ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಶೀಘ್ರದಲ್ಲೇ ಆರಂಭ – ಹಳದಿ ಮಾರ್ಗದಲ್ಲಿ ‘ಎಐ’ ತಂತ್ರಜ್ಞಾನ ಅಳವಡಿಕೆ!

ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಶೀಘ್ರದಲ್ಲೇ ಆರಂಭ – ಹಳದಿ ಮಾರ್ಗದಲ್ಲಿ ‘ಎಐ’ ತಂತ್ರಜ್ಞಾನ ಅಳವಡಿಕೆ!

ನಮ್ಮ ಮೆಟ್ರೋ ಮಹಾನಗರಿಯಲ್ಲಿ ಬದುಕುತ್ತಿರುವ ಅದೆಷ್ಟೋ ಮಂದಿಯ ಮಂದಿಗೆ ನಿತ್ಯದ ಸಂಚಾರಿ ಸಾರಥಿ. ಮೆಟ್ರೋ ಮೂಲಕವೇ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಿಸುತ್ತಲೇ ಇದೆ. ಇದೀಗ ಬೆಂಗಳೂರಿನ ಆರ್‌ವಿ. ರಸ್ತೆ ಮತ್ತು ಬೊಮ್ಮಸಂದ್ರದವರೆಗೆ ಇರುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ  ಪ್ರಾಯೋಗಿಕ ಸಂಚಾರ ಇನ್ನೇನು ಶುರುವಾಗಲಿದೆ. ಇದೀಗ ಮಹತ್ವದ ಅಪ್ಡೇಟ್ ನೀಡಿರುವ BMRCL ಈ ಮಾರ್ಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮುಂದಾಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಶುರುವಾಯ್ತು ಕೌಂಟ್‌ಡೌನ್- ಮದುಮಗನ ತೂಕ ಮತ್ತೆ ಹೆಚ್ಚಳ ಆಗಿದ್ದು ಹೇಗೆ?

ಬೆಂಗಳೂರಿನಲ್ಲಿ ಈ ಹಳದಿ ರೇಖೆಯು ಪ್ರಮುಖ ಕಾರಿಡಾರ್ ಆಗಿದೆ. ಏಕೆಂದರೆ ಇದು ಐಟಿ ಕೇಂದ್ರಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಸಂಪರ್ಕಿಸುತ್ತದೆ. ಇಲ್ಲಿ ಇನ್ಫೋಸಿಸ್ ಮತ್ತು ಬಯೋಕಾನ್ ಪ್ರಮುಖ ಸಂಸ್ಥೆಗಳು ಇವೆ. ಹೀಗಾಗಿ ಹಳದಿ ಮಾರ್ಗದಲ್ಲಿ ಟ್ರ್ಯಾಕ್‌ಗಳನ್ನು ಮೇಲ್ವಿಚಾರಣೆ ಮಾಡಲು ಬೆಂಗಳೂರು ಮೆಟ್ರೋ ಕೃತಕ ಬುದ್ಧಿಮತ್ತೆಯನ್ನು (AI) ಅಳವಡಿಸಿಕೊಳ್ಳಲು ಸಜ್ಜಾಗಿದೆ.

ಈ ಕುರಿತು ವರದಿ ಮಾಡಿರುವ ಮನಿ ಕಂಟ್ರೋಲ್‌ ವರದಿಯ ಪ್ರಕಾರ, ಆದಾಯ ಸೇವೆಯನ್ನು ಪ್ರಾರಂಭಿಸುವ ಮೊದಲು, ನಾವು ಹಳಿ ಮತ್ತು ಮೂರನೇ ರೈಲು ನಿರ್ವಹಣಾ ಸಿಬ್ಬಂದಿಯೊಂದಿಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ. ಇದೆಲ್ಲ ಟ್ರ್ಯಾಕ್ ಮಾಡಲು AI (ಆರ್ಟಿಫಿಸಿಯಲ್) ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲಾ ಅಡೆತಡೆಗಳು ಮತ್ತು ಸಂಭಾವ್ಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸದ್ಯ ಕಡಿಮೆ ವೇಗದಲ್ಲಿ ರೈಲುಗಳನ್ನು ಕಾರ್ಯ ನಿರ್ವಹಿಸಲಿದ್ದೇವೆ. ಮೇಲ್ವಿಚಾರಣಾ ಪ್ರಕ್ರಿಯೆಯು ಮುಖ್ಯವಾಗಿ ಕ್ಯಾಮರಾ ಆಧಾರಿತ ವ್ಯವಸ್ಥೆಯನ್ನು ಅವಲಂಬಿಸಿದೆ, ಟ್ರ್ಯಾಕ್ ಚಿತ್ರಗಳನ್ನು ಸರ್ವರ್‌ಗೆ ರವಾನಿಸುತ್ತದೆ. ಜತೆಗೆ AI ಸಹ ಎಚ್ಚರಿಕೆ ನೀಡಲಿದೆ ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್ ಯಶವಂತ್ ಚವಾಣ್ ತಿಳಿಸಿದರು.

Shwetha M