ ಆರ್ಥಿಕ ಸುಧಾರಣೆಗಾಗಿ ನಮ್ಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಸಹಾಯ ಧನವನ್ನು ಡಿ.ಬೊ.ಟಿ ಮೂಲಕ ನೀಡುತ್ತದೆ. ಮಹಿಳೆಯರು ಮನೆಯಲ್ಲಿಯೇ ಉದ್ಯಮ ಪ್ರಾರಂಭಿಸಲು ಈ ವರ್ಷದಿಂದ 1 ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಿದೆ.

ಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗಾಗಿ ಉಚಿತ್​ ಬಸ್​ ಪಾಸ್​ ನೀಡಲು ಉದ್ದೇಶಿಸಿದೆ. ಇದರಿಂದ ರಾಜ್ಯದ 30 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಇದಕ್ಕಾಗಿ 1 ಸಾವಿರ ಕೋಟಿ ರೂ. ಗಳನ್ನು ಒದಗಿಸಲಿದೆ.

suddiyaana